ಹುಬ್ಬಳ್ಳಿ : ಇಂದು ಹುಬ್ಬಳ್ಳಿ ನಗರದಲ್ಲಿ ಹಾಡು ಹಗಲೇ ಕಾರ್ಪೊರೇಟರ್ ಪುತ್ರಿ ಯನ್ನು ಭೀಕರವಾಗಿ ಕೊಲೆ ಮಾಡಿದ್ದು,ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿ ನೇಹ ಹಿರೇಮಠ ಎನ್ನುವ ಯುವತಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಗೈಯಲಾಗಿದೆ.ಹುಬ್ಬಳ್ಳಿ ಧಾರವಾಡ ಪಾಲಿಕೆ ಸದಸ್ಯ ನಿರಂಜನ್ ಹಿರೇಮಠ ಪುತ್ರಿ ನೇಹ ಎಂದು ಹೇಳಲಾಗುತ್ತಿದೆ.ಇದರಿಂದ ಹುಬ್ಬಳ್ಳಿ ಜನತೆ ಬೆಚ್ಚಿಬಿದ್ದಿದ್ದಾರೆ
ಹಾಡು ಹಗಲೇ ಕಾಲೇಜಿನಲ್ಲಿ ಈ ಒಂದು ಭೀಕರ ಹತ್ಯೆ ನಡೆದಿದೆ. ಚಾಕುವಿನಿಂದ ಇರಿದು ನೇಹಾ ಹಿರೇಮಠ ಎನ್ನುವ ಯುವತಿಯನ್ನು ಕೊಲೆ ಮಾಡಲಾಗಿದೆ.ಪಾಲಿಕೆಯ ಸದಸ್ಯರಾಗಿರುವ ನಿರಂಜನ ಹಿರೇಮಠ ಪುತ್ರಿ ನೇಹಾ ಎಂದು ಹೇಳಲಾಗುತ್ತಿದ್ದು ಹಾಡು ಹಗಲೇ ಕಾಲೇಜಿನಲ್ಲಿ ಘೋರ ದುರಂತ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿಕೆಯ ನೀಡಿದರು.