ಹೈದರಾಬಾದ್: ಹೈದರಾಬಾದ್ನ ಮುಶೀರಾಬಾದ್ನಲ್ಲಿ ಭಾನುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಯಾರೊಂದಿಗಾದರೂ ಫೋನ್ನಲ್ಲಿ ಮಾತನಾಡುತ್ತಿರುವುದನ್ನು ನೋಡಿದ ಅಪ್ರಾಪ್ತ ಬಾಲಕಿಯನ್ನು ಆಕೆಯ ಮಲತಂದೆ ಕತ್ತು ಹಿಸುಕಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ.
ಮೃತಳನ್ನು ಯಾಸ್ಮಿನ್ ಉನ್ನೀಸಾ ಎಂದು ಗುರುತಿಸಲಾಗಿದೆ. ಮೊಹಮ್ಮದ್ ತೌಫಿಕ್ ಎಂದು ಗುರುತಿಸಲಾದ ಮಲತಂದೆ, ಭಾನುವಾರ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ತನ್ನ ಮಲಮಗಳಾದ ಯಾಸ್ಮಿನ್ ಫೋನ್ನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದ್ದು, ತಕ್ಷಣವೇ ಆಕೆ ಫೋನ್ ಅನ್ನು ಕಿತ್ತುಕೊಂಡಿದ್ದಾನೆ. ನಂತ್ರ, ಫೋನ್ ಅನ್ನು ಅನ್ ಲಾಕ್ ಮಾಡುವಂತೆ ಮೊಹಮ್ಮದ್ ಕೇಳಿದಾಗ, ಅದಕ್ಕೆ ಯಾಸ್ಮಿನ್ ನಿರಾಕರಿಸಿದ್ದಾಳೆ. ಇದು ಇವರಿಬ್ಬರ ನಡುವಿನ ಜಗಳಕ್ಕೆ ಕಾರಣವಾಗಿದೆ.
ನಂತ್ರ, ತೌಫಿಕ್ ಮುಂಜಾನೆ 3 ಗಂಟೆ ಸುಮಾರಿಗೆ ಯಾಸ್ಮಿನ್ಳನ್ನು ಕತ್ತು ಹಿಸುಕಿ ಕೊಲೆ ಮಾಡಿ, 6 ಗಂಟೆ ಸುಮಾರಿಗೆ ಪೊಲೀಸರ ಮುಂದೆ ಶರಣಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇನ್ನೂ, ಈ ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
WATCH VIDEO: ಡ್ರೈವಿಂಗ್ ಕಲಿಯುವಾಗ ಮೂವರು ಮಕ್ಕಳಿಗೆ ಕಾರು ಡಿಕ್ಕಿ… ಅಪಘಾತದ ಭಯಾನಕ ವಿಡಿಯೋ ವೈರಲ್
WATCH VIDEO: ಡ್ರೈವಿಂಗ್ ಕಲಿಯುವಾಗ ಮೂವರು ಮಕ್ಕಳಿಗೆ ಕಾರು ಡಿಕ್ಕಿ… ಅಪಘಾತದ ಭಯಾನಕ ವಿಡಿಯೋ ವೈರಲ್