ಥೈಲ್ಯಾಂಡ್: ಇಲ್ಲಿನ ವ್ಯಕ್ತಿಯೊಬ್ಬ ತನ್ನ ಪತ್ನಿಯೊಂದಿಗೆ ಪ್ರವಾಸಕ್ಕೆ ತೆರಳಿದ್ದನು. ಕ್ರಿಸ್ ಮಸ್ ರಜೆಯ ವೇಳೆ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಮೂತ್ರ ವಿಸರ್ಜನೆಗಾಗಿ ಕಾರು ನಿಲ್ಲಿಸಿದ್ದಾರೆ. ಹೀಗೆ ಮೂತ್ರ ವಿಸರ್ಜನೆಯ ಬಳಿಕ, ಪತ್ನಿಯನ್ನೇ ಮರೆತು ತೆರಳಿದ್ದು ಮಾತ್ರ ಬರೋಬ್ಬರಿ 150 ಕಿಲೋ ಮೀಟರ್ ದೂರವಾಗಿದೆ. ಆ ಬಗ್ಗೆ ಮುಂದೆ ಓದಿ.
ಥೈಲ್ಯಾಂಡ್ ನ ಬೂಂಟಮ್ ಚೈಮೂನ್ ಮತ್ತು ಪತ್ನಿ ಅಮ್ನುಯ್ ಚೈಮೂರ್ ಕ್ರಿಸ್ ಮಸ್ ರಜೆಯ ಕಾರಣ, ಮಹಾ ಸರಖಮ್ ಪ್ರಾಂತ್ರಯದಲ್ಲಿರುವ ತಮ್ಮ ಊರಿಗೆ ರಸ್ತೆ ಮೂಲಕ ಕಾರಿನಲ್ಲಿ ಪ್ರವಾಸಕ್ಕೆಂದು ತೆರಳಿದ್ದಾರೆ. ಮುಂಜಾನೆ 3 ಗಂಟೆಯ ವೇಳೆಯಲ್ಲಿ ಮೂತ್ರ ವಿಸರ್ಜನೆಗಾಗಿ ಕಾರು ನಿಲ್ಲಿಸಿದ್ದಾನೆ. ಈ ವೇಳೆ ಗ್ಯಾಸ್ ಸ್ಟೇಷನ್ ಬಳಿ ಯಾಕೆ ನಿಲ್ಲಿಸಲಿಲ್ಲ. ಇಲ್ಲಿ ನಿಲ್ಲಿಸಿದ್ದೀಯ ಎಂಬುದಾಗಿ ಪತ್ನಿ, ಪತಿಗೆ ಕೇಳಿದ್ದಾರೆ. ಇದಕ್ಕೆ ಪತಿ ಪ್ರತಿಕ್ರಿಯಿಸಿಲ್ಲ. ಹೀಗಾಗಿ ಸಿಟ್ಟಿನಿಂದ ಪತ್ನಿ ಕಾಡಿನ ಕಡೆಗೆ ನಡೆದು ಸಾಗಿದ್ದಾಳೆ. ಇದನ್ನೂ ಬೂಂಟಮ್ ಗಮನಿಸಿಲ್ಲ.
ತನ್ನ ಪತ್ನಿಯೊಂದಿಗೆ ತೆರಳುತ್ತಿರೋ ವಿಷಯವನ್ನೇ ಮರೆತಂತ ಆತ, ಮೂತ್ರ ವಿಸರ್ಜನೆಯ ಬಳಿಕ ತನ್ನ ಪಾಡಿಗೆ ತಾನು ಕಾರು ಹತ್ತಿ ಹೊರಟಿದ್ದಾನೆ. ಇತ್ತ ಕಾಡಿನಿಂದ ಹೊರಬಂದಂತ ಆತನ ಪತ್ನಿ ಅಮ್ನುಯ್ ಚೈಮೂರ್ ಪತಿ ಇರದಿದ್ದನ್ನು ಕಂಡು ಭಯಗೊಂಡಿದ್ದಾಳೆ. ಹೇಗೋ ಸುಮಾರು 20 ಕಿಲೋ ಮೀಟರ್ ಸಾಗಿ, ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಕಬಿನ್ ಬುರಿ ಜಿಲ್ಲೆಯನ್ನು ತಲುಪಿದ್ದಾರೆ.
ಹೀಗೆ ತಲುಪಿದಂತ ಆಕೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದ್ರೇ ತನ್ನ ಮೊಬೈಲ್ ಕಾರಿನಲ್ಲೇ ಬಿಟ್ಟ ಕಾರಣ ಆಕೆಗೆ ಪತಿಯ ನಂಬರ್ ತಿಳಿಯದೇ ಸಂಪರ್ಕಿಸಲು ಕಷ್ಟವಾಗಿದೆ. ಅಂತಿಮವಾಗಿ ಪೊಲೀಸರ ಸಹಾಯದೊಂದಿಗೆ ಪತಿಯನ್ನು ಬೆಳಿಗ್ಗೆ 8 ಗಂಟೆಯ ವೇಳೆಗೆ ಸಂಪರ್ಕಿಸಿದ್ದಾಳೆ. ಈ ವೇಳೆಗಾಗಲೇ ಆಕೆಯ ಪತಿ ಬೂಂಟಮ್ ಚೈಮೂನ್ ಸಾಗಿದ್ದು ಮಾತ್ರ ಬರೋಬ್ಬರಿ 159.6 ಕಿಲೋ ಮೀಟರ್ ಆಗಿತ್ತು. ಪತ್ನಿಯ ವಿಷಯ ತಿಳಿದು ಅಲ್ಲಿಂದ ವಾಪಾಸು ಮರಳಿ, ಮತ್ತೆ ಪತಿಯನ್ನು ಕರೆದುಕೊಂಡು ಮರಳು ಪ್ರಯಾಣಿಸಿರೋದಾಗಿ ತಿಳಿದು ಬಂದಿದೆ.
ಪೌರ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್: 42,000 ಪೌರ ನೌಕರರ ಖಾಯಂ, 2 ಸಾವಿರ ಸಂಕಷ್ಟ ಭತ್ಯೆ – ಸಿಎಂ ಬೊಮ್ಮಾಯಿ
Covid19: ಇನ್ನೂ ದಿನಗಳ ಕಾಲ ಎಚ್ಚರ ವಹಿಸಿ: ಜನವರಿಯಲ್ಲಿ ಕೋವಿಡ್ ಹೆಚ್ಚಳ ಸಾಧ್ಯತೆ – ಕೇದ್ರ ಆರೋಗ್ಯ ಸಚಿವಾಲಯ
BIGG NEWS : ಕೇಂದ್ರ ಸರ್ಕಾರದಿಂದ ‘ಹಳೆ ವಾಹನ ಮಾರಾಟ & ಖರೀದಿ’ ನಿಯಮ ಬದಲಾವಣೆ ; ಹೊಸ ರೂಲ್ಸ್ ಹೀಗಿವೆ.!