ಶಿವಮೊಗ್ಗ: ನಾನು 100% ಸ್ವಚ್ಛವಾಗಿದ್ದೇನೆ. ನನ್ನ ಕೃಷಿಯಿಂದ ಬಂದ ಆದಾಯದಲ್ಲಿ ಜನರಿಗೆ ಸಹಾಯ, ಸಹಕಾರ ಮಾಡುತ್ತಿದ್ದೇನೆ. ಯಾವುದೇ ಭ್ರಷ್ಟಾಚಾರ, ಅಕ್ರಮದಿಂದ ಅಲ್ಲ. ಈ ಬಗ್ಗೆ ನಾನು ಕರ್ನಾಟಕದ ಯಾವುದೇ ದೇವಸ್ಥಾನದಲ್ಲಿ ಆಣೆ ಪ್ರಮಾಣಕ್ಕೆ ಸಿದ್ಧ ಎಂಬುದಾಗಿ ಶಾಸಕರು, ಕಾಂಗ್ರೆಸ್ ಮುಖಂಡರಿಗೆ ಬಿಜೆಪಿ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಾಕರ ಹೊನಗೋಡು ಸವಾಲ್ ಎಸೆದಿದ್ದಾರೆ.
ಇಂದು ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಅವರು, ಲ್ಯಾವಿಗೆರೆಯಲ್ಲಿ ಅವರ ಕಲ್ಲುಕ್ವಾರೆ ಕಲ್ಲು ಸೇಲ್ ಆಗಲಿ ಅಂತ ಹೀಗೆ ಮಾಡಿದ್ದಾರೆ. ನಾವು, ಹಾಲಪ್ಪನವರು ಎಸ್ಪಿ ಹತ್ತಿರ ಹೋಗಿ ಹೇಳಿರೋದು ಸಣ್ಣ ಪುಟ್ಟವರಿಗೆ ತೊಂದರೆ ಕೊಡಬೇಡಿ. ರಾಜಕೀಯವಾಗಿ ಎಷ್ಟೇ ಒತ್ತಡ ಇರಬಹುದು. ಪಾರ್ಟಿ ಪಕ್ಷ ಬೇಡ. ಒಂದು ಕಡೆ ಎಲ್ಲರಿಗೂ ಸಹಾಯ ಆಗಲಿ ಅನ್ನೋ ನಿಟ್ಟಿನಲ್ಲಿ ಹೇಳಲಾಗಿತ್ತು. ನಾವು ಮರಳು ಹೊಡೆಯೋರು, ಕಲ್ಲು ಕ್ವಾರಿಯವರ ಪರವಾಗಿಯೇ ಇದ್ದೇವೆ. ನಾನು ಎಲ್ಲಿಯೂ ಕಲ್ಲುಕ್ವಾರೆ, ಮರಳು ಸಾಗಾಣಿಕೆ ನಿಲ್ಲಿಸಿ ಅಂತ ಹೇಳಿಲ್ಲ ಎಂಬುದಾಗಿ ಬಿಜೆಪಿ ಮುಖಂಡ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಾಕರ ಹೊನಗೋಡು ಸ್ಪಷ್ಟ ಪಡಿಸಿದರು.
ನಾನು ಇದ್ದೀನಿ ಅಂತ ತೋರಿಸಿಕೊಳ್ಳುತ್ತಿಲ್ಲ. ನನ್ನ ಜನ ಇಪತ್ತು ವರ್ಷಗಳ ಹಿಂದೆಯೇ ಲೀಡರ್ ಅಂತ ಒಪ್ಪಿಕೊಂಡಿದ್ದಾರೆ. ನಾನು ಇರಬೇಕು ಅಂತ ತೋರಿಸಿಕೊಳ್ಳುತ್ತಿರುವುದಲ್ಲ. ಇವರು ಮಾಡುತ್ತಿರುವ ದಬ್ಬಾಳಿಕೆ, ಭ್ರಷ್ಟಾಚಾರ, ಅಮಾಯಕ ಮೇಲೆ ಮಾಡುತ್ತಿರುವ ದೌರ್ಜನ್ಯ, ಅಧಿಕಾರದ ದಬ್ಬಾಳಿಕೆ, ಅಧಿಕಾರದ ಧಮ್ಕಿಗಳು ಅದರ ವಿರುದ್ಧ ಧ್ವನಿ ಎತ್ತುತ್ತಿರೋದು. ನಾನು ಇದ್ದೀನಿ ಅಂತ ತೋರಿಸಿಕೊಳ್ಳೋದಕ್ಕೆ ಆಗಾಗ ಪ್ರೆಸ್ ಮೀಟ್ ಮಾಡುತ್ತಿಲ್ಲ ಎಂಬುದಾಗಿ ತಿಳಿಸಿದರು.
