ಬೆಳಗಾವಿ : ಇರಾನ್-ಇಸ್ರೇಲ್ ಯುದ್ಧ ಎಷ್ಟು ದಿನ ನಡೆಯುತ್ತೆ ಎಂಬ ಆತಂಕ ಕಾಡುತ್ತಿದೆ. ನಾನು ಹಾಗೂ ನನ್ನದು ಎನ್ನುವ ಕಾರಣಕ್ಕೆ ಯುದ್ಧ ನಡೆಯುತ್ತಿದೆ. ಎಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದಲ್ಲಿ ಆರ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ ಹೇಳಿಕೆ ನೀಡಿದರು.
ಯುದ್ಧ ಉಕ್ರೇನ್ ಹಾಗೂ ರಷ್ಯಾ ಯುದ್ಧದಷ್ಟು ಹಳೆಯದಲ್ಲ. ಆದರೂ ಈ ಯುದ್ಧ ಎಷ್ಟು ದಿನ ನಡೆಯುವ ಆತಂಕ ಕಾಡುತ್ತದೆ. ಅಮೆರಿಕಾದ ಊರ್ವ ವಕೀಲರು ಈ ಹಿಂದೆ ನನ್ನನ್ನು ಭೇಟಿಯಾಗಿದ್ದರು. ನನ್ನ ಭೇಟಿಯಾದ ಬಳಿಕ ಅವರು ನೌಕರಿಯನ್ನು ಕಳೆದುಕೊಂಡರು. ಹಿಂದೂ ಧರ್ಮದಲ್ಲಿ ಬೇರೆಯವರನ್ನು ಮತಾಂತರ ಮಾಡುವುದಿಲ್ಲ. ಆದಿಕಾಲದಿಂದಲೂ ನಾವು ನಮ್ಮ ದಾರಿಯಲ್ಲಿ ಸಾಗುತ್ತಿದ್ದೇವೆ.
ಭಾರತದ ಜೊತೆಗೆ ಎಲ್ಲಾ ರಾಷ್ಟ್ರಗಳು ಸ್ನೇಹ ಸಂಬಂಧದಿಂದ ಇವೆ. ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಮಾನವ ಧರ್ಮ ನೆನಪಿಸಿಕೊಳ್ಳಬೇಕು. ಮಾನವ ಧರ್ಮ ಹಾಗು ಹಿಂದೂ ಧರ್ಮವನ್ನು ನೆನಪಿಸಿಕೊಳ್ಳಬೇಕು. ಇಂದು ಸಮಾಜದಲ್ಲಿ ಪೂಜೆ ಹಾಗೂ ಆಹಾರ ಪದ್ಧತಿ ಬೇರೆ ಇದೆ. ಆದರೂ ನಾವೆಲ್ಲರೂ ಆದಿ ಕಾಲದಿಂದಲೂ ಒಗಟ್ಟಾಗಿ ಇದ್ದೇವೆ ಎಂದು ಯಡಿಯೂರಿನಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದರು.








