ನವದೆಹಲಿ : ಎಸ್ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ದೊಡ್ಡ ರಿಯಾಯಿತಿ ಕೊಡುಗೆಗಳು ಲಭ್ಯವಿದೆ. ಪ್ರಮುಖ ಇ-ಕಾಮರ್ಸ್ ಕಂಪನಿ ಅಮೆಜಾನ್ನಲ್ಲಿ(Amazon) ತ್ವರಿತ ರಿಯಾಯಿತಿ ಲಭ್ಯವಿದೆ. 10ರಷ್ಟು ತ್ವರಿತ ರಿಯಾಯಿತಿ ಪಡೆಯಬೋದು. ಆಯ್ದ ಉತ್ಪನ್ನಗಳಿಗೆ ಮಾತ್ರ ಆಫರ್ ಅನ್ವಯಿಸಲಿದೆ ಎಂದು SBI ಕಾರ್ಡ್ ಹೇಳಿದೆ. ಇನ್ನು ಗರಿಷ್ಠ 10,750 ರೂಪಾಯಿ ರಿಯಾಯಿತಿ ಪಡೆಯಬಹುದಾಗಿದೆ.
ಎಸ್ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಅಮೆಜಾನ್ನಲ್ಲಿ ದಿನಸಿ ಖರೀದಿಗೆ ಖರ್ಚು 300 ರೂಪಾಯಿ ರಿಯಾಯಿತಿ ಲಭ್ಯವಿದೆ. ಕನಿಷ್ಠ ವಹಿವಾಟು ಮೌಲ್ಯ ರೂ. 2,500. ಮೊಬೈಲ್ಗಳಲ್ಲೂ ಆಫರ್ಗಳಿವೆ. ಫೋನ್ ಖರೀದಿಗಳ ಮೇಲಿನ ರಿಯಾಯಿತಿಯನ್ನ ಪಡೆಯಲು, ಕನಿಷ್ಠ ವಹಿವಾಟು ಮೌಲ್ಯ ರೂ. 5 ಸಾವಿರ ಇರಬೇಕು. ಇಎಂಐ ಅಲ್ಲದ ವಹಿವಾಟುಗಳ ಮೇಲೆ ರೂ. 1250 ರಿಯಾಯಿತಿ ದೊರೆಯಲಿದೆ. ಆದ್ರೆ, ಅದೇ ಇಎಂಐ ವಹಿವಾಟುಗಳಲ್ಲಿ ಗರಿಷ್ಠ 1500 ರೂಪಾಯಿ ರಿಯಾಯಿತಿ ಪಡೆಯಬಹುದು.
30 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ಮೌಲ್ಯ 1500 ರಿಯಾಯಿತಿ ಪಡೆಯಬಹುದು. ಅಲ್ಲದೇ 50 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದರೆ, ಹೆಚ್ಚುವರಿ 1500 ರಿಯಾಯಿತಿ ಸಿಗಲಿದೆ. ಅಲ್ಲದೇ 75 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು 1,000 ರಿಯಾಯಿತಿ ಸಿಗಲಿದೆ. ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಕೊನೆಯ ವಹಿವಾಟು ನಡೆಸಿದ್ರೆ 5 ಸಾವಿರ ರಿಯಾಯಿತಿ ಲಭ್ಯವಿದೆ. ಈ ಬೋನಸ್ ಕೊಡುಗೆಗಳನ್ನ ಪ್ರತಿ ಕಾರ್ಡ್ಗೆ ಒಮ್ಮೆ ಮಾತ್ರ ರಿಡೀಮ್ ಮಾಡಿಕೊಳ್ಳಬಹುದಾಗಿದೆ.
ನೀವು SBI ಕ್ರೆಡಿಟ್ ಕಾರ್ಡ್ನಲ್ಲಿ ಈ ಆಫರ್ ಅವಧಿಯಲ್ಲಿ ಎಲ್ಲಾ ವರ್ಗಗಳನ್ನ ಸೇರಿಸಿದರೆ 10,750 ವರೆಗೆ ರಿಯಾಯಿತಿಯನ್ನ ಪಡೆಯಬಹುದು. ಆಫರ್ ಸೆಪ್ಟೆಂಬರ್ 21 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ನಿಮ್ಮ ಬಳಿ SBI ಕ್ರೆಡಿಟ್ ಕಾರ್ಡ್ ಇದ್ದರೆ ಈ ಆಫರ್ʼಗಳನ್ನ ಮಿಸ್ ಮಾಡಿಕೊಳ್ಳಬೇಡಿ. ಮೇಲಾಗಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸಹ SBI ಕ್ರೆಡಿಟ್ ಕಾರ್ಡ್ನಲ್ಲಿ ಕೊಡುಗೆಗಳನ್ನು ಹೊಂದಿದೆ. 10 ಪ್ರತಿಶತ ರಿಯಾಯಿತಿಯನ್ನ ತಕ್ಷಣ ಪಡೆಯಿರಿ. ಆದ್ದರಿಂದ, ಕೊಡುಗೆಗಳನ್ನು SBI ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಕೊಡುಗೆಗಳು ಎಂದು ಹೇಳಬಹುದು.