ಮಥುರಾ: ವ್ಯಕ್ತಿಯೊಬ್ಬರಿಗೆ ಮಥುರಾ ರೈಲ್ವೆ ನಿಲ್ದಾಣದಲ್ಲಿ ಹಠಾತ್ ಹೃದಯಾಘಾತವಾಗಿದ್ದು, ಇದರಿಂದ ಎಚ್ಚೆತ್ತುಕೊಂಡ ಪತ್ನಿ ಪತಿಯ ಬಾಯಿಗೆ ಬಾಯಿಟ್ಟು ಉಸಿರು ತುಂಬಿ ಜೀವ ಉಳಿಸಿರುವ ಘಟನೆ ಉತ್ತರ ಪ್ರದೇಶದ ಮಥುರಾ ರೈಲ್ವೆ ನಿಲ್ದಾಣದಲ್ಲಿ ಶನಿವಾರ ನಡೆದಿದೆ.
70 ವರ್ಷದ ಕೇಶವನ್ ಎಂಬುವವರಿಗೆ ಶನಿವಾರ ಬೆಳಗ್ಗೆ ಮಥುರಾ ಜಂಕ್ಷನ್ನಲ್ಲಿ ಇದ್ದಕ್ಕಿದ್ದಂತೇ ಹೃದಯಾಘಾತವಾಗಿದೆ. ಆಗ ಆವರ ಜೊತೆಯಲ್ಲೇ ಇದ್ದ ಪತ್ನಿ ತಮ್ಮ ಬುದ್ದಿವಂತಿಕೆ ಹಾಗೂ ಧೈರ್ಯ ಕಳೆದುಕೊಳ್ಳದೆ ತನ್ನ ಪತಿಗೆ ಸಿಪಿಆರ್ (ಕಾರ್ಡಿಯೋಪಲ್ಮನರಿ ರೆಸಸಿಟೇಶನ್) ಕೊಟ್ಟು ಜೀವ ಉಳಿಸಿದ್ದಾರೆ.
ಮಹಿಳೆ ಪತಿಯ ಬಾಯಿಗೆ ತನ್ನ ಬಾಯಿಟ್ಟು ಉಸಿರು ತುಂಬುವ ಮೂಲಕ ತನ್ನ ಪತಿಗೆ ಮರು ಜೀವ ನೀಡಿದದ್ದಾಳೆ. ಇದರಿಂದಾಗಿ ಕೇಶವನ್ ಅವರ ಹೃದಯ ಬಡಿತ ಮತ್ತು ಉಸಿರಾಟ ಮುಂದುವರೆಯಿತು.
ಇದೇ ವೇಳೆ ಜಂಕ್ಷನ್ನಲ್ಲಿದ್ದ ಆರ್ಪಿಎಫ್ ಸಿಬ್ಬಂದಿ ಕೂಡ ಮಹಿಳೆಗೆ ಸಹಾಯ ಮಾಡಿದ್ದಾರೆ. ಆರ್ಪಿಎಫ್ ಯೋಧರು ಮಹಿಳೆಯ ಪತಿಯ ಕೈ ಕಾಲುಗಳಿಗೆ ಮಸಾಜ್ ಮಾಡುತ್ತಲೇ ಇದ್ದರು. ಈ ಪ್ರಯತ್ನದ ಫಲವೇ ಹೃದಯಾಘಾತವಾದರೂ ಮಹಿಳೆಯ ಗಂಡನ ಪ್ರಾಣ ಉಳಿಸಿದೆ.
BIG NEWS: ರೈತರ ‘ಪಂಪ್ ಸೆಟ್’ಗಳಿಗೆ ಮೀಟರ್ ಅಳವಡಿಕೆ : ಸಚಿವ ಸುನೀಲ್ ಕುಮಾರ್ ಸ್ಪಷ್ಟನೆ
BIGG NEWS : ಮೀಸಲಾತಿ ಹೆಚ್ಚಳದ ನಿರೀಕ್ಷೆಯಲ್ಲಿರುವ `SC-ST’ ಸಮುದಾಯಕ್ಕೆ ಸಿಹಿಸುದ್ದಿ