ಬಳ್ಳಾರಿ : ಹೈದರಾಬಾದ್ ಮೂಲದ ವೈದ್ಯೆಗೆ ಮೋಸ ಮಾಡಿ ಮದುವೆಯಾದ ಬಳ್ಳಾರಿ ಮೂಲದ ಇಂಜಿನಿಯರ್, ಇದೀಗ ಮತ್ತೊಂದು ಎರಡನೇ ಮದುವೆಯಾಗೋ ಮೂಲಕ ವೈದ್ಯೆಗೆ ವರದಕ್ಷಿಣೆ ವಂಚನೆ ಮಾಡಿದ ಆರೋಪ ಬಹಿರಂಗವಾಗಿದೆ.
BIGG NEWS : ರೈತ ಸಮುದಾಯಕ್ಕೆ ಬಿಗ್ ಶಾಕ್ : ಉಚಿತ ವಿದ್ಯುತ್ ಪೂರೈಕೆ ಸೌಲಭ್ಯಕ್ಕೆ ಕತ್ತರಿ!
ಹೈದರಾಬಾದ್ ಮೂಲದ ವೈದ್ಯೆ ಮೌನಿಕಾ ಅವರು ಬಳ್ಳಾರಿ ಮೂಲದ ಇಂಜಿನಿಯರ್ ರಘುರಾಮ ರೆಡ್ಡಿ ಜೊತೆ 2019ರಲ್ಲಿ ಮದುವೆ ಆಗಿದ್ದರು. ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿರುದಾಗಿ ಸುಳ್ಳು ಹೇಳಿ 50 ಲಕ್ಷ ನಗದು, ಒಂದು ಕೆಜಿ ಬಂಗಾರ ಹಾಗೂ ಅರ್ಧ ಕೆಜಿ ಬೆಳ್ಳಿಯನ್ನು ರುಘುರಾಮ್ ವರದಕ್ಷಿಣೆ ಪಡೆದುಕೊಂಡಿದ್ದ. ಮದುವೆ ಆಗಿ ಎರಡು ತಿಂಗಳು ಕೂಡ ಸಂಸಾರ ಮಾಡದ ರಘುರಾಮ ಹಣಕ್ಕಾಗಿ ಹೆಂಡ್ತಿಗೆ ಕಿರುಕುಳ ನೀಡುತ್ತಿದ್ದಾನೆ.
BIGG NEWS : ರೈತ ಸಮುದಾಯಕ್ಕೆ ಬಿಗ್ ಶಾಕ್ : ಉಚಿತ ವಿದ್ಯುತ್ ಪೂರೈಕೆ ಸೌಲಭ್ಯಕ್ಕೆ ಕತ್ತರಿ!
ಆತ ನಿತ್ಯ ಹಣಕ್ಕಾಗಿ ವೈದ್ಯೆಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ. ಅಷ್ಟೊಂದು ವರದಕ್ಷಿಣೆ ನೀಡಿದರೂ ಆತನ ಧನದಾಹ ತೀರಿರಲಿಲ್ಲ. ಹೀಗಾಗಿ ನಿತ್ಯವೂ ಮೋನಿಕಾಗೆ ನರಕ ತೋರಿಸುತ್ತಿದ್ದ.
ಆತನ ಕುಟುಂಬವು ಇದಕ್ಕೆ ಕುಮ್ಮಕ್ಕು ನೀಡಿತ್ತು. ರಘುರಾಮನ ಕಾಟ ಸಹಿಸಲಾರದೆ ಮೋನಿಕಾ ಮನೆಯಿಂದ ಹೊರ ಬಂದು, ಠಾಣೆಯಲ್ಲಿ ಮೆಟ್ಟಿಲೇರಿದ್ದು, ಆತನಾಗಲಿ ಅಥವಾ ಕುಟುಬಂಸ್ಥರಾಗಲಿ ತಲೆ ಕೆಡಿಸಿಕೊಂಡಿರಲಿಲ್ಲ
BIGG NEWS : ರೈತ ಸಮುದಾಯಕ್ಕೆ ಬಿಗ್ ಶಾಕ್ : ಉಚಿತ ವಿದ್ಯುತ್ ಪೂರೈಕೆ ಸೌಲಭ್ಯಕ್ಕೆ ಕತ್ತರಿ!
ಮೋನಿಕಾ ಮನೆ ಬಿಟ್ಟು ಬಂದಿದ್ದನ್ನೇ ಲಾಭ ಮಾಡಿಕೊಂಡ ರಘುರಾಮ ಈಗ ಮತ್ತೊಂದು ಮದುವೆಯಾಗಿದ್ದಾನೆ. ಎರಡನೇ ಮದುವೆ ವಿಷಯ ಗೊತ್ತಾಗಿ, ರಘುರಾಮನ ಮನೆಗೆ ವೈದ್ಯೆ ಹಾಗೂ ಕುಟುಂಬಸ್ಥರು ಹೋದಾಗ ಅವರ ಮೇಲೆ ಆತ ಮತ್ತು ಆತನ ಕುಟುಂಬ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ. ವೈದ್ಯೆ ಹಾಗೂ ಕುಟುಂಬಸ್ಥರಿಗೆ ಮುಖ, ಕೈ-ಕಾಲುಗಳಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ.
BIGG NEWS : ರೈತ ಸಮುದಾಯಕ್ಕೆ ಬಿಗ್ ಶಾಕ್ : ಉಚಿತ ವಿದ್ಯುತ್ ಪೂರೈಕೆ ಸೌಲಭ್ಯಕ್ಕೆ ಕತ್ತರಿ!
ಇದೀಗ ವೈದ್ಯೆ ನೀಡಿದ ದೂರಿನನ್ವಯ ಮೌನಿಕಾ ಗಂಡ ರಘುರಾಮ ರೆಡ್ಡಿ, ತಂದೆ ನಾಗೀರೆಡ್ಡಿ ಹಾಗೂ ಸಹೋದರ ಹರೀಶ್ ರೆಡ್ಡಿಯನ್ನು ಬಂಧಿಸಲಾಗಿದೆ. ಈ ಮೂವರು ಸೇರಿದಂತೆ ಕುಟುಂಬದ ಏಳು ಜನರ ಮೇಲೆ ದೂರು ದಾಖಲಾಗಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ ಮತ್ತು ಅವರಿಗಾಗಿ ಶೋಧ ಕಾರ್ಯ ಆರಂಭವಾಗಿದೆ.
BIGG NEWS : ರೈತ ಸಮುದಾಯಕ್ಕೆ ಬಿಗ್ ಶಾಕ್ : ಉಚಿತ ವಿದ್ಯುತ್ ಪೂರೈಕೆ ಸೌಲಭ್ಯಕ್ಕೆ ಕತ್ತರಿ!