ಬೆಂಗಳೂರು: ಮನೆಯಲ್ಲಿ ಬೆತ್ತಲಾಗಿ ಓಡಾಡ್ತಾರೆ. ವಿಚಿತ್ರವಾಗಿ ವರ್ತಿಸುತ್ತಾರೆ. ವೀಡಿಯೋ ತೋರಿಸಿ ಲೈಂಗಿಕ ಕ್ರಿಯೆ ಮಾಡೋದಕ್ಕೆ ಒತ್ತಾಯಿಸ್ತಾರೆ ಅಂತ ಆರೋಪಿಸಿ ಪತ್ನಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತ್ನಿಯೇ ವೀಡಿಯೋ ಮಾಡಿಕೊಂಡು ತನಗೆ 30 ಲಕ್ಷ ಹಣ, ಚಿನ್ನಕ್ಕೆ ಬೇಡಿಕೆ ಇಟ್ಟಿರೋದಾಗಿ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರಿನ ವಿಲ್ಸನ್ ಗಾರ್ಡನ್ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ಮೇಘಶ್ರೀ ತನ್ನ ಪತಿ ಮಂಜುನಾಥ್ ವರ್ತನೆಯ ಬಗ್ಗೆ ದೂರು ನೀಡಿದ್ದರು. ಇದೀಗ ಈ ಕೇಸ್ ಗೆ ಬಿಗ್ ಟ್ವಿಸ್ಟ್ ಎನ್ನುವಂತೆ ಪತ್ನಿಯ ವಿರುದ್ಧ ಪತಿ ಕೂಡ ದೂರು ನೀಡಿದ್ದಾರೆ.
ಪತಿ ಮಂಜುನಾಥ್ ನೀಡಿರುವಂತ ದೂರಿನಲ್ಲಿ ಮೇಘಶ್ರೀ ಮಾಡಿರೋ ಆರೋಪ ಸುಳ್ಳು. ಆಕೆ ನನ್ನ ವೀಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ. 30 ಲಕ್ಷ ಹಣ, 50 ಗ್ರಾಂ ಚಿನ್ನ ನೀಡುವಂತೆ ಒತ್ತಾಯಿಸುತ್ತಿರುವುದಾಗಿ ಎಂದು ಹೇಳಿದ್ದಾರೆ.
ಇದಷ್ಟೇ ಅಲ್ಲದೇ ಮೇಘಶ್ರೀ ಇಬ್ಬರಿಗೆ ವಿಚ್ಛೇದನ ನೀಡಿ ನನ್ನ ಮದುವೆಯಾಗಿದ್ದಳು. ನನ್ನ ಮದುವೆಯಾದ ಮೂರೇ ತಿಂಗಳಲ್ಲಿ ಇದೀಗ ನನ್ನ ವಿರುದ್ಧವೂ ದೂರು ನೀಡಿದ್ದಾಳೆ. ಮೇಘಶ್ರೀಯನ್ನು ಒಂದೇ ಕಂಪನಿಯಲ್ಲಿ ಕೆಲಸ ಮಾಡುವಾಗ ಪರಿಚಯವಾಗಿ ಮಧುವೆ ಆಗಿದ್ವಿ. ಆಕೆ ಶೋಕಿ ಜೀವನಕ್ಕೆ ಬಿದ್ದು ಹೀಗೆಲ್ಲ ಮಾಡುತ್ತಿದ್ದಾಳೆ. ನಮ್ಮ ಇಬ್ಬರದ್ದೂ ಅಧಿಕೃತವಾಗಿ ಮದುವೆ ಆಗಿಲ್ಲ. ಆಕೆ ವಿವಾಹ ನೋಂದಣಿಗೆ ದಾಖಲೆಯನ್ನು ನೀಡಿಲ್ಲ ಎಂಬುದಾಗಿ ಆರೋಪಿಸಿದ್ದಾರೆ.
ನಾನು ಮೇಘಶ್ರೀ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧನಾಗಿದ್ದೇನೆ. ಆಕೆಯ ಮುಖವಾಡವನ್ನು ಪೊಲೀಸರ ಮುಂದೆ ಬಯಲು ಮಾಡುತ್ತೇನೆ. ಆಕೆ ನನ್ನ ಖಾಸಗಿ ವೀಡಿಯೋ ಇಟ್ಟುಕೊಂಡು 30 ಲಕ್ಷ ಹಣ, 50 ಗ್ರಾಂ ಚಿನ್ನ, ಐಪ್ಯಾಡ್, ಟ್ಯಾಬ್ ಪಡೆದಿದ್ದಾಳೆ ಎಂಬುದಾಗಿಯೂ ಮಂಜುನಾಥ್ ಆರೋಪಿಸಿದ್ದಾರೆ.
ಈಗ ಗ್ರಾಮ ಪಂಚಾಯ್ತಿಯಲ್ಲೇ ದೊರೆಯಲಿದೆ ’11ಇ ನಕ್ಷೆ’ ಸೇರಿದಂತೆ ಈ ಭೂ ದಾಖಲೆಗಳು: ಇಷ್ಟು ಶುಲ್ಕ ನಿಗದಿ
ರಾಜ್ಯದ `ಪಡಿತರ ಚೀಟಿದಾರರೇ’ ಗಮನಿಸಿ : ‘ರೇಷನ್ ಕಾರ್ಡ್’ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಮತ್ತೆ ಅವಕಾಶ.!








