ಬೆಂಗಳೂರು : ಧರ್ಮಸ್ಥಳದಲ್ಲಿ ನಡೆಯುತ್ತಿರುವಂತಹ SIT ಅಧಿಕಾರಿಗಳು ಅಸ್ಥಿಪಂಜರ ಶೋಧ ಕಾರ್ಯ ನಡೆಸುತ್ತಿದ್ದು, ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವಹಿಸಿದ್ದೇವೆ ಹಾಗಾಗಿ ತನಿಖೆ ಮುಗಿಯುವವರೆಗೆ ಈ ಕುರಿತು ನಾವು ಏನು ಮಾತನಾಡುವುದಿಲ್ಲ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಎಸ್ಐಟಿಗೆ ಪೊಲೀಸ್ ಸ್ಟೇಷನ್ ಪವರ್ ಒದಗಿಸಿದ ವಿಚಾರವಾಗಿ, ಪದೇಪದೇ ಪೊಲೀಸ್ ಸ್ಟೇಷನ್ ಗೆ ಹೋಗಿ ರಿಜಿಸ್ಟರ್ ಮಾಡಿ ಅನ್ನೋದರ್ ಬದಲಿಗೆ ಅವರಿಗೆ ಒಂದು ಅಧಿಕಾರ ಕೊಟ್ಟಿದ್ದೇವೆ ಎಸ್ಐಟಿಗೆ ದೂರು ಕೊಟ್ಟರೆ ಅವರೇ ಕೇಸ್ ದಾಖಲಿಸುತ್ತಾರೆ ಎಂದು ತಿಳಿಸಿದರು.
ಧರ್ಮಸ್ಥಳ ಹೆಸರು ಹಾಳಾಗಲು ಬಿಡಲ್ಲ ಎಂಬ ಹೇಳಿಕೆ ವಿಚಾರವಾಗಿ ಜನಾರ್ಧನ ಪೂಜಾರಿ ಹೇಳಿಕೆಗೆ ಪ್ರತಿಕ್ರಿಯೆಸಿದ ವಿರಾಮ ಸಚಿವ ಜಿ ಪರಮೇಶ್ವರ್ ಬಹಳಷ್ಟು ಹೇಳಿಕೆಗಳನ್ನು ನಾನು ಸಹ ಗಮನಿಸಿದ್ದೇನೆ ಎಸ್ ಐ ಟಿ ತನಿಖೆಯ ಮುಗಿಯುವವರೆಗೂ ಮಾತನಾಡುವುದು ಸಮಾಜವಲ್ಲ ಎಸ್ಐಟಿ ತನಿಖೆಯ ಆದ ಬಳಿಕವಷ್ಟೇ ವಾಸ್ತವಂಶ ಗೊತ್ತಾಗುತ್ತದೆ ಮಾಸ್ಕ್ ಮ್ಯಾನ್ 13 ಕಡೆ ಸ್ಥಳಗಳನ್ನ ತೋರಿಸಿದ್ದಾರೆ ಆದರೆ ಈಗ 16 ರಿಂದ 19 ಸ್ಥಳಗಳಾಗಿವೆ. ಎಸ್ ಐ ಟಿ ಅಧಿಕಾರಿಗಳು ಏನು ತೀರ್ಮಾನ ಮಾಡುತ್ತಾರೋ ನೋಡೋಣ. ಧರ್ಮಸ್ಥಳ ಪ್ರಕರಣದ ಬಗ್ಗೆ ಮಧ್ಯಂತರ ವರದಿಗೆ ಬಿಜೆಪಿ ಒತ್ತಡ ಸದನದಲ್ಲೂ ಚರ್ಚೆ ಆಗಬಹುದು ನೋಡೋಣ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.