ಮೈಸೂರು : ಸಿಎಂ ಸಿದ್ದರಾಮಯ್ಯ ವಿರುದ್ಧ ನೇರವಾಗಿ ಆರೋಪ ಮಾಡಲಿಕ್ಕೆ ಆಗುತ್ತಿಲ್ಲ ಹಾಗಾಗಿ ಜಿ ಟಿ ದೇವೇಗೌಡ ಅವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನಾನು ಕೂಡ ಜಿಟಿ ದೇವೇಗೌಡರ 80 ಪರ್ಸೆಂಟ್ ಕಮಿಷನ್ ಆರೋಪ ಮಾಡಬಹುದು ಮೈಸೂರಿನಲ್ಲಿ ಜಿ ಟಿ ಡಿ ಆರೋಪಕ್ಕೆ ಸಿಎಂ ಪುತ್ರ ಯತೀಂದ್ರ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಾವುದೇ ಸಾಕ್ಷಿಗಳಿಲ್ಲದೆ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಜಿ ಟಿ ದೇವೇಗೌಡ ಅವರು 80 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಎಂದು ನಾನು ಹೇಳಬಹುದು. ಸಹಕಾರಿ ಕ್ಷೇತ್ರದಲ್ಲಿ ಅವ್ಯವಹಾರ ಮಾಡಿದ್ದಾರೆಂದು ಜನ ಹೇಳುತ್ತಾರೆ ಇದಕ್ಕೆಲ್ಲ ಸಾಕ್ಷ್ಯಾಧಾರಬೇಕಲ್ಲ ಸುಮ್ಮನೆ ಆರೋಪ ಮಾಡುವುದಲ್ಲ ನನ್ನ ತಂದೆ ವಿರುದ್ಧ ಜಿ ಟಿ ದೇವೇಗೌಡಗೆ ನೇರವಾಗಿ ಆರೋಪ ಮಾಡಲು ಆಗುತ್ತಿಲ್ಲ ಎಂದರು.
ನಾನು ರಾಜಕೀಯದಲ್ಲಿರುವ ಕಾರಣ ನನ್ನ ವಿರುದ್ಧ ಜಿ ಟಿ ದೇವೇಗೌಡ ಆರೋಪ ಮಾಡುತ್ತಿದ್ದಾರೆ. ನನ್ನ ವಿರುದ್ಧ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಆರೋಪ ಮಾಡಿದರೆ ಪರೋಕ್ಷವಾಗಿ ಸಿಎಂ ವಿರುದ್ಧ ಮಾಡಿದಂತಾಗುತ್ತದೆ ಅಂತ ಅವರ ಲೆಕ್ಕಾಚಾರವಾಗಿದೆ. ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ಪಕ್ಷದವರೇ ಮಾತನಾಡಿದರು ಎಂದರು.
ಈ ಹಿಂದೆ ವಿಜಯೇಂದ್ರ ವಿರುದ್ಧವೇ ಬಿಜೆಪಿಯವರು ಮಾತನಾಡಿದ್ದರು. ನನ್ನ ವಿರುದ್ಧದ ವರ್ಗಾವಣೆ ದಂದೇ ಇದೆಲ್ಲ ಉರುಳಿಲ್ಲದ್ದು ಶಾಸಕನಾಗಿ ಕೆಲಸ ಮಾಡಲು ಆಗುತ್ತಿಲ್ಲ.ಅಂದರೆ ಇವರೆಷ್ಟು ದುರ್ಬಲರು ಎಂದು ಮೈಸೂರಿನಲ್ಲಿ ಶಾಸಕ ಜಿಟಿ ದೇವೇಗೌಡ ಗೆ ಯತೀಂದ್ರ ತಿರುಗೇಟು ನೀಡಿದರು.