ಧಾರವಾಡ: ಭೂಗಳ್ಳರು ಪದ ಬಳಸಿದ್ದಕ್ಕೆ ಹೋರಾಟಗಾರ ಎಸ್, ಆರ್ ಹಿರೇಮಠ್ ವಿರುದ್ಧ ಮಾನಹಾನಿ ಪ್ರಕರಣವನ್ನು ರದ್ದು ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಹಿರೇಮಠ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾನಹಾನಿ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಈ ಕೆಲಸವನ್ನು ವಜಾಗೊಳಿಸಲು ಹಿರೇಮಠ ಅರ್ಜಿ ಸಲ್ಲಿಸಿದ್ದರು. ಆದ್ರೆ ಇಂದು ಧಾರವಾಡ ಜೆಎಂಎಫ್ ಸಿ ಕೋರ್ಟ್ ವಜಾ ಮಾಡಿದೆ. ಜೋಶಿ ವಿರುದ್ಧ ‘ಭೂಗಳ್ಳರು’ ಎನ್ನುವ ಪದ ಬಳಸಿ ನಿಂದಿಸಿದ್ದರು. ಇದರಿಂದ ಹಿರೇಮಠ್ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಜೋಶಿ ಅರ್ಜಿ ಪುರಸ್ಕರಿಸಿದ್ದ ಕೋರ್ಟ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು.
ಬಳಿಕ ಹಿರೇಮಠ್ ಜಾಮೀನು ಪಡೆದಿದ್ದರು.ಅಲ್ಲದೇ ಕೇಸ್ ವಜಾಕ್ಕೆ ಹೈಕೋರ್ಟ್ಗೆ ಅರ್ಜಿಸಲ್ಲಿದ್ದರು,. ಆದ್ರೆ, ಹೈಕೋರ್ಟ್ ಹಿರೇಮಠ್ ಅರ್ಜಿಯನ್ನು ವಜಾಗೊಳಿಸಿತ್ತು, ಬಳಿಕ ಈ ಕೇಸ್ ಮತ್ತೆ ಜೆಎಂಎಫ್ಸಿಗೆ ವರ್ಗವಾಗಿತ್ತು.
ಸಾರ್ವಜನಿಕ ಹಿತಾಸಕ್ತಿಗಾಗಿ ಹೇಳಿಕೆ ನೀಡಿದ್ದೆ. ಮಾನಹಾನಿ ಮಾಡೋ ಉದ್ದೇಶ ಇರಲಿಲ್ಲ. ಹೀಗಾಗಿ ಪ್ರಕರಣದಿಂದ ಕೈಬಿಡುವಂತೆ ಹಿರೇಮಠ್ ಧಾರವಾಡ ಜೆಎಂಎಫ್ಸಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಜೆಎಂಎಫ್ಸಿ ನ್ಯಾಯಾಲಯದಲ್ಲಿಯೂ ಸಹ ಹಿರೇಮಠ್ ಅರ್ಜಿ ವಜಾಗೊಳಿಸಿದೆ.