ಬೆಂಗಳೂರು: ಚಿತ್ರರಂಗದಲ್ಲಿ #MeToo ನಂತಹ ಪ್ರಕರಣ ನಡೆದಿವೆ. ಹೀಗೆ ಆಗಿದೆ. ಆ ಸಂದರ್ಭದಲ್ಲಿ ಕೆಲವರಿಗೆ ಹಾಗೆ ಆಗಿತ್ತು ಎಂದು ಹೇಳಿದ್ದೇನೆ. ಅದರ ಹೊರತಾಗಿ ನಾನು ಮೀಟೂ ಆರೋಪವನ್ನು ಮಾಡಿಲ್ಲ ಎಂಬುದಾಗಿ ನಟಿ ಆಶಿತಾ ಸ್ಪಷ್ಟ ಪಡಿಸಿದ್ದಾರೆ.
ಅವರು ಇಂದು ಖಾಸಗಿ ಸುದ್ದಿಮಾಧ್ಯಮದೊಂದಿಗೆ ತನ್ನ ಸಂದರ್ಶನ ಕುರಿತಂತೆ ಸ್ಪಷ್ಟನೆ ನೀಡಿದ್ದು, ಆ ಪರಿಸ್ಥಿತಿ ಇತ್ತು. ಆ ಸಂದರ್ಭದಲ್ಲಿ ಆಗಿದೆ. ಆಗಿರಬಹುದು. ಹಾಗೆ ಸುದ್ದಿ ಇತ್ತು ಎಂದು ಮಾತ್ರವೇ ಹೇಳಿದ್ದೇನೆ. ನನ್ನ ಸಂದರ್ಶನದಲ್ಲಿ ಕೇಳಿದಂತ ಪ್ರಶ್ನೆಗೆ ಹೀಗೆ ಇತ್ತು, ಕೆಲವರಿಗೆ ಹೀಗೆ ಆಗಿತ್ತು ಎಂಬುದಾಗಿ ಅಂತೆ-ಕಂತೆಯಲ್ಲಿ ಹೇಳಿದ್ದೇನೆ ಎಂದಿದ್ದಾರೆ.
ನಾನು ಎಲ್ಲಿಯೂ ಯಾರ ಬಗ್ಗೆಯೂ #MeToo ಆರೋಪ ಮಾಡಿಲ್ಲ. ಸ್ಯಾಂಡಲ್ ವುಡ್ ಚಿತ್ರರಂಗ ನನಗೆ ಬದುಕು ಕಟ್ಟಿಕೊಟ್ಟಿದೆ. ನನಗೂ ಮುಂದೆ ಚಿತ್ರಗಳಲ್ಲಿ ನಟಿಸೋ ಅವಕಾಶಗಳು ಸಿಗಬೇಕು. ನನಗೆ #MeToo ಕಿರುಕುಳ ಆಗಿದೆ ಎಂಬುದಾಗಿ ಎಲ್ಲಿಯೂ ಹೇಳಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಅಂದಹಾಗೇ, ಖಾಸಗಿ ಸಂದರ್ಶನವೊಂದರಲ್ಲಿ ನಟಿ ಆಶಿತಾ ಕನ್ನಡ ಚಿತ್ರರಂಗದಲ್ಲಿ ನಟಿಸಬೇಕು ಎಂದ್ರೇ ಅವರು ಬಯಸಿದ ಹಾಗೆ ಇರಬೇಕು. ನಾನು ನೈಸ್ ಆಗಿರಸಿಲ್ಲ ಎಂಬುದಾಗಿ ಆರೋಪಿಸಿದ್ದಾರೆ. ಇದಲ್ಲದೇ ಅವರು ಬಯಸಿದಂತೆ ಸೆಟ್ ನಲ್ಲಿ ಇರಲಿಲ್ಲ ಎನ್ನುವ ಕಾರಣಕ್ಕಾಗಿ ಸೆಟ್ ನಲ್ಲಿಯೇ ಕಿರುಕುಳ ನೀಡಲಾಗಿತ್ತು ಎಂಬುದಾಗಿ ಹೇಳಿದ್ದರು.
ಇದಷ್ಟೇ ಅಲ್ಲದೇ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ವಾತಾವರಣವಿಲ್ಲ. ನಾನು ಅವರು ಹೇಳಿದಂತೆ ಅರ್ಜೆಂಸ್ಟ್ ಆಗಲಿಲ್ಲ. ಹೀಗಾಗಿಯೇ ಕನ್ನಡ ಸಿನಿ ಲೋಕದಿಂದ ದೂರ ಉಳಿಯಬೇಕಾಯಿತು ಎಂಬುದಾಗಿ ತಿಳಿಸಿದ್ದರು.
ನಟಿ ಆಶಿತಾ ಮೀಟೂ ಆರೋಪವನ್ನು ಯಾರ ಬಗ್ಗೆ ಮಾಡಿದ್ದಾರೆ ಎನ್ನುವ ಯಾವುದೇ ಮಾಹಿತಿ ನೀಡಿಲ್ಲ. ಕೇವಲ ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಇಂತಹ ವಾತಾವರಣವಿದೆ ಎಂಬುದಾಗಿ ಆರೋಪಿಸಿದ್ದರು. ಆ ಬಗ್ಗೆ ಮುಂದಿನ ನಟಿ ಆಶಿತಾ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.
ಅಂದಹಾಗೇ ನಟಿ ಆಶಿತಾ ಕನ್ನಡದ ರೋಡ್ ರೋಮಿಯೋ, ಹಾರ್ಟ್ ಬೀಟ್, ತವರಿನ ಸಿರಿ, ಬಾ ಬಾರೋ ರಸಿಕಾ, ಆಕಾಶ್ ಸೇರಿದಂತೆ ವಿವಿಧ ಚಿತ್ರಗಳಲ್ಲಿ ನಟಿಸಿದ್ದಾರೆ. ಹೀಗೆ ನಟಿಸಿದಂತ ನಟಿ ಇಂತದ್ದೊಂದು ಗಂಭೀರ ಆರೋಪವನ್ನು ಮಾಡಿದ್ದರು.