ಹುಬ್ಬಳ್ಳಿ : ಇತ್ತೀಚಿಗೆ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಮನೆಗೆ ನುಗ್ಗಿ ಯುವತಿ ಅಂಜಲಿ ಅಂಬಿಗೇರಳನ್ನು ಭೀಕರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹುಬ್ಬಳ್ಳಿಯ 3ನೇ ಹೆಚ್ಚುವರಿ ದಿವಾಣಿ ಮತ್ತು JMFC ಕೋರ್ಟ್ ಆರೋಪಿ ವಿಶ್ವಗೆ ಜೂನ್ 16 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
ಆರೋಪಿ ವಿಶ್ವ ಅಲಿಯಾಸ್ ಗಿರೀಶ್ ಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದು, ಜೂನ್ 16ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಲಾಗಿದೆ. ಆರೋಪಿ ವಿಶ್ವನ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಸಿಐಡಿ ಅಧಿಕಾರಿಗಳು ಕೋರ್ಟಿಗೆ ಹಾಜರುಪಡಿಸಿದ್ದರು.ವಿಚಾರಣೆ ಬಳಿಕ ಜೂ.16 ರವರೆಗೆ ನ್ಯಾಯಂಗ ಬಂಧನಕ್ಕೆ ನೀಡಿ ಎಂದು ಇದೀಗ ಕೋರ್ಟ್ ಆದೇಶ ಹೊರಡಿಸಿದೆ. ಹುಬ್ಬಳ್ಳಿಯ 3ನೇ ಹೆಚ್ಚುವರಿ ದಿವಾಣಿ ಹಾಗೂ JMFC ಕೋರ್ಟ್ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.
ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಆರೋಪಿ ವಿಶ್ವ ಅಂಜಲಿ ಮನೆಗೆ ನುಗ್ಗಿ ನಸುಕಿನ ಜಾವಾದಲ್ಲಿ ಭೀಕರವಾಗಿ ಕೊಲೆ ಮಾಡಿದ್ದ ಅದಾದ ಬಳಿಕ ಅಲ್ಲಿಂದ ಪರಾರಿಯಾಗಿ ದಾವಣಗೆರೆಗೆ ಹೋಗಿದ್ದ ನಂತರ ಇಲ್ಲಿಂದ ವಾಪಸ್ ಬರುವ ವೇಳೆ ರಿಯಲಿ ಕೂಡ ಮಹಿಳೆಯ ಜೊತೆಗೆ ಜಗಳವಾಡಿ ಅವಳ ಮೇಲೆ ಕೂಡ ಹಲ್ಲೆ ಮಾಡಿರಲಿಲ್ಲ ಜಗದಿದ್ದ ನಂತರ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಂತರ ಪ್ರಕರಣವನ್ನು ಸಿಐಡಿ ಗೆ ವಹಿಸಿದ ಬಳಿಕ ಸಿಐಡಿ ಅಧಿಕಾರಿಗಳು ಆತನನ್ನು ಆಸ್ಪತ್ರೆಯಲ್ಲಿ ವಿಚಾರಣೆ ಮಾಡಿ ನಂತರ ಆತನನ್ನು ಕರೆದುಕೊಂಡು ಸ್ಥಳ ಮಹಜರು ನಡೆಸಿದ್ದರು. ಬಳಿಕ ಕೋರ್ಟ್ ಕೆಲವು ದಿನಗಳವರೆಗೆ ಸಿಐಡಿ ಕಸ್ಟರ್ಡಿಗೆ ನೀಡಿತ್ತು. ಇದೀಗ ಇಂದು ಕಸಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಜೂನ್ 16 ರವರೆಗೆ ವಿಶ್ವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.