ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸುಮಾರು ಮೂರು ವರ್ಷಗಳಿಂದ ಪತಿ-ಪತ್ನಿ ಯಾವುದೆ ಅಂತರ್ ಜಿಲ್ಲಾ ವರ್ಗಾವಣೆಯಾಗಿಲ್ಲ. ಇದರಿಂದ ನಮಗೆ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೆಂದು ಪೊಲೀಸ್ ಸಿಬ್ಬಂದಿ ದಯಾಮರಣ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
BREAKING : ಮೈಸೂರಲ್ಲಿ ಭೂಮಿ ಕಳೆದುಕೊಳ್ಳುವ ಭೀತಿಯಿಂದ ‘ಕ್ರಿಮಿನಾಶಕ’ ಸೇವಿಸಿ ರೈತ ಆತ್ಮಹತ್ಯೆ
ಪತ್ರ ಬರೆದು ಪೊಲೀಸ್ ಸಿಬಂದಿ ದಯಾಮರಣ ಕೋರಿದ್ದಾರೆ ಎಂದು ಹೇಳಲಾಗುತ್ತಿದೆ.ವರ್ಗಾವಣೆ ಮಾಡಿ ಇಲ್ಲ ದಯಾಮರಣ ನೀಡಿ ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.ರಾಜ್ಯದ ಹಲವು ಠಾಣೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಿಂದ ಪತ್ರ ಬರೆಯಲಾಗಿದೆ ಎಂದು ಹೇಳಲಾಗುತ್ತಿದ್ದು,ಹೆಂಡತಿ ಒಂದು ಜಿಲ್ಲೆಯಲ್ಲಿ ವಾಸ ಗಂಡ ಒಂದು ಜಿಲ್ಲೆಯಲ್ಲಿ ವಾಸ ಮಾಡಲಾಗುತ್ತಿದೆ.
BREAKING : ಶಿವಮೊಗ್ಗದ ಯುವ ಕ್ರಿಕೆಟಿಗನಿಗೆ ‘ಹೃದಯಾಘಾತ’ : ಪಂದ್ಯದ ಸಂಭ್ರಮಾಚರಣೆ ವೇಳೆ ಸಾವು
ಇದರಿಂದ ನಮಗೆ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲು ಆಗುತ್ತಿಲ್ಲ. ಇದರಿಂದ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಪೊಲೀಸ್ ಸಿಬ್ಬಂದಿಗಳು ಪತ್ರದ ಮೂಲಕ ಅಳಲು ತೋಡಿಕೊಂಡಿದ್ದಾರೆ. ಕೆಲ ಸಿಬ್ಬಂದಿಗೆ ವಯಸ್ಸಾದ ತಂದೆ ತಾಯಿ ನೋಡಿಕೊಳ್ಳಬೇಕಿದೆ. ಹೀಗಾಗಿ ವರ್ಗಾವಣೆ ಮಾಡುವಂತೆ ಸಿಂಪೋಲಿ ಸಿಬ್ಬಂದಿಗಳು ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
ರಾಜ್ಯಸಭೆ ಚುನಾವಣೆ: ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕರ ವಾಸ್ತವ್ಯ, ಸೋಮವಾರ ಶಾಸಕಾಂಗ ಪಕ್ಷದ ಸಭೆ
ವರ್ಗಾವಣೆ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಬಾಯಿ ಮಾತಿನಲ್ಲಿ ಹೇಳುತ್ತಾರೆ ಆದರೆ ಅಂತರ್ಜಲ ವರ್ಗಾವಣೆ ಲಿಖಿತ ರೂಪದಲ್ಲಿ ಆಗುತ್ತಿಲ್ಲ 2021 ರಿಂದಲೂ ಪೊಲೀಸ್ ಇಲಾಖೆಯಲ್ಲಿ ಯಾವುದೇ ವರ್ಗಾವಣೆ ಆಗಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಒಂದೇ ಘಟಕದಲ್ಲಿ ಪತಿ-ಪತ್ನಿ ಕೆಲಸಕ್ಕೆ ಅವಕಾಶವಿದೆ.ಕೆಸಿಎಸ್ಆರ್ ನಿಯಮದಂತೆ ಮೂರು ವರ್ಷಗಳಾದರೆ ವರ್ಗಾವಣೆ ಮಾಡಬೇಕು ವರ್ಗಾವಣೆ ಮಾಡುತ್ತೇವೆ ಎಂದು ಮಾಧ್ಯಮಗಳ ಮುಂದೆ ಹೇಳುತ್ತಾರೆ ಆದರೆ ಯಾವುದೇ ವರ್ಗಾವಣೆ ಆಗುತ್ತಿಲ್ಲವೆಂದು ಪೊಲೀಸ್ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.