ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ ದಂಧೆ ಮುಂದುವರೆದಿದ್ದು, ಇದೀಗ ಬಡ್ಡಿ ಹಣ ನೀಡಿಲ್ಲ ಎಂದು ಯುವಕನಿಗೆ ಥಳಿಸಿದ ಆರೋಪ ಕೇಳಿಬಂದಿದೆ. ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಹುಬ್ಬಳ್ಳಿಯ ಪಿಂಜಾರ ಓಣಿಯ ನಿವಾಸಿ ಸಾಬಿರ್ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ.
ಮದುವೆಗೆ ಎಂದು ಪ್ರಕಾಶ್ ಅಂಬಿಗೇರ ಬಳಿ ಸಾಬೀರ್ 80,000 ಹಣವನ್ನು ಸಾಲವಾಗಿ ಪಡೆದುಕೊಂಡಿದ್ದ. ಒಂದುವರೆ ವರ್ಷದ ಹಿಂದೆ ತಿಂಗಳ ಬಡ್ಡಿಗೆ ಹಣ ಪಡೆದಿದ್ದ. ಈಗ ದಿನಕ್ಕೆ ರೂ.1,000 ನೀಡುವಂತೆ ಪ್ರಕಾಶ್ ಪಿಡಿಸುತ್ತಿದ್ದಾನೆ. ದುಡಿಮೆ ಇಲ್ಲ ಹಣ ನೀಡುವೆ ಅಂದರು ಸಹ ಮನೆಯಿಂದ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾನೆ.
ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ನನಗೆ ಏನಾದರೂ ಆದರೆ ಪ್ರಕಾಶ್ ಅಂಬಿಗೇರ್ ಕಾರಣ ಎಂದು ಸಾಬೀರ್ ತಿಳಿಸಿದ್ದಾನೆ. ಮೀಟರ್ ದಂಧೆ ವಿರುದ್ಧ ಹುಬ್ಬಳ್ಳಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾರ್ಯಚರಣೆ ನಡೆಸಲಾಗಿದ್ದು, ಆದರೂ ಕೂಡ ಮೀಟರ್ ಬಡ್ಡಿ ದಂಧೆ ನಿಂತಿಲ್ಲ.