ಹುಬ್ಬಳ್ಳಿ : ಕಲಘಟಗಿ ತಾಲೂಕು ಮಿಶ್ರಿಕೋಟಿ ಕ್ರಾಸ್ ಹತ್ತಿರದ ಪಾಟೀಲ್ ಎಂಬವರ ಗೋದಾಮಿನ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿದ ಕಲಘಟಗಿ ಠಾಣೆ ಪೊಲೀಸರು, ಸುಮಾರು 32 ಲಕ್ಷ ರೂ. ಮೌಲ್ಯದ ನಕಲಿ ಮದ್ಯ ವಶಪಡಿಸಿಕೊಂಡಿದ್ದಾರೆ.
ಗೋದಾಮಿನಲ್ಲಿ ನಕಲಿ ಮದ್ಯಕ್ಕೆ ಅಮಲು ಬರುವ ಪದಾರ್ಥ, ಬಣ್ಣ ಮಿಶ್ರಣ ಮಾಡಿ ಖಾಲಿ ಬಾಟಲ್‌ಗಳಿಗೆ ತುಂಬಿ ದುಬಾರಿ ಬ್ರಾಂಡ್‌ನ ಸಿದ್ದಿ ಲೇಬಲ್ ಅಂಟಿಸಿ ನಕಲಿ ಮದ್ಯ ತಯಾರಿಕೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಗೋದಾಮಿಗೆ ದಾಳಿ ನಡೆಸಿದ ಕಲಘಟಗಿ ಪೊಲೀಸರು, 32 ಲಕ್ಷ ರೂ. ಮೌಲ್ಯದ ನಕಲಿ ಮದ್ಯ ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ.
ಹುಬ್ಬಳ್ಳಿಯ ವಿನಾಯಕ ಮನೋಹರ ಜಿತೂರಿ, ಆನಂದ ನಗರದ ವಿನಾಯಕ ಅಶೋಕ ಸಿದ್ದಿಂಗ, ಚನ್ನಪೇಟೆಯ ಈಶ್ವರ ಅರ್ಜುನ ಪವಾರ ಹಾಗೂ ನೇಕಾರ ನಗರದ ರೋಹಿತ ರಾಜೇಶ್ ಅರಸಿದ್ಧಿ ಎಂಬವರನ್ನು ಬಂಧಿಸಿದ್ದಾರೆ.