ಬೆಂಗಳೂರು : ಹೆಡ್ಬುಷ್ ಸಿನಿಮಾದಲ್ಲಿ ವಿವಾದ ಬೆನ್ನಲ್ಲೇ ನಟ ಡಾಲಿ ಧನುಂಜಯ್ ಸುದ್ದಿಗೋಷ್ಟಿ ನಡೆಸಿದ “ವೀರಾಗಾಸೆ ಕಲಾವಿದರಿಗೆ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ ” ಎಂದು ಸ್ಪಷ್ಟಪಡಿಸಿದ್ದಾರೆ.
BIGG NEWS: ಹಾಸನಾಂಬೆ ದೇಗುಲದ ಬಳಿ ಗಿಳಿ ಶಾಸ್ತ್ರ ಕೇಳಿದ ಸಿಟಿ ರವಿ;ನಿಮ್ಮ ಕೈ ರೇಖೆ ಚೆನ್ನಾಗಿದೆ ಎಂದು ಜ್ಯೋತಿಷ್ಯ
ಧನಂಜಯ್ (Dhananjay) ನಟನೆಯ ‘ಹೆಡ್ ಬುಷ್’ ಸಿನಿಮಾ ಸಾಕಷ್ಟು ಸುದ್ದಿ ಆಗುತ್ತಿದೆ. ಈ ಚಿತ್ರದಲ್ಲಿ ವೀರಗಾಸೆಯವರಿಗೆ ಅವಮಾನ ಮಾಡಲಾಗಿದೆ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಕುರಿತು ಅವರ ಡಾಲಿ ಧನುಂಜಯ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಸ್ಪಷ್ಟನೆ ನೀಡಿದ್ದರು.
ಧನಂಜಯ್ ಮಾತ್ರವಲ್ಲದೆ ಅಖಿಲ ಭಾರತ ವೀರಶೈವ ಸಂಘದ ಬೆಂಗಳೂರು ಜಿಲ್ಲಾಧ್ಯಕ್ಷ ಎಸ್. ಗುರುಸ್ವಾಮಿ ಮೊದಲಾದವರು ಈ ಸುದ್ದಿಗೋಷ್ಠಿಯಲ್ಲಿ ಭಾಗಿ ಆಗಿದ್ದಾರೆ.
BIGG NEWS: ಹಾಸನಾಂಬೆ ದೇಗುಲದ ಬಳಿ ಗಿಳಿ ಶಾಸ್ತ್ರ ಕೇಳಿದ ಸಿಟಿ ರವಿ;ನಿಮ್ಮ ಕೈ ರೇಖೆ ಚೆನ್ನಾಗಿದೆ ಎಂದು ಜ್ಯೋತಿಷ್ಯ
ಸಿನಿಮಾದಲ್ಲಿ ವೀರಾಗಾಸೆ ವಿವಾದ ಸೃಷ್ಟಿಸಿದವರಿಗೆ ನಟ ಡಾಲಿ ಧನುಂಜಯ್ ಪ್ರಶ್ನೆಯನ್ನು ಕೇಳಿದ್ದಾರೆ ಈ ವರೆಗೆ ಅವರ ಬಗ್ಗೆ ಯಾವತ್ತಾದ್ರೂ ಯೋಚಿಸಿದ್ದೀರಾ. ಅವರಿಗೆ ಸರ್ಕಾರಿಂದ ಮಾಸಾಶನ ನೀಡಬೇಕು. ನಾನು ಕೂಡ ವೀರಭದ್ರ ದೇವರ ಆರಾಧಕ ಆಗಿರುವುದರಿಂದ ಯಾವುದೇ ಕಾರಣಕ್ಕೂ ಅವಮಾನ ಮಾಡಿಲ್ಲ. ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತೇನೆ. ನನಗೂ ವೀರಭದ್ರ ದೇವರ ಮೇಲೆ ಅಪಾರ ಭಕ್ತಿ.. ಹಾಗಾಗಿ ನನ್ನಿಂದ ಯಾವುದೇ ಅವಮಾನ ಆಗುವಂತಹ ಕೆಲಸ ಆಗಲ್ಲ ಧನಂಜಯ್ಎಂದಿದ್ದಾರೆ.
ಹೆಡ್ಬುಷ್ ಸಿನಿಮಾ ವಿವಾದವೇನು?
ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಸಿನಿಮಾದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ವೀರಗಾಸೆ ಕಲಾವಿದರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಸಾಹಸ ಸನ್ನಿವೇಶದಲ್ಲಿ ವೀರಗಾಸೆ ಕಲಾವಿದರಿಗೆ ಒದೆಯಲಾಗಿದೆ. ಅದು ಕಲೆ ಮತ್ತು ವೀರಭದ್ರ ದೇವರಿಗೆ ಮಾಡಿದ ಅಪಮಾನ ಎಂದು ಕಲಾವಿದರು ಆಕ್ಷೇಪಿಸಿದ್ದಾರೆ.
ಹೆಡ್ ಬುಷ್ ಸಿನಿಮಾದಲ್ಲಿ ಇಂದಿರಾ ಗಾಂಧಿಯವರ ಇಂದಿರಾ ಬ್ರಿಗೇಡ್ ಪ್ರಮುಖ ಅಂಶವೇ ಆಗಿದದ್ದು, ಇಡೀ ಕಥೆಯ ಚಿತ್ರ ಓಡಲು ಅದುವೇ ಕಾರಣವೂ ಆಗಿದೆ. ಜಯರಾಜ್ ಎಂಬ ಪೊಲೀಸ್ ವಿರೋಧಿ ಪೈಲ್ವಾನ್ ಹೇಗೆಲ್ಲ ರಾಜಕೀಯ ದಾಳಕ್ಕೆ ಬಳಕೆ ಆಗಿದ್ದಾನೆ ಎನ್ನುವುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ.
BIGG NEWS: ಹಾಸನಾಂಬೆ ದೇಗುಲದ ಬಳಿ ಗಿಳಿ ಶಾಸ್ತ್ರ ಕೇಳಿದ ಸಿಟಿ ರವಿ;ನಿಮ್ಮ ಕೈ ರೇಖೆ ಚೆನ್ನಾಗಿದೆ ಎಂದು ಜ್ಯೋತಿಷ್ಯ