ಹಾಸನ: ಸಿಎಂ ಬಸವರಾಜ ಬೊಮ್ಮಾಯಿ ಅವರು ಶೀಘ್ರ ಸಂಪುಟ ವಿಸ್ತರಣೆ ಮಡಲಾಗುವುದು ಎಂದು ಹೇಳಿಕೆ ವಿಚಾರವಾಗಿ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
BIGG NEWS: ಕೌಟುಂಬಿಕ ಕಲಹ ಹಿನ್ನೆಲೆ; ಗಂಡನಿಂದಲೇ ಪತ್ನಿ ಬರ್ಬರ ಹತ್ಯೆ
ಹಾಸನದಲ್ಲಿ ಮಾತನಾಡಿದ ಅವರು, ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಸಿಎಂಗೆ ಗೊತ್ತು. ಕೇಂದ್ರ ನಾಯಕರ ಜೊತೆ ಸಿಎಂ ಬೊಮ್ಮಾಯಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಕೇಂದ್ರ ನಾಯಕರು, ಸಿಎಂ ಬೊಮ್ಮಾಯಿ ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ಗುತ್ತಿಗೆದಾರ ಸಂತೋಷ್ ಕೆ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್. ಈಶ್ವರಪ್ಪ ಹೆಸರು ಕೇಳಿಬಂದ ಹಿನ್ನೆಲೆ ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
BIGG NEWS: ಕೌಟುಂಬಿಕ ಕಲಹ ಹಿನ್ನೆಲೆ; ಗಂಡನಿಂದಲೇ ಪತ್ನಿ ಬರ್ಬರ ಹತ್ಯೆ
ಈಶ್ವರಪ್ಪ ಸಚಿವರಾಗಿಯೇ ಚುನಾವಣೆಗೆ ಹೋಗುತ್ತೇನೆಂದು ಪಣತೊಟ್ಟಿರುವ ಹಿನ್ನೆಲೆ ಸಚಿವ ಸ್ಥಾನ ತಮಗೆ ನೀಡಲೇಬೇಕೆಂದು ಹಠ ಹಿಡದಿದ್ದಾರೆ.ಷಡ್ಯಂತ್ರ ಮಾಡಿ ನನ್ನ ಮೇಲೆ ಕೇಸ್ ಹಾಕಿಸಿದ್ದಾರೆ ಅಂತ ಇಡಿ ರಾಜ್ಯದ ಬಿಜೆಪಿ ಕಾರ್ಯಕರ್ತರಿಗೆ ಗೊತ್ತು. ಆ ಕೇಸ್ನಿಂದ ಮುಕ್ತರಾಗಿ ಬರಲಿ ಎಂದು ಎಲ್ಲರ ಅಪೇಕ್ಷಿಯಿತ್ತು, ಕ್ಲೀನ್ ಚಿಟ್ ಸಿಕ್ತು, ಮುಗಿತು. ಈಗ ತೀರ್ಮಾನ ಕೇಂದ್ರ ನಾಯಕರದ್ದು, ಬಹಳ ಚರ್ಚೆ ಮಾಡುವ ವಿಚಾರ ಏನಲ್ಲ ಎಂದರು.