ಮೈಸೂರು : ಇತ್ತೀಚಿಗೆ ಸಚಿವ ಜಮೀರ್ ಅಹ್ಮದ್ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಕರಿಯಣ್ಣ ಎಂದು ಕರೆದಿದ್ದರು. ಬಳಿಕ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೆ ಸುದ್ದಿಗೋಷ್ಠಿಯಲ್ಲಿ ನಮ್ಮಿಬ್ಬರ ಪಕ್ಷ ಬೇರೆ ಇದ್ದೇ ಇರಬಹುದು. ಆದರೆ ನಾನು ಆತ್ಮೀಯವಾಗಿ ಅವರಿಗೆ ಕರಿಯಣ್ಣ ಅಂತ ಕರೆಯುತ್ತೇನೆ. ಅವರು ನನ್ನನ್ನು ಕುಳ್ಳ ಎಂದು ಕರೆಯುತ್ತಾರೆ ಎಂದು ಸ್ಪಷ್ಟನೆ ನೀಡಿದರು. ಇದಕ್ಕೆ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಅವರು ನಾನು ಯಾವತ್ತೂ ಜಮೀರ್ ಅವರನ್ನು ಕುಳ್ಳ ಎಂದು ಕರೆದೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಉಪಚುನಾವಣೆಯಲ್ಲಿ ಪುತ್ರ ನಿಖಿಲ್ ಸ್ಪರ್ಧೆ ಮಾಡಿದ್ದು, ಅವರ ಗೆಲುವಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಮೀರ್ ಅಹ್ಮದರನ್ನು ನಾನು ಕುಳ್ಳ ಎಂದು ಕರೆದೆ ಇಲ್ಲ. ತಾಯಿ ಮುಂದೆ ನಿಂತಿದ್ದೇನೆ ನಾನು ಕುಳ್ಳ ಎಂದು ಕರೆದೆ ಇಲ್ಲ ಬಸವರಾಜ್ ಹೊರಟ್ಟಿ ಅವರು ಕುಮಾರ್ ಎಂದಾಗ ಹೊಡೆಯಲು ಹೋದ ಗಿರಾಕಿ ಎಂದು ಸ್ಪಷ್ಟನೆ ನೀಡಿದರು.
ಬಸವರಾಜ್ ಹೊರಟ್ಟಿ ಈಗಲೂ ಇದ್ದಾರೆ ಅವರನ್ನೇ ಕೇಳಿ. ಜಮೀರ್ ಅಹಮದ್ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಸಿಎಂ ಡಿಸಿಎಂ ಅವರ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ.ಇದು ನಾಗರೀಕ ಸರ್ಕಾರನ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗರ್ಭಭಂಗ, ಸೊಕ್ಕು ಮುರಿಯುತ್ತೇನೆ ಎಂಬುವುದು ಸಂವಿಧಾನಿಕ ಪದವಲ್ಲ. ಇದರಲ್ಲಿ ತಪ್ಪೇನಿದೆ? ಎಂದು ಎಚ್ ಡಿ ದೇವೇಗೌಡ ಹೇಳಿಕೆಯನ್ನು ಹೆಚ್ ಡಿ ಕುಮಾರಸ್ವಾಮಿ ಸಮರ್ಥಿಸಿಕೊಂಡರು. ದುಡ್ಡಿನ ಮತದಿಂದ ಈ ರೀತಿ ಕೊಂಡುಕೊಳ್ಳುತ್ತೇನೆ ಎನ್ನುತ್ತಾರೆ ಎಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.