ಇವರ ಭ್ರಷ್ಟಾಚಾರ, ಅಧಿಕಾರದ ದಬ್ಬಾಳಿಕೆಯನ್ನು ಪ್ರಶ್ನೆ ಮಾಡಬಾರದು. ಪ್ರಶ್ನೆ ಮಾಡಿದರೇ ಹೀಗೆ ಬೇರೆಯವರ ಮೇಲೆ ಆರೋಪ ಮಾಡ್ತಾರೆ. ಮೊನ್ನೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಇತರೆ ಕಾಂಗ್ರೆಸ್ ಮುಖಂಡರು ಸೇರಿ ಪ್ರೆಸ್ ಮೀಟ್ ಮಾಡಿದ್ದಾರೆ. ಆದರೇ ಕಾಗೋಡು ತಿಮ್ಮಪ್ಪನವರು ಕಟ್ಟಿ ಬೆಳೆಸಿದಂತ ಪಕ್ಷಕ್ಕೆ ಹುದ್ದೆ ಬೆಂಬಲಿಗರನ್ನು ಕೂರಿಸಿ ಪ್ರೆಸ್ ಮೀಟ್ ಮಾಡುವಂತ ಪರಿಸ್ಥಿತಿ ಬಂತ ಅನ್ನಿಸ್ತಿದೆ ಎಂದರು.
ಪ್ರೆಸ್ ಮೀಟ್ ಮಾಡಿದವರು ಯಾರು.? ಅವನು ರಾತ್ರೋ ರಾತ್ರಿ ಹೊಸನಗರದಲ್ಲಿ ಕ್ವಾಲಿಟಿ ಇಲ್ಲದಂತ ಮರಳು ಸರಬರಾಜು ಮಾಡಿ, ಅದು ಯೋಗ್ಯವಲ್ಲ ಅಂತ ಅಲ್ಲಿಂದ ಕಟ್ಟಡದವರು ಓಡಿಸಿದರು. ಇನ್ನೊಂದು ಕಡೆ ಕಲ್ಲುಕ್ವಾರೆ ಶುರು ಮಾಡಿದವರು ಎಂದು ಆರೋಪಿಸಿದರು.
ನನ್ನ ವಿರುದ್ಧ ಆಕೋಪಿಸುತ್ತಿರುವಂತ ಕಾಂಗ್ರೆಸ್ ಮುಖಂಡನೇ ಮಣ್ಣುಮಿಶ್ರಿತ ಮರಳು ಸರಬರಾಜು ಮಾಡಿ ಸಿಕ್ಕಿಬಿದ್ದಿದ್ದರು. ಇಂತಹ ಮರಳನ್ನು ಪೊಲೀಸರು ಬಂದ್ ಮಾಡಿಸಿದ್ದರು. ಆ ಬಳಿಕ ಕಲ್ಲು ಕ್ವಾರೆ ಆರಂಭಿಸಿದ್ದರು. ನಾನು ಕೃಷಿ ಮಾಡಿ ಬದುಕುತ್ತಿರುವವನು. ಸಗಣಿ ತಿನ್ನುವವರು ಇವರು. ಮುಂದೆ ತಿನ್ನೋರು ಇವರು. ನಾನು ತಿನ್ನುತ್ತಿರುವನನಲ್ಲ ಎಂಬುದಾಗಿ ಕಿಡಿಕಾರಿದರು.
ನಾನು ಬಡವರ ಪರ, ಕೂಲಿಕಾರರ ಪರ. ಇಂತವರನ್ನು ವರ್ಷಕ್ಕೆ ನೂರಾರು ಜನರನ್ನು ಸೃಷ್ಠಿ ಮಾಡೋದು ಗೊತ್ತು. ಈ ಅಕ್ರಮದಲ್ಲಿ ಶಾಸಕರ ಪಾಲೆಷ್ಟು? ಜನರಿಗೆ ತೊಂದರೆಯಾಗುತ್ತಿದ್ದರೂ ಅವರ ಮಾತನ್ನೇ ಕೇಳುತ್ತಾರೆ. ಮನೆಗೆ ಕರೆದುಕೊಂಡು ಮಾತನಾಡಿದ್ದಾರೆ ಎಂದರು.
