ನೇಪಾಳ : ಭಾರಿ ಹಿಮಪಾತವು ನೇಪಾಳದ ಮನಸ್ಲು ಬೇಸ್ ಕ್ಯಾಂಪ್ಗೆ ಭಾನುವಾರ ಅಪ್ಪಳಿಸಿದೆ. ವಾರದಲ್ಲಿ ಎರಡನೇ ಬಾರಿಗೆ ಈ ಅವಗಢ ಸಂಭವಿಸಿದೆ.
‘Airtel ಗ್ರಾಹಕ’ರಿಗೆ ಗುಡ್ ನ್ಯೂಸ್: ದೇಶದ 8 ನಗರಗಳಲ್ಲಿ ‘5ಜಿ ಸೇವೆ’ ಆರಂಭಕ್ಕೆ ಡೇಟ್ ಫಿಕ್ಸ್ | 5G services
ಸುಮಾರು 8,163 ಮೀಟರ್ಗಳಷ್ಟು ವಿಶ್ವದ ಎಂಟನೇ ಅತಿ ಎತ್ತರದ ಪರ್ವತವನ್ನು ಏರಲು ಪ್ರಯತ್ನಿಸುತ್ತಿರುವ ತಾಶಿ ಶೆರ್ಪಾ ಅವರು ರೆಕಾರ್ಡ್ ಮಾಡಿದ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಸುದ್ದಿ ಸಂಸ್ಥೆ ಘಟನೆಯನ್ನು ದೃಢಪಡಿಸಿದೆ.
ಮೆಗಾ ಹಿಮಪಾತವು ಬೇಸ್ ಕ್ಯಾಂಪ್ ಕಡೆಗೆ ಇಳಿಯುವುದು ವಿಡಿಯೋದಲ್ಲಿ ಗೋಚರಿಸುತ್ತದೆ. ಹಿಮಕುಸಿತದಿಂದ ಮೂರು 12ಕ್ಕೂ ಹೆಚ್ಚು ಟೆಂಟ್ಗಳು ನಾಶವಾಗಿವೆ. ಹಿಮಪಾತದಲ್ಲಿ ಕೆಲವು ಟೆಂಟ್ ಗಳು ನಾಶವಾಗಿರುವ ಬಗ್ಗೆ ಪರ್ವತಾರೋಹಿ ದೃಢಪಡಿಸಿದ್ದಾರೆ.
#WATCH | A fresh avalanche has hit the Manaslu Base Camp today. It has come a week after the last one, which had left two persons dead.#Nepal
(Video source: Tashi Lakpa Sherpa) pic.twitter.com/XLTbDVFq2G
— ANI (@ANI) October 2, 2022
ಈ ಹಿಮಕುಸಿತದಿಂದಾಗಿ, ಹಲವು ಕಂಪನಿಗಳು ಯಾತ್ರೆಯ ಶಿಬಿರಗಳನ್ನು ರದ್ದುಗೊಳಿಸಿವೆ.
ಕಳೆದ ವಾರ ಸಂಭವಿಸಿದ ಹಿಮಕುಸಿತವು ಅನೇಕ ಜನರನ್ನು ಗಾಯಗೊಳಿಸಿದ್ದು ಮಾತ್ರವಲ್ಲದೆ ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದರು. ನೇಪಾಳದ ಪ್ರವಾಸೋದ್ಯಮ ಇಲಾಖೆ ಪ್ರಕಾರ, ಸೆಪ್ಟೆಂಬರ್ 26 ರಂದು ಕ್ಯಾಂಪ್ ನಲ್ಲಿ ಸಂಭವಿಸಿದ ಹಿಮಪಾತದಿಂದ ಬೇಸ್ ಕ್ಯಾಂಪ್ನಿಂದ ಒಬ್ಬ ಭಾರತೀಯ ಸೇರಿದಂತೆ ಹನ್ನೆರಡು ಜನರು ಗಾಯಗೊಂಡಿದ್ದರು.