ಹುಬ್ಬಳ್ಳಿ: ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತೆ ಹುಬ್ಬಳ್ಳಿಯಲ್ಲಿ ನಿನ್ನೆ ಕಾರ್ಪೊರೇಟರ್ ಮಗಳು ನೇಹಾ ಹಿರೇಮಠ ಹತ್ಯೆ ಪ್ರಕರಣ ಸುದ್ದಿ ಮಾಡುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ನೇಹಾ ಮತ್ತು ಫಯಾಜ್ ಇಬ್ಬರ ರೀಲ್ಸ್ ವೈರಲ್ ಆಗುತ್ತಿದೆ.
ಹೌದು ನಿನ್ನೆ ಬಿವಿಪಿ ಕಾಲೇಜಿನ ಆವರಣದಲ್ಲಿ ಆರೋಪಿ ಫಯಾಜ್ ನೇಹಾಳನ್ನು 10 ಬಾರಿ ಇರಿದು ಬೀಗರ ವಾಗಿ ಕೊಲೆ ಮಾಡಿದ್ದಾನೆ. ಇದೀಗ ನೇಹಾ ಮತ್ತು ಫಯಾಜ್ ಒಟ್ಟಿಗೆ ಸಲುಗೆಯಿಂದ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನೇಹಾ ಹಾಗೂ ಫಯಾಜ್ ಸೇರಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ವೇಳೆ, ಮತ್ತು ಸ್ನೇಹದ ವೇಳೆ ನೇಹಾ ಮತ್ತು ಫಯಾಜ್ ಒಟ್ಟಿಗೆ ಇರುವ ಫೋಟೋ, ವೀಡಿಯೋಗಳು ವೈರಲ್ ಆಗಿದೆ.
ಆರೋಪಿ ಫಯಾಜ್ ಹೇಳಿರುವ ಪ್ರಕಾರ ಬಿಸಿಎ ಓದುವಾಗಿನಿಂದಲೂ ಸ್ನೇಹ ಹಾಗೂ ಫಯಾಜ್ ಪರಸ್ಪರ ಪ್ರೀತಿಸುತ್ತಿದ್ದರು ಇತ್ತೀಚಿಗೆ ನೇಹಾಜ್ನನ್ನು ದೂರ ಮಾಡಿದ್ದಳಂತೆ, ಹಾಗಾಗಿ ಫಯಾಜ್ ಇದೆ ಕರಣಕ್ಕೆ ಕುಪಿತಗೊಂಡು ನೇಹಾಳನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ.
ನೇಹಾ ಕಾಲೇಜಿನಿಂದ ಹೊರ ಬರುತ್ತಿದ್ದಂತೆ ಫಯಾಜ್ ಕಾಲೇಜು ಆವರಣದಲ್ಲಿ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಕುತ್ತಿಗೆ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಸೇರಿ ಸುಮಾರು 10 ಬಾರಿ ಸಾಕುವಿನಿಂದ ಹಿಡಿದಿದ್ದಾನೆ ಈ ವೇಳೆ ತಕ್ಷಣ ಕಾಲೇಜು ಆಡಳಿತ ಮಂಡಳಿ ನೇಹಾಳನ್ನು ಆಸ್ಪತ್ರೆಗೆ ಸಾಗಿಸಿದ್ದಾದರೂ ಕೂಡ ಚಿಕಿತ್ಸೆ ವಹಿಸದೆ ಸ್ನೇಹ ಸಾವನಪ್ಪಿದ್ದಾಳೆ.