ಅಕ್ರಮ ಸಂಪಾದನೆ ಪ್ರಶ್ನೆಯೇ ಇಲ್ಲ. ಬ್ಲಾಕ್ ದಂಧೆ ನನಗೆ ಅವಶ್ಯಕತೆನೇ ಇಲ್ಲ. ನಾನು ಕೃಷಿ ಮಾಡಿ ದುಡಿದು ಬಡವರಿಗೆ ನೆರವಾಗುತ್ತಿದ್ದೇನೆ. ಇಂತಹ ಬ್ಲಾಕ್ ಮೇಲರ್ ತೊಂದರೆ ಕೊಡುತ್ತಿರೋದನ್ನು ಸಹಿಸಲ್ಲ. ಅವರ ಪರವಾಗಿ ನಿಲ್ಲುತ್ತೇನೆ. ನನಗೆ ಯೂನಿವರ್ಸಿಟಿಯಿಂದ ನನ್ನ ಕೈಯಿಂದಲೇ ನಾಲ್ಕೈದು ಲಕ್ಷ ಖರ್ಚಾಗಿದೆ. ನಮ್ಮ ಆನಂದಪುರಕ್ಕೆ ಬಂದರೇ ಸಾಕಷ್ಟು ಅಭಿವೃದ್ಧಿ ಆಗಲಿದೆ ಎಂಬ ಉದ್ದೇಶದಿಂದ ಸಹಕಾರ ಮಾಡಿದ್ದೇನೆ ಎಂಬುದಾಗಿ ಸ್ಪಷ್ಟ ಪಡಿಸಿದರು.
ನನಗೆ ಕಲ್ಲುಕ್ವಾರೆ ಮಾಡಿ ಬದುಕುವ ಅವಶ್ಯಕತೆ ಇಲ್ಲ. ನನ್ನದೇ ಆದಂತ ಕೃಷಿ ಮಾಡಿ ಬದುಕೋನು. ನಾನು ಶಾಸಕರಿಗೆ ಒಂದು ಹೇಳುತ್ತೇನೆ. ನನ್ನ ವಿರುದ್ಧ ಇವರೇನು ಆರೋಪ ಮಾಡಿದ್ದಾರೆ ಅವರು ಬೆಂಗಳೂರಲ್ಲಿ ಏನೇನು ದಂಧೆ ಮಾಡುತ್ತಿದ್ದಾರೆ ಅಂತ ನನಗೆ ಗೊತ್ತಿದೆ. ಸಾಗರದಲ್ಲಿ ಶ್ರೀಧರ ನಗರದಲ್ಲಿ ಮಾಡಿರುವಂತ ಪ್ರಾಡ್ ಬಗ್ಗೆ ಮುಂದಿನ ದಿನಗಳಲ್ಲಿ ದಾಖಲೆ ಸಹಿತ ಹೊರಗಿಡುವುದಾಗಿ ತಿಳಿಸಿದರು.
ರಾಜಕೀಯ ಮಾಡಿ. ಆದರೇ ಬಡವರ ಬದುಕಿನ ಹೊಟ್ಟೆಯ ಮೇಲೆ ಹೊಡೆಯಬೇಡಿ. ನೀವು ಬದುಕಿ. ಅವರನ್ನು ಬದುಕಿಸಿ. ಇಂತವರ ವಿರುದ್ಧ ನಾನು ಹೋರಾಟಡುತ್ತಿರೋದಕ್ಕೆ ಹೀಗೆಲ್ಲ ಆರೋಪಿಸುತ್ತಿದ್ದಾರೆ. ನನ್ನ ವಿರುದ್ಧ ಹೀಗೆ ಸುಖಾ ಸುಮ್ಮನೆ ಆರೋಪಿಸಿದರೇ ಮಾನನಷ್ಟ ಮೊಕದ್ಧಮ್ಮೆ ದಾಖಲಿಸುತ್ತೇನೆ. ಈ ಬೂಟಾಟಿಕೆ ಬಿಟ್ಟು ಪ್ರಾಮಾಣಿಕವಾಗಿ ಜನಸೇವೆ ಮಾಡಿ. ಜನರನ್ನು ಆ ಮೂಲಕ ಓಲೈಸಿಕೊಳ್ಳಿ ಎಂಬುದಾಗಿ ತಿಳಿ ಹೇಳಿದರು.
