ಮಂಡ್ಯ : ನಾನು ಕೈಗಾರಿಕಾ ಮಂತ್ರಿ ಅಷ್ಟೆ ಕೈಗಾರಿಕಾ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಎಂದು ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು. ಕಾರಣಾಂತರಗಳಿಂದ ಮಂಡ್ಯಕ್ಕೆ ಭೇಟಿ ಕೊಡಲು ಆಗಿಲ್ಲ. ಪ್ರತಿನಿತ್ಯ ಜಿಲ್ಲೆಯ ಮಾಹಿತಿ ಪಡೆಯುತ್ತಿದ್ದೆ. ಮಾರುಕಟ್ಟೆ ಮಳಿಗೆ ನಿರ್ಮಾಣವಾಗಿದೆ. ಇಂದು ಉದ್ಘಾಟನೆ ಆಗಿದೆ. ಕೆಲಸದ ಒತ್ತಡದಲ್ಲೂ ಜಿಲ್ಲೆಗೆ ಸ್ವಲ್ಪ ಬರಲು ತಿರ್ಮಾನ ಮಾಡಿದ್ದೇನೆ. ಜಿಲ್ಲೆಯ ಜೊತೆಗೆ ರಾಜ್ಯ ಪ್ರವಾಸ ಮಾಡ್ತೇನೆ. ಹಲವು ಯೋಜನೆಗೆ ಚಾಲನೆ ಕೊಟ್ಟಿದ್ದೇನೆ ಎಂದರು.
ಈ ವರ್ಷ ಶಾಲಾ ಕಟ್ಟಡ, ಬಸ್ ನಿಲ್ದಾಣ, ಸಿಎಸ್ ಆರ್ ಫಂಡ್ ಮೂಲಕ ಅನುಷ್ಠಾನ. ಮೈಶುಗರ್ ಶಾಲೆ ಸ್ಕೂಲ್ ಕಾರ್ಯಕ್ರಮಕ್ಕೆ ಬಂದಿದೆ. ಅನುದಾನ ತರಿಸಿ ಕೊಡುವ ಜವಾಬ್ದಾರಿ ನನ್ನದು ಮೈಶುಗರ್ ಶಾಲೆಗೆ ಇತಿಹಾಸ ಇದೆ. ಖಾಸಗೀಕರಣ ಬೇಡೆ ಅಂತ ನೆರವು ಕೊಡಲು ನಾನು ಬದ್ದ. ಯಾರೋ ಸಣ್ಣದಾಗಿ ಮಾತನಾಡುವ ಅವಶ್ಯಕತೆ ಇಲ್ಲ. 10 ಕೋಟಿ ಅನುದಾನ ಅದಷ್ಟೂ ಬೇಗಾ ಚಾಲನೆ ಸಿಗುತ್ತೆ. ನನಗೆ ಸಿಕ್ಕ ಅವಕಾಶ ಕೆಲವು ಇಲಾಖೆಯಲ್ಲಿ ಅರ್ಥಿಕ ನೆರವು ತರಲು ಅವಕಾಶ ಇದೆ ಎಂದರು.
ನಾನು ಕೈಗಾರಿಕಾ ಮಂತ್ರಿ ಅಷ್ಟೆ ಕೈಗಾರಿಕಾ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ
ಪಕ್ಕದ ಆಂಧ್ರ ನಮ್ಮ ನಡೂವೆ ನಡೆಯುತ್ತಿರುವ ಪೈಪೋಟಿ. ಭದ್ರಾವತಿ ಕಾರ್ಖಾನೆ ನಿಲ್ಲಿಸಿದ್ದಾರೆ ಬೇಗ ಪ್ರಾರಂಭ ಮಾಡಲಾಗುತ್ತೆ ಎಂದು ಇದೆ ವೇಳೆ ತಿಳಿಸಿದರು. HMT ಕಾರ್ಖಾನೆ ಕೂಡ ಪುನರುಜ್ಜೀವ ಕೊಡಲು ಡಿಪಿಆರ್ ತಯಾರಾಗಿದೆ. ಕಾರ್ಖಾನೆ ತರಲು ಪ್ರಯತ್ನ ರಾಜ್ಯ ಸರ್ಕಾರ ಸಹಕಾರ ಕೊಡಬೇಕು.ಕುಮಾರಣ್ಣ ಕೇಂದ್ರ ಕೈಗಾರಿಕಾ ಮಂತ್ರಿ ಇದ್ದಾರೆ. ನಿರುದ್ಯೋಗ ಸಮಸ್ಯೆ ಪರಿಹರಿಸಲು ಜನರು ಆಸೆ ಇಟ್ಟುಕೊಂಡಿದ್ದಾರೆ. ಜಿಲ್ಲೆಯ ಜನರಿಗೆ ಮನವಿ ಮಾಡ್ತೇನೆ ಎಂದು ತಿಳಿಸಿದರು.