ಕೋಲಾರ : ಕರುನಾಡಿನ ಅಪ್ಪು ಪುನೀತ್ ರಾಜಕುಮಾರ್ ಅವರು ಹೃದಯಾಘಾತದಿಂದ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಹೃದಯ ಸಂಜೀವಿನಿ ಯೋಜನೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
2028-29ರ ವೇಳೆಗೆ 50,000 ಕೋಟಿ ರೂ.ಗಳ ರಕ್ಷಣಾ ರಫ್ತು ಗುರಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್
ಕೆಜಿಎಫ್‌ನ ಸಾರ್ವಜನಿಕರ ಆಸ್ಪತ್ರೆಗೆ ಭೇಟಿ ನೀಡಿ, ೫೦ ಲಕ್ಷ ರು.ಗಳ ವೆಚ್ಚದಲ್ಲಿ ಎರಡು ಅತ್ಯಾಧುನಿಕ ಆ್ಯಂಬುಲೆನ್ಸ್, ಬೆಮಲ್ ಸಿಎಸ್‌ಆರ್ ಯೋಜನೆಯಡಿ ನೀಡಿರುವ ಒಂದು ಸಾವಿರ ಲೀಟರ್ ಆಕ್ಸಿಜನ್ ಪ್ಲಾಂಟ್, ಉಚಿತ ಬ್ಲಾಕ್, ಪಬ್ಲಿಕ್ ಹೆಲ್ತ್ ಲ್ಯಾಬ್, ಅತ್ಯಾಧುನಿಕ ಇಸಿಜಿ ಯಂತ್ರದ ಉದ್ಘಾಟಿಸಿ ಮಾತನಾಡಿದರು.
‘ಪಾಕಿಸ್ತಾನ’ ಪರ ಘೋಷಣೆ ಕೇಸ್ : ಬಂಧಿತ ‘ಮೊಹಮ್ಮದ ಶಫಿ ನಾಶಿಪುಡಿ’ ಕೋರ್ಟ್ ಗೆ ಹಾಜರು
ನಟ ಪುನೀತ್ ರಾಜಕುಮಾರಗೆ ಹೃದಯಾಘಾತ ಯಾವ ಮಟ್ಟದಲ್ಲಿ ಇತ್ತು ಎಂಬುದು ತಿಳಿಯದೆ ಪುನಿತ್ ರಾಜ್‌ಕುಮಾರ್ ಮೃತಪಟ್ಟಿದ್ದರು. ಈ ಹಿನ್ನಲೆಯುಲ್ಲಿ ಮುಖ್ಯಮಂತ್ರಿ ಪ್ರತಿ ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿ ಪುನಿತ್ ರಾಜ್‌ಕುಮಾರ್ ಹೆಸರಿನಲ್ಲಿ ಹೃದಯ ಜ್ಯೋತಿ ಯೋಜನೆ ಪ್ರಾರಂಭಿಸಲಿದ್ದು, ಇನ್ನೊಂದು ವಾರದಲ್ಲಿ ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ ಎಂದರು.