ದಾವಣಗೆರೆ: ನನಗೆ ಕಾಂಗ್ರೆಸ್ ಬಿಟ್ಟಿದ್ದಕ್ಕೆ ಯಾವುದೇ ಪಾಪ ಪ್ರಜ್ಞೆ ಕಾಡ್ತಿಲ್ಲ. ಮತ್ತೆ ಬಿಜೆಪಿ ಸೇರಿದ್ದು ಖುಷಿಯಾಗಿದೆ ಎಂಬುದಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿ ಮತ್ತೆ ಸೇರಿದ್ದು ಖುಷಿಯಾಗಿದೆ. ಪ್ರಧಾನಿ ಮೋದಿ ಹತ್ತು ವರ್ಷ ಉತ್ತಮ ಸರ್ಕಾರ ಕೊಟ್ಟಿದ್ದಾರೆ. ಮತ್ತೊಮ್ಮೆ ಅವರು ಪ್ರಧಾನ ಮಂತ್ರಿಯಾಗಬೇಕೆನ್ನುವ ಬಯಕೆ ಇದೆ. ಅದಕ್ಕೆ ಎಲ್ಲರೂ ಕೈ ಜೋಡಿಸಬೇಕು. ಅದರಲ್ಲಿ ನಮ್ಮದು ಅಳಿಲು ಸೇವೆ ಇರಲಿ ಎಂಬ ಉದ್ದೇಶದಿಂದ ಪಾರ್ಟಿ ಸೇರಿದ್ದೇನೆ ಎಂದರು.
ಲೋಕಸಭೆಗೆ ನಿಲ್ಲಲು ಕ್ಷೇತ್ರ ಹಂಚಿಕೆ ವಿಚಾರವಾಗಿ ಮಾತನಾಡಿದಂತ ಅವರು, ಕೇಂದ್ರದ ವರಿಷ್ಠರು ಏನು ನಿರ್ದೇಶನ ಮಾಡುತ್ತಾರೆ ನೋಡಬೇಕು. ಶೆಟ್ಟರೆ ಈ ಜವಾಬ್ದಾರಿ ಮಾಡಿ ಎಂದ್ರೆ ಅದನ್ನೇ ಮಾಡುತ್ತೇನೆ ಎಂದರು.
ಲಕ್ಷ್ಮಣ ಸವಧಿ ಏನು ಮಾಡುತ್ತಾರೆ ಗೊತ್ತಿಲ್ಲ, ಅವರು ನನ್ನ ಸಂಪರ್ಕದಲ್ಲಿಲ್ಲ. ಕಾಂಗ್ರೆಸ್ ಬಿಟ್ಟಿದ್ದು ನನಗೆ ಯಾವುದೇ ಪಾಪ ಪ್ರಜ್ಞೆ ಕಾಡುತ್ತಿಲ್ಲ. ಶಾಮನೂರು ಶಿವಶಂಕರಪ್ಪ ರಾಘವೇಂದ್ರ ಗೆಲ್ಲಲಿ ಅಂತ ಹೇಳಿದ್ದು ಒಳ್ಳೆಯದೇ ಆಯಿತು. ಕಾಂಗ್ರೆಸ್ ನವರು ಬಿಜೆಪಿ ಗೆಲ್ಲಲಿ ಎನ್ನುವುದು ಒಳ್ಳೆಯದೇ ಆಯಿತು. ಬಿಜೆಪಿಗೆ ಬರುವಂತೆ ನಾವೇನು ಅವರ ಸಂಪರ್ಕ ಮಾಡಿಲ್ಲ. ಮತ್ತೆ ನಮ್ಮ ಮನೆಗೆ ಬಂದಿದ್ದೇನೆ ಖುಷಿಯಿಂದ ಇದ್ದೇನೆ ಎಂದರು.
BREAKING: 7 ದಿನಗಳಲ್ಲಿ ‘ದೇಶಾದ್ಯಂತ’ CAA ಜಾರಿ: ಕೇಂದ್ರ ಸಚಿವರಿಂದ ಮಹತ್ವದ ಘೋಷಣೆ
BREAKING: ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣ: ವಿಚಾರಣೆಗೆ ಪಾಟ್ನಾದ ED ಕಚೇರಿಗೆ ಹಾಜರಾದ ಲಾಲು ಯಾದವ್