ಹೈದ್ರಾಬಾದ್ : ಹೈದರಾಬಾದ್ನ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಸ್ಟೆಲ್ ಮೆಸ್‌ನಲ್ಲಿ ತಮಗೆ ಬಡಿಸಿದ ಆಹಾರದಲ್ಲಿ ಇಲಿ ಇರುವುದನ್ನು ಕಂಡು ಅಸಹ್ಯಪಟ್ಟಿದ್ದಾರೆ. ಚಟ್ನಿಯ ಪಾತ್ರೆಯಲ್ಲಿ ಇಲಿ ಮುಳುಗೇಳುತ್ತಿದ್ದ ವಿಡಿಯೋವನ್ನು ಅವರು ಎಕ್ಸ್ನಲ್ಲಿ ಶೇರ್ ಮಾಡಿದ್ದಾರೆ.
ಹೌದು ಹಾಸ್ಟೆಲ್ ಅಲ್ಲಿ ಕಳಪೆ ಆಹಾರ, ಹುಳ ಬರುವುದನ್ನ ನೋಡಿದ್ದೆವು ಕೇಳಿದ್ದೆವು ಆದರೆ ಇಲ್ಲೊಂದು ಹಾಸ್ಟೆಲ್ ಅಲ್ಲಿ ಚಟ್ನಿಯಲ್ಲಿ ಜೀವಂತ ಇಲಿಯೊಂದು ಈಜಾಡಿದೆ.ಹೈದರಾಬಾದ್ನ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮೆಸ್‌ನಲ್ಲಿ ನೀಡಿದ ಆಹಾರದಲ್ಲಿ ಇಲಿ ಕಂಡುಬಂದಿದೆ ಎಂದು ಹೇಳಿಕೊಂಡಿದ್ದಾರೆ. ಆ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಇದು ಗಂಭೀರ ಆರೋಗ್ಯ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
ತೆಲಂಗಾಣದ ಹಾಸ್ಟೆಲ್‌ನಲ್ಲಿನ ಅಡುಗೆಯಲ್ಲಿ ಇಲಿ ಪತ್ತೆಯಾಗಿದೆ. ಇದು ಭಯಾನಕವಾದ ವಿಡಿಯೋ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದೆ.ದೊಡ್ಡ ಪಾತ್ರೆಯಲ್ಲಿ ಇರಿಸಲಾಗಿರುವ “ಚಟ್ನಿ”ಯಲ್ಲಿ ಇಲಿ ಈಜುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕೆಲವು ವಿದ್ಯಾರ್ಥಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಇದನ್ನು ರೆಕಾರ್ಡ್ ಮಾಡುತ್ತಿರುವುದನ್ನು ನೋಡಬಹುದು.
🚨 A rat was found in a dish in the hostel in Telangana. Scary! pic.twitter.com/iFyVZ7GOfk
— Indian Tech & Infra (@IndianTechGuide) July 9, 2024