ಹುಬ್ಬಳ್ಳಿ: ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಸರಬರಾಜು ಮಾಡಬೇಕಿದ್ದಂತ ಆಹಾರ ಸಾಮಗ್ರಿಗಳನ್ನು ಅಕ್ರಮವಾಗಿ ಗೋದಾಮಿನಲ್ಲಿ ಸಂಗ್ರಹಿಸಲಾಗಿತ್ತು. ಈ ಸಂಬಂಧ ಅಧಿಕಾರಿಗಳ ದಾಳಿಯ ವೇಳೆಯಲ್ಲಿ ಪತ್ತೆಯಾಗಿತ್ತು. ಇದೀಗ ಮತ್ತೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಫೆಬ್ರವರಿ 15ರಂದು ಹುಬ್ಬಳ್ಳಿಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಗೋದಾಮಿನ ಮೇಲೆ ದಾಳಿ ನಡೆಸಿದ್ದರು. ಈ ಸಂಬಂಧ ಹಲವರ ಮೇಲೆ ಹುಬ್ಬಳ್ಳಿಯ ಕಸಬಾ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದಂತ ಬತುಲ್ ಕಿಲ್ಲೇದಾರ, ಫಾರೂಕ್ ಕಿಲ್ಲೇದಾರ ಪರಾರಿಯಾಗಲು ನೆರವಾದ ಸಂಬಂಧ ಇಂದು ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳ್ನು ಅಲ್ತಫ್ ಕಲಾದಗಿ, ದಾದಾಪೀರ್, ಸಲೀಂ ಬೇಪಾರಿ, ಸಲೀಂ ಶೇಖ್, ಬಸವರಾಜ, ಸಲೀಂ ಅತ್ತಾರ್ ಎಂಬುದಾಗಿ ಗುರಿತಿಸಲಾಗಿದೆ. ಈ ಮೂಲಕ ಹುಬ್ಬಳ್ಳಿಯಲ್ಲಿ ಅಂಗನವಾಡಿ ಆಹಾರ ಅಕ್ರಮ ದಾಸ್ತಾನು ಪ್ರಕರಣ ಸಂಬಂಧ ಬಂಧಿಸಿದಂತ ಆರೋಪಿಗಳ ಸಂಖ್ಯೆ 32ಕ್ಕೆ ಏರಿಕೆಯಾದಂತೆ ಆಗಿದೆ.
Watch Video: ಹಮಾಸ್ ಸೈನಿಕನ ಹಣೆಗೆ ಮುತ್ತಿಟ್ಟ ಬಿಡುಗಡೆಗೊಂಡ ಇಸ್ರೇಲಿ ಒತ್ತೆಯಾಳು | Israel-Hamas war