ಬೆಂಗಳೂರು: ಲೈಂಗಿಕ ನಿರಾಸಕ್ತಿ ಹೊಂದಿದ್ದ ಗಂಡನನ್ನು ಪ್ರಿಯಕರನ ಜೊತೆಗೆ ಸೇರಿಕೊಂಡು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದ ರಾಕೇಶ್ ತೋಮಾಂಗ (52) ಕೊಲೆಯಾದ ವ್ಯಕ್ತಿಯಾಗಿದ್ದು, ಪತ್ನಿ ದೇವಿ (46) ಮತ್ತು ಪ್ರಿಯಕರ ಅಸ್ಸೋಂ ಮೂಲದ ಜೈನುಲ್ ಅಲಿ(28) ಎಂಬುವರನ್ನು ಬಂಧಿಸಲಾಗಿದೆ.
ಘಟನೆಯಲ್ಲಿ ರಾಕೇಶ್ ಕುಡಿದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಇದಲ್ಲೇ ಈ ಹಿಂದೆ ದೇವಿ ಮತ್ತು ಜೈನುಲ್ ಅಲಿ ಓಡಿ ಹೋಗಿದ್ದರು. ಬಳಿಕ ವಾಪಸ್ಸಾಗಿದ್ದ ವೇಳೆಯಲ್ಲಿ ರಾಕೇಶ್ ತನ್ನ ಪತ್ನಿಗೆ ಅಲಿ ಸಹವಾಸ ಬಿಡುವಂತೆ ಹೇಳಿದ್ದನೆ. ಇದಲ್ಲದೇ ಪತ್ನಿ ದೇವಿ ಪ್ರಿಯಕರನ ಬಳಿ ತನ್ನ ಹೇಳಿಕೊಂಡಿದ್ದಾಳೆ. ಈ ನಡುವೆ ನ.6 ರಂದು ಗಂಡನಿಗೆ ಮದ್ಯ ಕುಡಿಸಿ, ಕಬಾಬ್ ನೀಡಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕರಣ ಸಂಬಂಧ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.