ನವದೆಹಲಿ: ಕೇಂದ್ರ ಸರ್ಕಾರದಿಂದ ಅಕ್ರಮ ಅಕ್ಕಿ ದಾಸ್ತಾನು ತಡೆಗೆ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಅದೇ ಅಕ್ಕಿ ದಾಸ್ತಾನು ಪ್ರಮಾಣವನ್ನು ಘೋಷಣೆ ಮಾಡೋದು ಕಡ್ಡಾಯಗೊಳಿಸಲಾಗಿದೆ.
ಈ ಕುರಿತಂತೆ ಆಹಾರ ಸಚಿವಾಲಯದ ಕಾರ್ಯದರ್ಶಿ ಸಂಜೀವ್ ಚೋಪ್ರಾ ಮಾಹಿತಿ ನೀಡಿದ್ದು, ಇನ್ಮುಂದೆ ಚಿಲ್ಲರೆ ಮತ್ತು ಸಗಟು ಮಾರಾಟಗಾರರು ಕಡ್ಡಾಯವಾಗಿ ತಮ್ಮ ಬಳಿಯಿರುವ ಅಕ್ಕಿ ದಾಸ್ತಾನು ಪ್ರಮಾಣವನ್ನು ಸರ್ಕಾರಿ ಜಾಲತಾಣಗಳಲ್ಲಿ ಘೋಷಿಸುವಂತೆ ಸೂಚಿಸಿದ್ದಾರೆ.
ಕೇಂದ್ರ ಸರ್ಕಾರ ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಅಮೇಜಾನ್, ಪ್ಲಿಪ್ ಕಾರ್ಟ್ ಮುಂತಾದ ಇ-ಕಾಮರ್ಸ್ ತಾಣಗಳಲ್ಲಿ ಅಕ್ಕಿ ಮಾರಾಟಕ್ಕೆ ಮುಂದಾಗುತ್ತಿರುವ ಬೆನ್ನಲ್ಲೇ, ಈ ನಿರ್ಧಾರ ಕೈಗೊಂಡಿದೆ.
ಭಾರತ್ ಅಕ್ಕಿ 5 ಕೆಜಿ, 10 ಕೆಜಿ ಪ್ಯಾಕೇಟ್ ಗಳಲ್ಲಿ ಮಾರಾಟಗೊಳ್ಳಲಿದ್ದು, ಪ್ರತಿ ಕೆಜಿಗೆ ರೂ.29 ನಿಗದಿ ಪಡಿಸಲಾಗಿದೆ ಎಂದು ಆಹಾರ ಸಚಿವಾಲಯದ ಕಾರ್ಯದರ್ಶಿ ಸಂಜೀವ್ ಚೋಪ್ರಾ ತಿಳಿಸಿದ್ದಾರೆ.
ಆನ್ ಲೈನ್ ವೇದಿಕೆಗಳಲ್ಲದೇ ಎನ್ ಎ ಎಫ್ ಇ ಡಿ, ಎನ್ ಸಿಸಿಎಫ್, ಕೇಂದ್ರೀಯ ಭಂಡಾರಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಇದೇ ವೇಳೆ ಅಕ್ಕಿ ನಿಯಂತ್ರಣಕ್ಕೆ ಬರುವವರೆಗೂ ಅಕ್ಕಿ ರಫ್ತಿಗೆ ಹೇರಲಾಗಿರುವ ನಿರ್ಬಂಧವನ್ನು ಸಡಿಲಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
‘ಅಂಗನವಾಡಿ ಕಾರ್ಯಕರ್ತೆ’ಯರಿಗೆ ಗುಡ್ ನ್ಯೂಸ್: ಜೀವ ವಿಮೆ, 2 ಲಕ್ಷದವರೆಗೂ ‘ಅಪಘಾತ ವಿಮೆ’ ಜಾರಿ
‘SSLC, ದ್ವಿತೀಯ PUC ವಿದ್ಯಾರ್ಥಿ’ಗಳಿಗೆ ಮಹತ್ವದ ಮಾಹಿತಿ: ಈ 20 ಅಂಶಗಳ ಕಾರ್ಯಕ್ರಮ ರೂಪಿಸಿದ ‘ಪರೀಕ್ಷಾ ಮಂಡಳಿ’