ಬೆಳಗಾವಿ : ಬೆಳಗಾವಿಯಲ್ಲಿ ರೈತರ ಪರವಾಗಿ ಬಿಜೆಪಿ ನಾಯಕರು ಹೋರಾಟ ನಡೆಸುತ್ತಿದ್ದು ಮಾಲನಿ ಸಿಟಿಯಿಂದ ಸುವರ್ಣಸೌಧಕ್ಕೆ ಮುತಿಗೆ ಹಾಕಲು ಯತ್ನಿಸಿದಾಗ ಬಿ.ವೈ ವಿಜಯೇಂದ್ರ ಸಿಟಿ ರವಿ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಇತ್ತ ಇನ್ನೊಂದು ಕಡೆ ಸದನದಲ್ಲಿ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಿಜವಾದ ವಿರೋಧ ಪಕ್ಷದ ನಾಯಕ ಅಂದರೆ ನಾನೇ. ನಾವು ಬೇಕಾದಾಗ ನಾವು ಬೇಕಾದಾಗ ಬರುವುದು ಬಿಡುವುದು ಅಲ್ಲ. ನಾವೇ ನಿಜವಾದ ನಿಷ್ಠಾವಂತ ಕಾರ್ಯಕರ್ತರು ನಾವೇ ಈ ಸದನದಲ್ಲಿ ನಿಜವಾದ ವಿರೋಧ ಪಕ್ಷದ ನಾಯಕ ಅಂದರೆ ನಾನೇ ಎಂದರು.
ನಾನು ಅಡ್ಜಸ್ಟ್ಮೆಂಟ್ ಗಿರಾಕಿ ಅಲ್ಲ. ನಾನು ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ನಾನು ಮುಖ್ಯಮಂತ್ರಿಗಳ ಕಚೇರಿಗೆ ಹೋಗಿಲ್ಲ ಯಾವ ಮಂತ್ರಿಗಳಿಗೆ ದಯಾಪರರಾಗಿ ಕೇಳಿಕೊಂಡಿಲ್ಲ. ಅದಕ್ಕಾಗಿ ನಾನೇ ವಿರೋಧ ಪಕ್ಷದ ನಾಯಕ ಬೇಕಿದ್ರೆ ಸ್ಪೀಕರ್ ಪಕ್ಕದಲ್ಲಿ ಒಂದು ಕುರ್ಚಿ ನನಗೆ ಅಲೋಟ್ಮೆಂಟ್ ಮಾಡಬೇಕು ಅಂತ ನಗೆ ಚಟಾಕಿ ಹಾರಿಸಿದರು.








