ಹೈದರಾಬಾದ್: ಇಲ್ಲಿನ ಚಾದರ್ಘಾಟ್ನಲ್ಲಿ ತೆರೆದ ಮ್ಯಾನ್ಹೋಲ್ಗೆ ಅಡ್ಡಲಾಗಿ ಬಿದ್ದಿದ್ದ ಬ್ಯಾರಿಕೇಡ್ ಅನ್ನು ಮರುನಿರ್ಮಿಸಲು ಮುಂದಾದ ವ್ಯಕ್ತಿಯ ಮೇಲೆ ವೇಗವಾಗಿ ಬಂದ ಕಾರು ಹರಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತನನ್ನು ಜಾಹೇದ್ ಎಂದು ಗುರುತಿಸಲಾಗಿದ್ದು, ಇವರು ಮಲಕಪೇಟೆಯ ಸೊಹೈಲ್ ಹೋಟೆಲ್ ಉದ್ಯೋಗಿಯಾಗಿದ್ದಾರೆ. ಮಂಗಳವಾರ ರಾತ್ರಿ ಜಾಹೇದ್ ಚಾದರ್ಘಾಟ್ ರಸ್ತೆಯಲ್ಲಿ ಅಪಾಯಕಾರಿ ಮ್ಯಾನ್ಹೋಲ್ನ ಮುಂದೆ ಹಾಕಲಾಗಿದ್ದ ಎಚ್ಚರಿಕೆಯ ಬ್ಯಾರಿಕೇಡ್ ಅನ್ನು ಮರುನಿರ್ಮಿಸಲು ಪ್ರಯತ್ನಿಸುತ್ತಿದ್ದಾಗ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ತಕ್ಷಣವೇ ಅವರನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆಯ ಸಿಸಿಟಿವಿ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
A man was run over by a speeding car in Hyderabad, while he was trying to warn others about a dangerous open manhole. He was trying to re-erect a barricade around it when the car hit him. CCTV visuals of the incident have emerged: #Hyderabad #GHMC pic.twitter.com/qi5A1r5mxF
— TheNewsMinute (@thenewsminute) July 13, 2022
ಪೊಲೀಸರು ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನೂ, ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಬಳಸಿಕೊಂಡು ಕಾರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ನಗರದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಮತ್ತು ರಾತ್ರಿಯ ಸಮಯವಾದ್ದರಿಂದ ಈ ಪ್ರದೇಶದಲ್ಲಿ ಗೋಚರತೆ ಇಲ್ಲದಿರುವುದು ಕೂಡ ಅಪಘಾತಕ್ಕೆ ಕಾರಣವಾಗಿದೆ.