ಸದ್ಯ ಜನರು ಯಾಕಪ್ಪ ಇವರಿಗೆ ಅಧಿಕಾರ ಕೊಟ್ವಿ ಅಂತ ಮಾತನಾಡುವಂತಾಗಿದೆ. ನೀವು ಬಿಜೆಪಿ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದೀರಿ. ಆದರೇ ಜನರಿಗೆ ಯಾರು, ಏನೆಂದು ಗೊತ್ತಿದೆ. ಇದು ನಡೆಯೋದಿಲ್ಲ ಎಂದರು.
ನನ್ನ ವೈನ್ ಶಾಪ್ ತೆರೆದಾಗ ಬೀಗ ಹೊಡೆಸಿ ದಾಂಧಲೆ ನಡೆಸಿದರು. ಇದೇ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ನನಗೆ ಒಂದು ಕೋಟಿಯಷ್ಟು ನಷ್ಟ ಮಾಡಿದರು. ಆಗಲೂ ನಾನು ಹೆದರಲಿಲ್ಲ. ನಾನು ಪ್ರಾಮಾಣಿಕತೆಯಿಂದ ಇದ್ದ ಕಾರಣ, ಇದನ್ನೆಲ್ಲ ನೋಡಿಕೊಳ್ಳೋದಕ್ಕೆ ಕೇರಳಕ್ಕೆ ಹೋಗಿ ದೇವಸ್ಥಾನಕ್ಕೆ ಹರಕೆ ಹಾಕಿದ್ದಾಗಿ ತಿಳಿಸಿದರು.
ಕೆಂಚಗಾಪುರ ದೇವಸ್ಥಾನದ ಜಾಗಕ್ಕೆ ಬೇಲಿ ಹಾಕಿಲ್ಲ. ಆ ಜಾಗದಲ್ಲಿ ಮನೆ ಕಟ್ಟಿದರೇ ಕೆರೆಗೆ ನೀರು ಹೋಗುತ್ತದೆ ಎನ್ನುವ ಕಾರಣಕ್ಕೆ ಮಾಡಲಾಗಿತ್ತು. ಕಮರ್ಷಿಯಲ್ ಕೆಲಸಗಳಿಗೆ ಆ ಜಾಗ ಉಪಯೋಗಿಸುವಂತೆ ಗ್ರಾಮಸ್ಥರು ಹೇಳಿದ ಕಾರಣ, ಹಾಗೆ ಮಾಡಲಾಗಿತ್ತು. ಡಿಸಿ ಕೂಡ ಇದನ್ನೇ ಹೇಳಿದರು ಎಂದರು.
ಇಡೀ ಕರ್ನಾಟಕದಲ್ಲಿ ಯಾವುದೇ ದೇವಸ್ಥಾನಕ್ಕೆ ಕರೆದರು ಸಿದ್ಧನಿದ್ದೇನೆ. ಕರ್ನಾಟಕದಲ್ಲಿ ಇರುವ ಯಾವುದೇ ದೇವಸ್ಥಾನ ಫಿಕ್ಸ್ ಮಾಡಲಿ. ಆಣೆ ಪ್ರಮಾಣಕ್ಕೆ ಸಿದ್ಧ. ನನಗೆ ವೈಯಕ್ತಿಕವಾಗಿ ಯಾರ ಮೇಲೂ ದ್ವೇಷವಿಲ್ಲ. ವೈಯಕ್ತಿಕವಾಗಿ ದಾಳಿ ಮಾಡುವುದು ಸರಿಯಲ್ಲ. ನಾನು 20 ವರ್ಷದಿಂದ ಕೃಷಿಯಲ್ಲಿ ಬಂದ ಆದಾಯದಿಂದ ಜನರಿಗೆ ಸಹಾಯ ಮಾಡುತ್ತಿದ್ದೇನೆಯೇ ಹೊರತು, ಅಕ್ರಮ, ಭ್ರಷ್ಟಾಚಾರದಿಂದ ಹಣ ಮಾಡಿಲ್ಲ. ಅದನ್ನು ಮಾಡುವುದೂ ಇಲ್ಲ. ಮುಂದೆಯೂ ನಾನು ಹೀಗೆ ಇರುತ್ತೇನೆ ಎಂಬುದಾಗಿ ಸವಾಲ್ ಎಸೆದರು.
