ಬೆಂಗಳೂರು: ಇಂದು ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ ಬಿಬಿಎಂಪಿಯಿಂದ ನಡೆಸಿದಂತ ಇ-ಖಾತಾ ಅರ್ಜಿ ಸಲ್ಲಿಕೆಗೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. 4,000 ಟೋಕನ್ ಗಳಲ್ಲಿ ವಿತರಣೆ ಮಾಡಿದ್ದರಲ್ಲಿ 1,679 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ 677 ಅರ್ಜಿಗಳಿಗೆ ಅಂತಿಮ ಇ-ಖಾತವನ್ನು ವಿತರಣೆ ಮಾಡಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲಹಂಕ ವಲಯದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಹಕಾರ ನಗರ ಆಟದ ಮೈದಾನದಲ್ಲಿ ಇಂದು ಏರ್ಪಡಿಸಿದ್ದ “ಬೃಹತ್ ಇ-ಖಾತಾ ಮೇಳ” ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ.
ಬ್ಯಾಟರಾಯಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 7 ವಾರ್ಡ್ ಗಳು ಬರಲಿದ್ದು, 3 ಉಪ ವಿಭಾಗಗಳಿಗೆ ಪ್ರತ್ಯೇಕವಾಗಿ ಬಣ್ಣ ಆಧಾರಿತ ಕೌಂಟರ್ ಗಳನ್ನು ಸ್ಥಾಪಿಸಲಾಗಿತ್ತು. ಅದರ ಜೊತೆಗೆ ಬೇರೆ ವಲಯಗಳಿಂದ ಬರುವವರಿಗೂ ಕೂಡಾ ಪ್ರತ್ಯೇಕ ಕೌಂಟರ್ ಅನ್ನು ಸ್ಥಾಪಿಸಲಾಗಿತ್ತು. 100 ಕ್ಕೂ ಹೆಚ್ಚು ಲ್ಯಾಪ್ ಟಾಪ್ಗಳ ವ್ಯವಸ್ಥೆ ಮಾಡಲಾಗಿದ್ದು, ಈ ಮೂಲಕ ಇ -ಖಾತೆಗಾಗಿ ಕೋರಿ ಬರುವ ನಾಗರಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದ ರೀತಿ ಇ-ಖಾತಾ ಮಾಡಿಕೊಡಲು ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಇ-ಖಾತಾ ಮೇಳಕ್ಕೆ ಹೆಚ್ಚಿನ ನಿರೀಕ್ಷೆಗೂ ಮೀರಿ ಬಂದ ಪರಿಣಾಮ ನಾಳೆಯೂ ಖಾತಾ ಮೇಳವನ್ನು ಮುಂದುವರಿಸಲಾಗುವುದು.
ಬೃಹತ್ ಇ-ಖಾತಾ ಮೇಳದಲ್ಲಿ 4,000 ಜನರಿಗೆ ಟೋಕನ್ ನೀಡಲಾಗಿದ್ದು, 1,679 ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲಾಗಿದೆ. ಅದರಂತೆ 677 ಅರ್ಜಿಗಳನ್ನು ಅನುಮೋದಿಸಿ ಸ್ಥಳದಲ್ಲಿಯೇ ಅಂತಿಮ ಇ-ಖಾತಾ ನೀಡಲಾಗಿದೆ ಎಂದು ಯಲಹಂಕ ವಲಯ ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್ ರವರು ತಿಳಿಸಿದ್ದಾರೆ.
BIG NEWS : 5 ವರ್ಷವೂ ಸರ್ಕಾರ ಸ್ಥಿರವಾಗಿರುತ್ತೆ ಸಿದ್ದರಾಮಯ್ಯರೆ ‘CM’ ಆಗಿರ್ತಾರೆ : ಸಚಿವ ಹೆಚ್ ಸಿ ಮಹದೇವಪ್ಪ
ಪ್ರಧಾನಿ ಮೋದಿ ಕಲಬುರ್ಗಿ ರೊಟ್ಟಿ ಯಶಸ್ಸನ್ನು ಪ್ರಸ್ತಾಪದ ಹಿಂದ ರಾಜ್ಯ ಸರ್ಕಾರದ ಶ್ರಮವಿದೆ: ಸಚಿವ ಪ್ರಿಯಾಂಕ್ ಖರ್ಗೆ