ಮೈಸೂರು : ನಿನ್ನೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಅಹಂ ಇದೆ ಅವರ ಗರ್ಭಭಂಗ ಮಾಡುತ್ತೇನೆ ಎಂದು ವಾಗ್ದಾಳಿ ನಡೆಸಿದರು. ಅದಕ್ಕೆ ಇಂದುಸಿಎಂ ಸಿದ್ದರಾಮಯ್ಯ ನನಗೆ ಗರ್ವನೇ ಇಲ್ಲ ಅವರೇನು ನನ್ನ ಗರ್ವಭಂಗ ಮಾಡುವುದು ಎಂದು ಎಚ್ ಡಿ ದೇವೇಗೌಡ ಅವರ ಹೇಳಿಕೆಗೆ ತಿರುಗೇಟು ನೀಡಿದರು.
BREAKING : ಮಾರ್ಚ್’ನಲ್ಲಿ 1.78 ಲಕ್ಷ ಕೋಟಿ ‘GST ಸಂಗ್ರಹ’ : ಇದುವರೆಗಿನ 2ನೇ ಅತ್ಯಧಿಕ ಮೊತ್ತ
ಮೈಸೂರಿನ ವರುಣ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ನನ್ನ ಗರ್ವ ಭಂಗ ಮಾಡ್ತೀನಿ ಅಂತ ಎಚ್ ಡಿ ದೇವೇಗೌಡರು ಹೇಳುತ್ತಾರೆ. ಕೋಮುವಾದಿ ಪಕ್ಷ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿ ಕೊಂಡಿದೆ. ಬಿಜೆಪಿ ಕೋಮುವಾದಿ ಪಕ್ಷ ಅಂತ ಹೇಳಿದ್ದು ಯಾರು? ಇದನ್ನು ಹೇಳಿದರೆ ಸಿದ್ದರಾಮಯ್ಯಗೆ ಗರ್ವ ಅಂತ ಹೇಳುತ್ತಾರೆ, ಸಿದ್ದರಾಮಯ್ಯ ಗರ್ವಭಂಗ ಮಾಡುತ್ತೇನೆ ಅಂತಾರೆ ನನಗೆ ಗರ್ವ ಇದ್ದರೆ ಅಲ್ವಾ ಭಂಗ ಮಾಡೋದು ಎಂದು ತಿರುಗೇಟು ನೀಡಿದರು.
BREAKING : ತಿಂಗಳ ಮೊದಲ ದಿನವೇ ‘ಷೇರು ಮಾರುಕಟ್ಟೆ’ ಅದ್ಭುತ ಜಿಗಿತ ; ಹೂಡಿಕೆದಾರರಿಗೆ ‘6.50 ಲಕ್ಷ ಕೋಟಿ’ ಲಾಭ
ಇದೆ HD ದೇವೇಗೌಡರು ಬಿಜೆಪಿ ಒಂದು ಕೋಮುವಾದಿ ಪಕ್ಷ.ಯಾವ ಕಾರಣಕ್ಕೂ ಬಿಜೆಪಿಗೆ ಸೇರುವುದಿಲ್ಲ. ನಾನೇನಾದರೂ ಮುಂದಿನ ಜನ್ಮ ಅಂತ ಇದ್ದರೆ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ದೇವೇಗೌಡರು ಹೇಳಿದ್ದರು. ಇದನ್ನ ಹೇಳಿದರೆ ಸಿದ್ದರಾಮಯ್ಯನಿಗೆ ಗರ್ವ ಬರುತ್ತದೆ. ಶಪಥ ಮಾಡಿ ಹೇಳುತ್ತೇನೆ ಅವರ ಗರ್ವ ಭಂಗವನ್ನ ಮಾಡುತ್ತೇನೆ ಅಂತ ಹೇಳಿದ್ದಾರೆ.ಆದರೆ ನನಗೆ ಗರ್ವನೇ ಇಲ್ಲ ಆದರೆ ಭಂಗ ಎಲ್ಲಿ ಮಾಡ್ತಾರೆ ಎಂದು ತಿರುಗೇಟು ನೀಡಿದರು.