ಮಾರಿಷಸ್ : ಪೂರ್ವ ಆಫ್ರಿಕಾದ ಮಾರಿಷಸ್‌ನ ಹಿಂದೂ ಸಮುದಾಯವು ಪವಿತ್ರವೆಂದು ಪರಿಗಣಿಸುವ ಮಾರ್ಚ್ 8 ರಂದು ಶಿವರಾತ್ರಿ ಹಬ್ಬಕ್ಕೆ ಮುಂಚಿತವಾಗಿ ಯಾತ್ರಿಕರು ಗ್ರ್ಯಾಂಡ್ ಬೇಸಿನ್ ಸರೋವರಕ್ಕೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ನಡೆದ ಅಗ್ನಿ ದುರಂತದಲ್ಲಿ 6 ಜನರು ಸಾವನ್ನಪ್ಪಿದ್ದು, 7 ಜನರು ಗಂಭಿರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ರಾಜ್ಯದಲ್ಲಿ ತೀವ್ರಗೊಂಡ ‘ಬಿಸಿಗಾಳಿ :ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
ಪೂರ್ವ ಆಫ್ರಿಕಾದ ಮಾರೀಷಸ್ ನಲ್ಲಿ ಕೂಡ ಶಿವರಾತ್ರಿ ಅಂಗವಾಗಿ ಅಲ್ಲಿನ ಹಿಂದೂ ಸಮುದಾಯದ ಜನರು ಶಿವರಾತ್ರಿ ಪವಿತ್ರ ದಿನವೆಂದು ಪ್ರತಿ ವರ್ಷ ಆಚರಣೆ ಮಾಡುತ್ತಾರೆ. ಇದೆ ವೇಳೆ ದೇವರ ವಿಗ್ರಹವು ವಿದ್ಯುತ್ ತಂತಿಗೆ ಸ್ಪರ್ಶಿಸಿದಾಗ ಬೆಂಕಿ ಕಾಣಿಸಿಕೊಂಡಿತ್ತು. ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದು, ಇವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
BREAKING : ಮಂಗಳೂರು : ‘ಪೆಣಂಬೂರು’ ಬೀಚ್ ನಲ್ಲಿ ಆಟವಾಡಲು ತೆರಳಿದ ಮೂವರು ಯುವಕರು ‘ಸಮುದ್ರಪಾಲು’
ಅಗ್ನಿ ಅವಘಡ ಸಂಭವಿಸಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಆ ಬೆಂಕಿಯನ್ನು ನಂದಿಸಲು ಹರ ಸಾಹಸ ಪಟ್ಟಿವೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.ಅಗ್ನಿ ದುರಂತದ ಘಟನೆ ಕುರಿತಂತೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
US Election 2024: ವಾಷಿಂಗ್ಟನ್, ಡಿ.ಸಿ.ಯಲ್ಲಿ ರಿಪಬ್ಲಿಕನ್ ಪ್ರೈಮರಿಯನ್ನು ಗೆದ್ದ ‘ನಿಕ್ಕಿ ಹ್ಯಾಲೆ’