ಹುಬ್ಬಳ್ಳಿ: ಪ್ರೀತಿಗೆ ಕಣ್ಣಿಲ್ಲ ಅಂತಾರಲ್ಲ ಇದಕ್ಕೇ ಇರಬೇಕು. ಹುಬ್ಬಳ್ಳಿಯಲ್ಲಿ ವಿಚಿತ್ರ ಪ್ರೇಮ ಕಹಾನಿ ಎನ್ನುವಂತೆ 50 ವರ್ಷದ ಅಂಕಲ್ ಅನ್ನು 18ರ ಯುವತಿಯೊಬ್ಬಳು ವಿವಾಹವಾಗಿದ್ದಾಳೆ.
ಹೌದು.. ಹುಬ್ಬಳ್ಳಿಯಿಂದ ಕೊಲ್ಹಾಪುರದಲ್ಲಿರುವಂತ ಅಜ್ಜಿಯ ಮನೆಗೆ ಹೋಗುವುದಾಗಿ ತೆರಳಿದಂತ 18 ವರ್ಷದ ಯುವತಿಯೊಬ್ಬಳು ನಾಪತ್ತೆಯಾಗಿದ್ದರು. ಹೀಗೆ ನಾಪತ್ತೆಯಾಗಿದ್ದಂತ 18 ವರ್ಷದ ಕರೀಷ್ಮಾ ಎಂಬಾಕೆ, 50 ವರ್ಷದ ಪ್ರಕಾಶ್ ಎಂಬುವರ ಜೊತೆಗೆ ವಿವಾಹ ಆಗಿದ್ದಾರೆ.
ದೇವಸ್ಥಾನವೊಂದರಲ್ಲಿ ಮನೆಯಿಂದ ನಾಪತ್ತೆಯಾಗಿದ್ದಂತ ಕರೀಷ್ಮಾ ಹಾಗೂ ಪ್ರಕಾಶ್ ಮದುವೆಯಾಗಿರುವಂತ ಪೋಟೋಗಳು ಅದಾಗಿದ್ದಾವೆ.
ಈ ವಿಚಾರವನ್ನು ಪ್ರಕಾಶ್ ತನ್ನ ವಾಟ್ಸ್ ಆಪ್ ಸ್ಟೇಟಸ್ ಹಾಕಿದ್ದರಿಂದ ಯುವತಿಯ ಮನೆಯವರಿಗೆ ಗೊತ್ತಾಗಿದೆ. ತಮ್ಮ ಪುತ್ರಿಯ ತಲೆ ಕೆಡಿಸಿ, ಪ್ರಕಾಶ್ ಮದುವೆಯಾಗಿರೋದಾಗಿ ಕಿಡಿಕಾರಿದ್ದಾರೆ.
ಅಂದಹಾಗೇ ಕರೀಷ್ಮಾ ನಾಪತ್ತೆಯ ಬಳಿಕ ಪೋಷಕರು ಬೀದಿ ಬೀದಿ ಪೋಟೋ ಹಿಡಿದು ಸುತ್ತಿದ್ದರು. ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದ್ದರು. ಆ ಬಳಿಕ ಪೊಲೀಸರಿಗೂ ದೂರು ನೀಡಿದ್ದರು. ಆದರೇ ಜನವರಿ 3ರಂದು ನಾಪತ್ತೆಯಾಗಿದ್ದಂತ ಕರೀಷ್ಮಾ 50ರ ಅಂಕಲ್ ಪ್ರಕಾಶ್ ವಿವಾಹವಾಗಿದ್ದಾರೆ. ಇದೀಗ 18 ವರ್ಷದ ಕರೀಷ್ಮಾ, ಮದುವೆಯಾಗಿ ಪ್ರಕಾಶ್ ಜೊತೆಯಲ್ಲೇ ಉಳಿದುಕೊಂಡಿರೋದಾಗಿ ತಿಳಿದು ಬಂದಿದೆ.
BREAKING: ಮೈಸೂರು ವಿವಾದಿತ ಪೋಸ್ಟ್ ನಿಂದ ಗಲಾಟೇ ಕೇಸ್: ಆರೋಪಿ ಸತೀಶ್ ಗೆ ಜಾಮೀನು ಮಂಜೂರು