Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮುಂಜಾನೆ 3 ಗಂಟೆಗೆ ನಿಮ್ಮ ಕಣ್ಣುಗಳು ಏಕೆ ತೆರೆಯುತ್ತವೆ ಮತ್ತು ಅದರ ನಿಜವಾದ ಅರ್ಥವೇನು ?

17/02/2026 6:54 AM

ಫೆಬ್ರವರಿ ತಿಂಗಳಲ್ಲಿ ಕೇವಲ 28 ದಿನಗಳು ಮಾತ್ರ ಏಕೆ? 2000 ವರ್ಷಗಳಷ್ಟು ಹಳೆಯದಾದ ಈ ರಹಸ್ಯ ತಿಳಿಯಿರಿ

17/02/2026 6:50 AM

OMG : `ಸಿಮ್ ಕಾರ್ಡ್‌’ಗಳಿಂದ 200 ಗ್ರಾಂ `ಚಿನ್ನ’ ಹೊರತೆಗೆದ ಯುವಕ !

17/02/2026 6:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾಂಗ್ರೆಸ್ ಸರ್ಕಾರ ಅಂತ್ಯವಾಗಲಿದೆ ಎಂಬ ದೇವೇಗೌಡರ ಶಾಪವನ್ನು ಆಶೀರ್ವಾದವಾಗಿ ಸ್ವೀಕರಿಸುತ್ತೇನೆ : ಸಿಎಂ ಸಿದ್ದರಾಮಯ್ಯ
KARNATAKA

ಕಾಂಗ್ರೆಸ್ ಸರ್ಕಾರ ಅಂತ್ಯವಾಗಲಿದೆ ಎಂಬ ದೇವೇಗೌಡರ ಶಾಪವನ್ನು ಆಶೀರ್ವಾದವಾಗಿ ಸ್ವೀಕರಿಸುತ್ತೇನೆ : ಸಿಎಂ ಸಿದ್ದರಾಮಯ್ಯ

By kannadanewsnow0506/01/2024 11:47 AM

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಂತ್ಯವಾಗಲಿದೆ ಎಂಬ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ನನ್ನ ಮತ್ತು ಡಿಕೆ ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಂತ್ಯವಾಗಲಿದೆ ಎಂದು ಮಾಜಿ ಪ್ರಧಾನಿ HD ದೇವೇಗೌಡ ಅವರು ಭವಿಷ್ಯ ನುಡಿದಿದ್ದಾರೆ. ವಯಸ್ಸಿನಲ್ಲಿ ದೊಡ್ಡವರಾದ ದೇವೇಗೌಡರ ಈ ಶಾಪವನ್ನು ಆಶೀರ್ವಾದ ಎಂದೇ ಸ್ವೀಕರಿಸಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

