ಬೆಂಗಳೂರು: ನನಗೆ ಯಾವುದೇ ಎಕ್ಸಿಟ್ ಪೋಲ್ ಸಮೀಕ್ಷೆ ಮೇಲೆ ನಂಬಿಕೆಯಿಲ್ಲ. ಆದ್ರೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು 2 ಅಂಕಿ ಸ್ಥಾನ ದಾಟೋದಂತೂ ನಿಜ ಅಂತ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಯಾವುದೇ ಎಕ್ಸಿಟ್ ಪೋಲ್ ಮೇಲೆ ನಂಬಿಕೆಯಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 2 ಅಂಕಿ ದಾಟುತ್ತದೆ. ಈ ಚುನಾವಣಾ ಸಮೀಕ್ಷೆ ಬಗ್ಗೆ ನನಗೆ ವಿಶ್ವಾಲವಿಲ್ಲ ಎಂದರು.
ಲೋಕಸಭಾ ಚುನಾವಣೋತ್ತರ ಸಮೀಕ್ಷೆ ಎಂಬುದಾಗಿ ಕೆಲವರ ಅಭಿಪ್ರಾಯ ಮಾತ್ರ ಸಂಗ್ರಹಿಸುತ್ತಾರೆ ಅಷ್ಟೇ. ನನಗೆ ಇದ್ಯಾವುದರ ಮೇಲೆ ನಂಬಿಕೆಯಿಲ್ಲ. ಇಂಡಿಯಾ ಮೈತ್ರಿಕೂಟ ಎಷ್ಟು ಸ್ಥಾನ ಗಳಿಸಲಿದೆ ಅಂತ ನನಗೆ ಗೊತ್ತು ಅಂತ ಹೇಳಿದರು.
ಅಂದಹಾಗೇ ವಿವಿಧ ಸಮೀಕ್ಷೆಗಳು ಕರ್ನಾಟಕದಲ್ಲಿ ಎನ್ ಡಿಎ 20, ಕಾಂಗ್ರೆಸ್ ಪಕ್ಷ 8 ಸ್ಥಾನ ಗೆಲುವು ಸಾಧಿಸಲಿದೆ ಅಂತ ಹೇಳಿವೆ. ಆದ್ರೇ ಡಿಸಿಎಂ ಡಿಕೆ ಶಿವಕುಮಾರ್ ಮಾತ್ರ ನನಗೆ ಇದ್ಯಾವುದರ ಮೇಲೂ ನಂಬಿಕೆಯಿಲ್ಲ ಅಂದಿದ್ದಾರೆ.
‘ಕರ್ನಾಟಕ ಹೈಕೋರ್ಟ್’ನ ನೂತನ ‘ನ್ಯಾಯಮೂರ್ತಿಯಾಗಿ ವಿ.ಕಾಮೇಶ್ವರ ರಾವ್’ ಪ್ರಮಾಣವಚನ ಸ್ವೀಕಾರ
BIG NEWS: ರಾಜ್ಯ ಸರ್ಕಾರದಿಂದ ‘ಗುತ್ತಿಗೆದಾರ’ರಿಗೆ ಬಿಗ್ ಶಾಕ್: ಈ ನಿಯಮ ಪಾಲಿಸದಿದ್ರೆ ‘ಡಿಬಾರ್ ಫಿಕ್ಸ್’