ಬೆಂಗಳೂರು : ಕೇರಳ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದ ಕೂಡಲೇ ಅಲ್ಲಿನ ಹೇಮಾ ಸಮಿತಿ ಮಾದರಿಯಲ್ಲಿ ಕನ್ನಡ ಚಿತ್ರರಂಗದಲ್ಲೂ ಕೂಡ ಅಂಥ ಒಂದು ಸಮಿತಿ ರಚನೆ ಮಾಡಬೇಕು ಎಂದು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೆಲ ನಟ ನಟಿಯರು ಮನವಿ ಸಲ್ಲಿಸಿದರು. ಈ ಒಂದು ವಿಚಾರವಾಗಿ ಕನ್ನಡದ ಹಿರಿಯ ಖ್ಯಾತ ನಟ ರಮೇಶರವಿಂದ ಪ್ರತಿಕ್ರಿಯೆ ನೀಡಿದ್ದು, ನಾನು ಆಕ್ಟಿವಿಸ್ಟ್ ಅಲ್ಲ ಆದರೂ ಬೆಂಬಲ ನೀಡುತ್ತೇನೆ ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನ್ಯಾಯ ಆಗಿರೋರಿಗೆ ನ್ಯಾಯ ಸಿಗಬೇಕು. ನಾನು ಆಕ್ಟಿವಿಸ್ ಅಲ್ಲ ಆದ್ರೂ ಬೆಂಬಲ ಕೊಡುತ್ತೇನೆ ಎಂದು ಕಮಿಟಿ ರಚನೆ ವಿಚಾರಕ್ಕೆ ರಮೇಶ್ ಅರವಿಂದ್ ಹೇಳಿಕೆ ನೀಡಿದ್ದಾರೆ. ಸಮಾಜದಲ್ಲಿ ಎಲ್ಲೇ ಕಿರುಕುಳ ನಡೆದರು ಅದು ತಪ್ಪು. ನಾನು ಸದ್ಯ ಆಕ್ಟಿವ್ಸ್ಟ್ ಅಲ್ಲ ಆದರೂ ಬೆಂಬಲ ಕೊಡುತ್ತೇನೆ ಎಂದು ಅವರು ಬೆಂಬಲ ಸೂಚಿಸಿದರು.
ಸಿನಿಮಾ ಅನ್ನೋದು ದೊಡ್ಡ ಸಾಗರ. ಇದರಲ್ಲಿ ನಾವೆಲ್ಲರೂ ಒಂದೇ ಫ್ಯಾಮಿಲಿ ಮತ್ತೆ ಕೆಲಸ ನಿರ್ವಹಿಸುತ್ತಾ ಬಂದಿದ್ದೇವೆ. ಯಾರಿಗೆ ಅನ್ಯಾಯ ಆದರೂ ಕೂಡ ನಾನು ಬೆಂಬಲ ನೀಡುತ್ತೇನೆ. ಕಳೆದ ಹಲವು ವರ್ಷಗಳಿಂದಲು ನಮ್ಮ ಸಮಾಜದಲ್ಲಿ ಗಂಡು ಹೆಣ್ಣು ಎಂಬ ಭೇದವಿಲ್ಲದೆ ಇಬ್ಬರಿಗೂ ಸಮಾನತೆ ನಿರ್ಮಾಣವಾಗುವತ್ತ ನಡೆದಿದೆ. ಆದರೆ ಲೈಂಗಿಕ ಕಿರುಕುಳ, ದೌರ್ಜನ್ಯ ಅನ್ನೋದು ಬಹಳ ತಪ್ಪು. ನಮ್ಮ ಒಂದು ಚಿತ್ರರಂಗದಲ್ಲಿ ಯಾರಿಗೆ ಅನ್ಯಾಯ ಆಗಿದ್ದರು ಅವರಿಗೆ ನಾನು ಬೆಂಬಲ ಕೊಡುತ್ತೇನೆ ಎಂದು ಅವರು ತಿಳಿಸಿದರು.