ನನ್ನ ಮೇಲೆ ಆರೋಪಿಸಿದವರು ಆಣೆ ಪ್ರಮಾಣಕ್ಕೆ ಬರಲಿ. ಅಲ್ಲಿ ನಾನು ಗುತ್ತಿಗೆದಾರರಿಂದ ದುಡ್ಡು ತಗೊಂಡಿಲ್ಲ. ವರ್ಗಾವಣೆ ದಂಧೆ ಮಾಡಿಲ್ಲ. ನನ್ನ ಹಣದಿಂದ ಸಹಾಯ ಮಾಡುತ್ತಿದ್ದೇನೆ ಎಂದು ಹೇಳಲಿ. ಇವರು ನಾವು ದಾನ ಧರ್ಮ ಮಾಡುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ಗುತ್ತಿಗೆದಾರರಿಂದ ಹಣ, ವರ್ಗಾವಣೆಯಿಂದ ಹಣ ಪಡೆದು ಅದರಲ್ಲಿ ಸಹಾಯ ಮಾಡಿದ್ರೆ ಅದು ಸಹಾಯವೇ ಎಂದು ಪ್ರಶ್ನಿಸಿದರು.
ಯಾವುದೇ ಕಾರಣಕ್ಕೂ ಅಧಿಕಾರಿಗಳಿಂದ ವರ್ಗಾವಣೆಗಾಗಿ ದುಡ್ಡು ತೆಗೆದುಕೊಳ್ಳಬಾರದು. ಅವರು 20 ಲಕ್ಷ ತೆಗೆದುಕೊಂಡರೇ, 50 ಲಕ್ಷ ವಸೂಲಿ ಮಾಡುತ್ತಾರೆ. ನಿಮ್ಮನ್ನು ಜನರು ಚೆಂದ ಎತ್ತಿ ಗೆಲ್ಲಿಸಿದ್ದಾರೆ. ಅದೇ ನಿಟ್ಟಿನಲ್ಲಿ ನೀವು ಜನಪರವಾಗಿ ನಿಲ್ಲಬೇಕು. ಸತ್ಯ ಹೇಳಿದ ಕೂಡಲೇ ಆರೋಪ ಮಾಡುವುದು ಸರಿಯಲ್ಲ ಎಂದರು.
ನಾನು ಎಷ್ಟೊತ್ತಿಗಾದರೂ, ಯಾವಾಗ ಹೇಳಿದರೂ, ಆಣೆ ಪ್ರಮಾಣಕ್ಕೆ ಸಿದ್ಧ. ಶಾಸಕರು, ಅವರ ಬೆಂಬಲಿಗರು ಆಣೆ ಪ್ರಮಾಣಕ್ಕೆ ಸಿದ್ಧರೇ? ನಾನು ಹೇಳಿರುವ ಮಾತುಗಳನ್ನು ಆತ್ಮಸಾಕ್ಷೀಕರಿಸಿಕೊಂಡು ನೋಡಿ. ಶಾಸಕರ ಜೊತೆಗೆ ಅವರು ಬರಲಿ. ನಾನು 100% ಆಣೆ ಪ್ರಮಾಣಕ್ಕೆ ಸಿದ್ಧನಿದ್ದೇನೆ. ಯಾವುದೇ ದೇವಸ್ಥಾನವಾಗಲಿ ಎಂದು ಸವಾಲ್ ಎಸೆದರು.
ನನ್ನ ಬ್ಯುಸಿನೆಸ್ಸಿನಲ್ಲಿ 10 ಕೋಟಿ ದುಡಿಮೆ ಮಾಡಬಹುದು. ನೀವು ಹಾಗೆ ಮಾಡಿ. ನಾನು ಯಾರಿಗೂ ಸಹ ದುಡಿದು ಸಹಾಯ ಮಾಡುವುದಕ್ಕೆ ಬೇಡವೆಂದು ಹೇಳುವುದಿಲ್ಲ. ಪ್ರಾಮಾಣಿಕವಾಗಿ ದುಡಿದು ಮಾಡಿ. ಪ್ರಾಮಾಣಿಕವಾಗಿ ಜನರ ಸೇವೆ ಮಾಡಿ. ನಾನು ಕೊಟ್ಟೆ ಅಂತ ನೀವು ಏನು ಜನರಿಗೆ ಕೊಡಬೇಕು ಅಂತೇನಿಲ್ಲ. ಪ್ರಾಮಾಣಿಕವಾಗಿ ಸೇವೆ ಮಾಡಿ ಸಾಕು ಎಂದರು.
