ಬೆಂಗಳೂರು: ಬೆಂಗಳೂರು: ನಟ ದುನಿಯಾ ವಿಜಯ್ ಹಾಗೂ ಪಾನಿಪೂರಿ ಕಿಟ್ಟಿ ನಡುವಿನ ಗಲಾಟೆಗೆ ಈಗ ಮತ್ತೆ ಮರುಜೀವ ಬಂದಿದೆ. ಪಾನಿಪೂರಿ ಕಿಟ್ಟಿ ವಿರುದ್ಧ ದಾಖಲಾಗಿದ್ದಂತ ಎಫ್ಐಆರ್ ರದ್ದು ಪ್ರಶ್ನಿಸಿ ನಟ ವಿಜಿ ಸಲ್ಲಿಸಿದ್ದಂತ ಮೇಲ್ಮನವಿಗೆ ಹೈಕೋರ್ಟ್ ಪುರಸ್ಕರಿಸಿದೆ.
ಹೀಗಾಗಿ ಈಗ ಪಾನಿಪೂರಿ ಕಿಟ್ಟಿ ವಿರುದ್ಧ ಹೊಸದಾಗಿ ಎಫ್ಐಆರ್ ದಾಖಲಾಗಲಿದೆ. ಈ ಕುರಿತು ಪಾನಿಪೂರಿ ಕಿಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸರು ಕರೆದಿದ್ದಕ್ಕೆ ನಾನು ವಿಚಾರಣೆಗೆ ಹಾಜರಾಗಿದ್ದೇನೆ. ಇದೀಗ ನಾನು ಲಾಯರ್ ಜೊತೆ ಮಾತಾಡಿ ಮುಂದುವರಿಸುತ್ತೇನೆ. ಯಾರೂ ಸಂಧಾನಕ್ಕೆ ಬಂದಿಲ್ಲ. ಈವರೆಗೂ ನಾನು ಅವರ ಜೊತೆ ಮಾತನಾಡಿಲ್ಲ. ಕಾನೂನಿನ ಹೋರಾಟವನ್ನೇ ಮಾಡುತ್ತೇನೆ’ ಎಂದು ಹೇಳಿದ್ದಾರೆ.
2018ರಲ್ಲಿ ನಟ ದುನಿಯಾ ವಿಜಿ ಹಾಗೂ ಪಾನಿಪೂರಿ ಕಿಟ್ಟಿ ನಡುವೆ ಅಂಬೇಡ್ಕರ್ ಭವನದಲ್ಲಿ ನಡೆದ ಘಟನೆ ಸಂಬಂಧ ದೂರು-ಪ್ರತಿದೂರು ದಾಖಲಾಗಿತ್ತು. ಕಾರಿಗೆ ಹಾನಿ, ಜೀವಬೆದರಿಕೆ ಬಗ್ಗೆ ನಟ ದುನಿಯಾ ವಿಜಿ ದೂರು ನೀಡಿದ್ದರು. ಆದ್ರೇ ಪಾನಿಪುರಿ ಕಿಟ್ಟಿ ಎಫ್ಐಆರ್ ರದ್ದುಪಡಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದಂತ ಕೋರ್ಟ್, ಎಫ್ಐಆರ್ ರದ್ದು ಪಡಿಸಿತ್ತು.