ಅವರಿಗೆ ಅವರ ಪಕ್ಷಕ್ಕೆ ದೀರ್ಘ ಕಾಲ ಆಯುರಾರೋಗ್ಯವನ್ನು ಪರಮಾತ್ಮ ಕರುಣಿಸಲಿ ಎಂದು ಹಾರೈಸುತ್ತೇನೆ. ಜಾತ್ಯತೀತ ಜನತಾಪಕ್ಷ ಎನ್ನುವುದು ಬಿಜೆಪಿಯ ಬಿ ಟೀಮ್ ನನ್ನ ಮಾತನ್ನು ಒಪ್ಪಿಕೊಂಡಿದ್ದಕ್ಕೆ ಜೆಡಿಎಸ್ ಗೆ ಅಭಿನಂದನೆ ಸೈದ್ಧಾಂತಿಕ ನಿಲುವನ್ನು ಸ್ಪಷ್ಟಪಡಿಸಿದ್ದಕ್ಕೆ ಜೆಡಿಎಸ್ ಪಕ್ಷಕ್ಕೆ ಅಭಿನಂದಿಸುತ್ತೇನೆ ಮುಂದಿನ ಚುನಾವಣೆ ಜಾತ್ಯತೀತ ಕೋಮುವಾದಿ ಶಕ್ತಿಗಳ ಸಂಘರ್ಷ ಜನ ಮುಂದಿನ ಚುನಾವಣೆಯಲ್ಲಿ ಸರಿಯಾದ ಆಯ್ಕೆ ಮಾಡುವ ವಿಶ್ವಾಸವಿದೆ ಎಂದು ಟ್ವಿಟರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ, ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡಬೇಕು, ಶಾಪ ಕೊಡಬಾರದು. ದಶಕಗಳ ಕಾಲ ಜಾತ್ಯತೀತತೆಯ ಕಿರೀಟ ಧರಿಸಿಕೊಂಡು ಬಂದಿದ್ದ ಗೌಡರು ಇಳಿಗಾಲದಲ್ಲಿ ಅದನ್ನು ಕೆಳಗೆಸೆದು ಕೋಮುವಾದಿ ಕಿರೀಟವನ್ನು ಧರಿಸಿಕೊಳ್ಳಬೇಕಾಗಿ ಬಂದಿರುವುದರಿಂದ ನೊಂದು ಹತಾಶೆಯಿಂದ ಇಂತಹ ಹೇಳಿಕೆ ನೀಡಿರಬಹುದೆಂದು ಭಾವಿಸಿದ್ದೇನೆ. ತಾವು ಹೇಳಿದ್ದು ತಪ್ಪು ಎಂದು ಅವರಿಗೆ ಪ್ರಾಮಾಣಿಕವಾಗಿ ಅನುಸರಿಸಿದರೆ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬಹುದು.

ಯಾವ ರಾಜಕೀಯ ಪಕ್ಷ ಕೂಡಾ ಮತ್ತೊಂದು ರಾಜಕೀಯ ಪಕ್ಷದ ಅಂತ್ಯವನ್ನು ಬಯಸಬಾರದು. “ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ” ಎಂಬ ಸೊಕ್ಕಿನ ಮಾತುಗಳನ್ನು ಆಡುತ್ತಿರುವ ಬಿಜೆಪಿಯ ಗಾಳಿ HD ದೇವೇಗೌಡ ಅವರಿಗೂ ಸೋಕಿದ ಹಾಗಿದೆ. ಅದಕ್ಕೆ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಇದು “ಸಂಘ”ದೋಷದ ಫಲ.

ಜಾತ್ಯತೀತ ಜನತಾದಳ ಅಂತ್ಯವಾಗಬಾರದು ಎಂದು ನಾನು ಹೃತ್ಪೂರ್ವಕವಾಗಿ ಹಾರೈಸುತ್ತೇನೆ. ಅದೇ ರೀತಿ HD ದೇವೇಗೌಡ ಅವರು ಇನ್ನಷ್ಟು ಕಾಲ ರಾಜಕೀಯದಲ್ಲಿ ಸಕ್ರಿಯರಾಗಿರಬೇಕೆಂದು ಕೂಡಾ ನಾನು ಬಯಸುತ್ತೇನೆ. ಆದರೆ ಜೆಡಿಎಸ್ ಮತ್ತು ಅವರ ಹೊಸ ಮಿತ್ರ ಬಿಜೆಪಿ ಶಾಶ್ವತವಾಗಿ ವಿರೋಧ ಪಕ್ಷದಲ್ಲಿಯೇ ಇರಬೇಕೆಂದು ನಾನು ಬಯಸುತ್ತೇನೆ. ನಮ್ಮ ಕಾಂಗ್ರೆಸ್ ಪಕ್ಷ ಈ ಬಯಕೆ ಈಡೇರಿಕೆಗೆ ನಿರಂತರ ಪ್ರಯತ್ನ ಮಾಡಲಿದೆ.

ಜಾತ್ಯತೀತ ಜನತಾ ಪಕ್ಷ ಎನ್ನುವುದು “ಬಿಜೆಪಿಯ ಬಿ ಟೀಮ್” ಎಂದು ಹಿಂದಿನಿಂದಲೇ ನಾನು ಹೇಳಿಕೊಂಡು ಬಂದಿದ್ದೇನೆ. ನನ್ನ ಮಾತನ್ನು ಒಪ್ಪಿಕೊಂಡು ತಮ್ಮ ಸೈದ್ದಾಂತಿಕ ನಿಲುವನ್ನು ಸ್ಪಷ್ಟಪಡಿಸಿದ್ದಕ್ಕೆ ಜೆಡಿಎಸ್ ಪಕ್ಷವನ್ನು ಅಭಿನಂದಿಸುತ್ತೇನೆ. ಈ ಪಕ್ಷದ ಜಾತ್ಯತೀತ ಮುಖವನ್ನು ನಿಜ ಎಂದು ನಂಬಿ ಒಂದಷ್ಟು ಸೆಕ್ಯುಲರ್ ಮತದಾರರು ದಾರಿತಪ್ಪುವುದನ್ನು ಜೆಡಿಎಸ್ ಪಕ್ಷದ ಈ ನಿಲುವು ತಪ್ಪಿಸಿದೆ. ಇದು ಮುಂದಿನ ಚುನಾವಣೆಯನ್ನು ಜಾತ್ಯತೀತ ಮತ್ತು ಕೋಮುವಾದಿ ಶಕ್ತಿಗಳ ನಡುವಿನ ನೇರ ಸಂಘರ್ಷವಾಗಿ ಪರಿವರ್ತಿಸಿದೆ. ಜಾತ್ಯತೀತತೆ ಮತ್ತು ಸೌಹಾರ್ದತೆಯ ಪರಂಪರೆಯ ಕರ್ನಾಟಕದ ಮತದಾರರು ಮುಂದಿನ ಚುನಾವಣೆಗಳಲ್ಲಿ ಸರಿಯಾದ ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸ ನನಗೆ ಇದೆ ಎಂದು ಟ್ವೀಟ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಜಾತ್ಯತೀತ ಜನತಾ ಪಕ್ಷ ಎನ್ನುವುದು "ಬಿಜೆಪಿಯ ಬಿ ಟೀಮ್" ಎಂದು ಹಿಂದಿನಿಂದಲೇ ನಾನು ಹೇಳಿಕೊಂಡು ಬಂದಿದ್ದೇನೆ. ನನ್ನ ಮಾತನ್ನು ಒಪ್ಪಿಕೊಂಡು ತಮ್ಮ ಸೈದ್ದಾಂತಿಕ ನಿಲುವನ್ನು ಸ್ಪಷ್ಟಪಡಿಸಿದ್ದಕ್ಕೆ ಜೆಡಿಎಸ್ ಪಕ್ಷವನ್ನು ಅಭಿನಂದಿಸುತ್ತೇನೆ. ಈ ಪಕ್ಷದ ಜಾತ್ಯತೀತ ಮುಖವನ್ನು ನಿಜ ಎಂದು ನಂಬಿ ಒಂದಷ್ಟು ಸೆಕ್ಯುಲರ್ ಮತದಾರರು ದಾರಿತಪ್ಪುವುದನ್ನು… pic.twitter.com/AHuxPYXiDO

— Siddaramaiah (@siddaramaiah) January 6, 2024

Share. Facebook Twitter LinkedIn WhatsApp Email

Related Posts

ಫೆಬ್ರವರಿ ತಿಂಗಳಲ್ಲಿ ಕೇವಲ 28 ದಿನಗಳು ಮಾತ್ರ ಏಕೆ? 2000 ವರ್ಷಗಳಷ್ಟು ಹಳೆಯದಾದ ಈ ರಹಸ್ಯ ತಿಳಿಯಿರಿ

17/02/2026 6:50 AM2 Mins Read

ಜನನ ಪ್ರಮಾಣಪತ್ರ & ಆಧಾರ್‌ ನಲ್ಲಿ ಹೆಸರು ಬೇರೆ ಬೇರೆಯಾಗಿದೆಯೇ? ಜಸ್ಟ್ ಈ ರೀತಿ ಚೇಂಜ್ ಮಾಡಿ !

17/02/2026 6:45 AM2 Mins Read

BIG NEWS : ಇಂದು ಕೋಲಾರದಲ್ಲಿ ದೇಶದ ಮೊದಲ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಮೋದಿಯಿಂದ ಚಾಲನೆ !

17/02/2026 6:43 AM1 Min Read
Recent News

ಮುಂಜಾನೆ 3 ಗಂಟೆಗೆ ನಿಮ್ಮ ಕಣ್ಣುಗಳು ಏಕೆ ತೆರೆಯುತ್ತವೆ ಮತ್ತು ಅದರ ನಿಜವಾದ ಅರ್ಥವೇನು ?

17/02/2026 6:54 AM

ಫೆಬ್ರವರಿ ತಿಂಗಳಲ್ಲಿ ಕೇವಲ 28 ದಿನಗಳು ಮಾತ್ರ ಏಕೆ? 2000 ವರ್ಷಗಳಷ್ಟು ಹಳೆಯದಾದ ಈ ರಹಸ್ಯ ತಿಳಿಯಿರಿ

17/02/2026 6:50 AM

OMG : `ಸಿಮ್ ಕಾರ್ಡ್‌’ಗಳಿಂದ 200 ಗ್ರಾಂ `ಚಿನ್ನ’ ಹೊರತೆಗೆದ ಯುವಕ !

17/02/2026 6:48 AM

2014 ರಿಂದ 2026 ರವರೆಗೆ ಮೋದಿ ಸರ್ಕಾರದ 12 ವರ್ಷಗಳು ಭಾರತದ ಭದ್ರತೆಗೆ ‘ಸುವರ್ಣ ಯುಗ’ : ಅಮಿತ್ ಶಾ

17/02/2026 6:46 AM
State News
KARNATAKA

ಫೆಬ್ರವರಿ ತಿಂಗಳಲ್ಲಿ ಕೇವಲ 28 ದಿನಗಳು ಮಾತ್ರ ಏಕೆ? 2000 ವರ್ಷಗಳಷ್ಟು ಹಳೆಯದಾದ ಈ ರಹಸ್ಯ ತಿಳಿಯಿರಿ

By kannadanewsnow5717/02/2026 6:50 AM KARNATAKA 2 Mins Read

ಫೆಬ್ರವರಿ ತಿಂಗಳು ಕೇವಲ 28 ದಿನಗಳನ್ನು ಏಕೆ ಹೊಂದಿದೆ? ಈ ಪ್ರಶ್ನೆ ಅನೇಕ ಜನರಿಗೆ ನೆನಪಿಗೆ ಬರುತ್ತದೆ. ಫೆಬ್ರವರಿ ಇತರ…

ಜನನ ಪ್ರಮಾಣಪತ್ರ & ಆಧಾರ್‌ ನಲ್ಲಿ ಹೆಸರು ಬೇರೆ ಬೇರೆಯಾಗಿದೆಯೇ? ಜಸ್ಟ್ ಈ ರೀತಿ ಚೇಂಜ್ ಮಾಡಿ !

17/02/2026 6:45 AM

BIG NEWS : ಇಂದು ಕೋಲಾರದಲ್ಲಿ ದೇಶದ ಮೊದಲ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಮೋದಿಯಿಂದ ಚಾಲನೆ !

17/02/2026 6:43 AM

ಜಸ್ಟ್ 3999 ರೂ. ಹೂಡಿಕೆ : ರೈಲ್ವೆಯಲ್ಲಿ ಈ ಬ್ಯುಸಿನೆಸ್ ಶುರು ಮಾಡಿ ತಿಂಗಳಿಗೆ 50 ಸಾವಿರ ರೂ.ವರೆಗೆ ಸಂಪಾದಿಸಬಹುದು !

17/02/2026 6:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.