ಬಿಜೆಪಿ ಅವಧಿಯಲ್ಲಿ 23 ಸಾವಿರಕ್ಕೆ ಒಂದು ಲೋಡ್ ಮರಳು ಸಿಗುತ್ತಿತ್ತು. ಅದೇ ಈಗ 12 ರಿಂದ 16 ಸಾವಿರಕ್ಕೆ ಸಿಗುತ್ತಿದೆ ಎಂಬುದಾಗಿ ಆರೋಪಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದಂತ ರತ್ನಾಕರ ಹೊನಗೋಡು ಅವರು, ಹಾಲಪ್ಪ ಅವರು ಇದ್ದಾಗಲೇ 12 ರಿಂದ 13 ಸಾವಿರಕ್ಕೆ ಲೋಡ್ ಮರಳು ಸಿಗುತ್ತಿತ್ತು. ಯಾವತ್ತೂ 23 ಸಾವಿರಕ್ಕೆ ಒಂದು ಲೋಡ್ ಮರಳು ತಲುಪಿಲ್ಲ. ನನಗೆ ಗೊತ್ತಿರುವ ಹಾಗೆ 12 ರಿಂದ 13 ಸಾವಿರಕ್ಕೆ ಒಂದು ಲೋಡ್ ಮರಳು ಸಿಗುತ್ತಿದೆ ಎಂಬುದಾಗಿ ಸ್ಪಷ್ಟ ಪಡಿಸಿದರು.
ನಮ್ಮ ಮೇಲೆ ಸುಖಾ ಸುಮ್ಮನೆ ಗೂಬೆ ಕೂರಿಸುತ್ತಿದ್ದಾರೆ. ಇವರು ಯಾವತ್ತೂ ಜನರ ಪರವಾಗಿಲ್ಲ. ಇವರದ್ದೇ ಅಕ್ರಮ ಇಟ್ಟುಕೊಂಡು ನನ್ನನ್ನ ಕೆಣಕೋಕೆ ಬರಬೇಡಿ. ನಾನು ಯಾವುದೇ ಅಕ್ರಮ ಮಾಡಿಲ್ಲ. 1% ಕೂಡ ಇಲ್ಲ. ನನ್ನ ಕೆಣಕಿದರೇ ಪ್ರಮಾಣಕ್ಕೂ ತಯಾರಿ, ಎಲ್ಲದಕ್ಕೂ ಸಿದ್ಧ. ನನಗೆ ರಾಜಕಾರಣಕ್ಕೋಸ್ಕರ ಈತರದ ಅಕ್ರಮ, ಭ್ರಷ್ಟಾಚಾರ ಮಾಡುವ ಅವಶ್ಯಕತೆ ಇಲ್ಲ. ರಾಜಕಾರಣದ ಮೇಲೆ ನಾನು ನಿಂತಿಲ್ಲ. ಕೃಷಿ ಮಾಡಿ ಜೀವನ ಮಾಡುತ್ತಿರುವವನ್ನು ಎಂಬುದಾಗಿ ಗುಡುಗಿದರು.
ಇವರು ಪ್ರಾಡ್, ಭ್ರಷ್ಟಾಚಾರ ಮಾಡಿಯೇ ಈ ರೀತಿ ಹೇಳಿದ್ರೆ, ನಾನು ನೀಟಾಗಿ ಇದ್ದಂತವನು. ಪ್ರಾಮಾಣಿಕವಾಗಿ ಇರುವಂತನು. ಕೃಷಿ ಮಾಡಿ ಬಂದಂತ ಆದಾಯದಿಂದ ಸಹಾಯ ಮಾಡುವಂತನು ನಾನೇಗೆ ಹೇಳಬೇಕು ಅಲ್ವ ಎಂದರು.
ನೀವು ಮುಂದಿನ ಜಿಲ್ಲಾ ಪಂಚಾಯ್ತಿ ಚುನಾವಣೆ ಅಭ್ಯರ್ಥಿ ಎನ್ನಲಾಗುತ್ತಿದೆ. ಅದರ ಬಗ್ಗೆ ಏನು ಹೇಳುತ್ತೀರಿ ಅಂದಾಗ, ನೋಡಿ ಅವಕಾಶ ಬಂದ್ರೆ, ಜನಾಭಿಪ್ರಾಯ ಬಂದ್ರೆ ನಿಲ್ಲುತ್ತೇನೆ. ಜನಬೆಂಬಲ, ನಿಮ್ಮ ನಾಯಕತ್ವ ಬೇಕು ಅಂತ ಪಕ್ಷ ಒಪ್ಪಿದರೇ ಅದಕ್ಕೆ ಕೈ ಹಾಕುವುದಾಗಿ ತಿಳಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು