ಮಂಗಳೂರು : 40% ಕಮಿಷನ್ ಅಷ್ಟೆ ಅಲ್ಲದೆ ಎಲ್ಲಾ ಹಗರಣಗಳ ಕುರಿತು ಸಿಎಂ ಸಚಿವರಿಗೆ ಕೇಳಬೇಕು. ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ ಹೊರತು ಸರ್ಕಾರದಲ್ಲಿ ಇಲ್ಲ ಎಂದು ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ತಿಳಿಸಿದರು.
ಇಂದು ಅವರು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದ್ವೇಷ ಹಾಗೂ ಸೇಡಿನ ರಾಜಕಾರಣ ಮಾಡುವುದಿಲ್ಲ ಎಂದು ಮಂಗಳೂರಿನಲ್ಲಿ ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿದರು.ರಾಹುಲ್ ಗಾಂಧಿ ಭ್ರಷ್ಟಾಚಾರ ಸಹಿಸಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಯಾವುದೇ ರೀತಿಯ ಭ್ರಷ್ಟಾಚಾರ ಮಾಡಲ್ಲ ಎಂದಿದ್ದಾರೆ.
ಪಕ್ಷ ಕಾಲ ಕಾಲಕ್ಕೆ ಯಾವ ಯಾವ ನಿರ್ಣಯ ತೆಗೆದುಕೊಳ್ಳುತ್ತೆ ನೋಡೋಣ. 40% ಕಮಿಷನ್ ಆರೋಪದ ತನಿಖೆಯ ಬಗ್ಗೆ ಸಿಎಂ ಸಚಿವರಿಗೆ ಕೇಳಬೇಕು. ಈ ಬಗ್ಗೆ ಉತ್ತರ ಕೊಡಬೇಕಾದದ್ದು ಸರ್ಕಾರ. ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ ಹೊರತು ಸರ್ಕಾರದಲ್ಲಿ ಇಲ್ಲ. ಸರ್ಕಾರದಲ್ಲಿ ಏನ್ ನಡೆಯುತ್ತೆ ಅಂತ ಅಲ್ಲಿನ ಸದಸ್ಯರ ಬಳಿ ಕೇಳಬೇಕು ಎಂದು ಕಾಂಗ್ರೆಸ್ ಎಂಎಲ್ಸಿ ಬೇಕರಿ ಪ್ರಸಾದ ತಿಳಿಸಿದರು.