ಮೈಸೂರು : ಖ್ಯಾತ ಸಾಹಿತಿ ಭಾನು ಮುಷ್ತಾಕ್ ಅವರನ್ನು ಈ ಬಾರಿ ದಸರಾ ಉದ್ಘಾಟಕರಾಗಿ ಸರ್ಕಾರ ಆಹ್ವಾನ ನೀಡಿದೆ. ಈ ವಿಚಾರವಾಗಿ ವಿಪಕ್ಷಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಲ್ಲದೆ ಡಿಸಿಎಂ ಡಿಕೆ ಶಿವಕುಮಾರ್ ಸಹ ಚಾಮುಂಡಿ ಬೆಟ್ಟ ಏನು ಹಿಂದೂಗಳ ಆಸ್ತಿಯಲ್ಲ ಎಂದು ಮತ್ತೊಂದು ವಿವಾದದ ಹೇಳಿಕೆ ನೀಡಿದ್ದು, ವಿಪಕ್ಷಗಳ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ಇದೀಗ ಸಿಎಂ ಸಿದ್ದರಾಮಯ್ಯ ಹೈದರಾಲಿ ಟಿಪ್ಪು ಸುಲ್ತಾನ್ ಅವರು ದಸರಾ ಆಚರಣೆ ಮಾಡಿರಲಿಲ್ವಾ? ಇದು ಜಾತ್ಯತೀತ ಹಬ್ಬವಾಗಿದೆ ಎಂದು ಸ್ಪಷ್ಟನೆ ನೀಡಿದರು.
ಮೈಸೂರಲ್ಲಿ ಮಾತನಾಡಿದ ಅವರು, ದಸರಾ ಸಾಂಸ್ಕೃತಿಕವಾಗಿ ಮಾಡುವ ನಾಡ ಹಬ್ಬ. ಇಂತಹವರೇ ಉದ್ಘಾಟನೆ ಮಾಡಬೇಕು ಅಂತ ಏನು ಇಲ್ಲ ಇಂಥ ಧರ್ಮದವರೇ ಉದ್ಘಾಟನೆ ಮಾಡಬೇಕು ಅಂತ ಏನಿಲ್ಲ. ಹೈದರಾಲಿ ಟಿಪ್ಪು ದಸರಾ ಆಚರಣೆ ಮಾಡಿರಲಿಲ್ವಾ? ಮಿರ್ಜಾ ಇಸ್ಮಾಯಿಲ್ ದಿವಾನರಾಗಿ ಇರ್ಲಿಲ್ವಾ? ಇದು ಧರ್ಮಾತೀತವಾದ ಜಾತ್ಯಾತೀತವಾದ ಹಬ್ಬವಾಗಿದೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ದಸರಾ ನಾಡಹಬ್ಬ ಹಾಗಾಗಿ ಭಾನುಷ್ ಅವರನ್ನು ಆಹ್ವಾನಿಸಿದ್ದೇವೆ, ದಸರಾ ಉದ್ಘಾಟನೆಗೆ ಸಾಹಿತಿ ಭಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದೇವೆ ಎಂದು ಹೇಳಿಕೆ ವಿಚಾರವಾಗಿ ಹೀಗೆ ಹೇಳುವವರು ರೋಗಿಗಳು. ಭಾನು ಅವರು ಧನ ತಿನ್ನುವುದನ್ನು ನೋಡಿದ್ದು ಯಾರು? ಡೋಂಗಿಗಳು ಮಾತನಾಡುವುದು ಅವರು ಡೋಂಗಿಗಳು ಡೋಂಗಿಗಳ ರಾಜಕೀಯ ಹೇಳಿಕೆಗೆ ತಲೆಕೆಡಿಸಿಕೊಳ್ಳಲ್ಲ ಎಂದು ಆರ್ ಅಶೋಕ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಗರಂ ಆದರು.