ಹುಬ್ಬಳ್ಳಿ : ಹುಬ್ಬಳ್ಳಿಯ ಖ್ಯಾತ ಉದ್ಯಮಿ ಅಶೋಕ ನಗರದಲ್ಲಿರುವ ಉದ್ಯಮಿ ಗಣೇಶ ಸೇಠ್ ನಿವಾಸದ ಮೇಲೆ ಐಟಿ ದಾಳಿ ನಡೆಸಿದ್ದು, ಸತತವಾಗಿ 10 ಗಂಟೆಗಳಿಂದ ಐ ಟಿ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ಹಾಗೂ ಶೋಧ ಕಾರ್ಯ ಮುಂದುವರೆದಿದೆ.
ಹುಬ್ಬಳ್ಳಿಯಲ್ಲಿ ಉದ್ಯಮಿ ಗಣೇಶ್ ಶೆಟ್ ಮನೆ ಮೇಲೆ ಐಟಿ ದಾಳಿ ನಡೆಸಿದೆ. ಏಕಕಾಲಕ್ಕೆ ನಾಲ್ಕು ಕಡೆಗಳಲ್ಲಿ ಐಟಿ ಅಧಿಕಾರಿಗಳಿಂದ ದಾಳಿ ನಡೆಸಲಾಗಿದ್ದು, ಪರಿಶೀಲನೆ ನಡೆಸುತ್ತಿದೆ.ಉದ್ಯಮಿ ಗಣೇಶ ಸೇಟ ಮನೆ ಕಚೇರಿ ಹಾಗೂ ಹೋಟೆಲ್ ಗಳ ಮೇಲೆ ಐಟಿ ದಾಳಿ ನಡೆಸಿದೆ ಎಂದು ತಿಳಿಬಂದಿದೆ.
ಕೆಜೆಪಿ ಜುವೆಲರಿ ಜವಳಿ ಉದ್ಯಮ, ಹೋಟೆಲ್ ನಟಿಸುತ್ತಿರುವ ಗಣೇಶ್ ಹುಬ್ಬಳ್ಳಿಯ ಸ್ಟೇಷನ್ ರಸ್ತೆಯ ಕೆಜೆಪಿ ಸಿಲ್ವರ್ ಬ್ಯಾಲೆನ್ಸ್ ಅಲ್ಲಿ ಕೂಡ ಐಟಿ ಅಧಿಕಾರಿಗಳು ಶೋಧ ನೆಡಿಸುತ್ತಿದ್ದಾರೆ. ಅಲ್ಲದೆ ಗಣೇಶ್ ಸೇಟ್ ಹಾಗೂ ಆತನ ಪುತ್ರ ಶ್ರೀಗಂಧ ಸೇಠನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.