ರಾಯಚೂರು :ಪರಿಚಯಸ್ಥರಿಂದಲೇ ಮಹಿಳೆಯನ್ನು ಉಸಿರುಗಟ್ಟಿಸಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕು NGO ಬಡಾವಣೆಯಲ್ಲಿ ನಡೆದಿದೆ.
ಲೋಕಸಭಾ ಚುನಾವಣೆಗೂ ಮುನ್ನ ಹೊಸ ಸಿಇಸಿ, ಇಸಿಗಳ ನೇಮಕ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕ
ಲಿಂಗಸೂಗೂರು ಪಟ್ಟಣದಲ್ಲಿ ಮಹಿಳೆಯ ಬರ್ಬರ ಹತ್ಯೆಯಾಗಿದ್ದು, ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂ ಊರಿನ ಎನ್‌ಜಿಓ ಬಡಾವಣೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸೀರೆಯಿಂದ ಉಸಿರು ಕಟ್ಟಿಸಿ ಕಲ್ಲಿನಿಂದ ಜಜ್ಜಿ ವಿಜಯಲಕ್ಷ್ಮಿ (32) ಎನ್ನುವ ಮಹಿಳೆಯನ್ನು ಹತ್ಯೆ ಮಾಡಲಾಗಿದೆ.
ಸಂವಿಧಾನ ಕುರಿತಾದ ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿವಾದ: ಬಿಜೆಪಿಯಿಂದ ಮಹತ್ವದ ಹೇಳಿಕೆ ಬಿಡುಗಡೆ!
ಹತ್ಯೆಯಾದ ವಿಜಯಲಕ್ಷ್ಮಿ ಎನ್ನುವ ಮಹಿಳೆ ಲಿಂಗಸುಗೂರು ತಾಲೂಕಿನ ಯರಡೋನಿ ನಿವಾಸಿ ಎಂದು ಹೇಳಲಾಗುತ್ತಿದೆ. ತಡರಾತ್ರಿ ಪರಿಚಯಸ್ಥರಿಂದಲೇ ವಿಜಯಲಕ್ಷ್ಮಿಯ ಕೊಲೆ ಆಗಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದೆ. ಘಟನೆ ಕುರಿತಂತೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING : ರಾಮೇಶ್ವರಂ ಕೆಫೆಯಲ್ಲಿ ‘ಬ್ಲಾಸ್ಟ್’ ಮಾಡಿದ ‘ಬಾಂಬರ್’ ಯಾರೆಂದು ಪತ್ತೆಯಾಗಿದೆ : ಜಿ ಪರಮೇಶ್ವರ್