ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌: ಮಳೆಗಾಲದಲ್ಲಿ ಆರೋಗ್ಯದ ಸಮಸ್ಯೆ ಬೀರುತ್ತದೆ. ಶೀತ, ಅಲರ್ಜಿ, ಹೊಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಮಳೆಗಾಲದಲ್ಲಿ ಆಹಾರ ಸೇವನೆ ಸರಿಯಾಗಿರಬೇಕು.

ಸಹೋದರರಿಗೆ ಯಾವ ರೀತಿ ರಾಖಿ ತಗೊಳ್ಳಬೇಕು ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಟಿಪ್ಸ್‌ ಗಳು

 

ಒಂದು ವೇಳೆ ಕೆಲವರಲ್ಲಿ ಆಹಾರ ಸೇವನೆಯಿಂದ ಅಲರ್ಜಿಯಾಗುತ್ತದೆ. ಹಾಗಾದರೆ ಮಳೆಗಾಲದಲ್ಲಿ ಅಲರ್ಜಿಯನ್ನು ತಡೆಯಲು ಯಾವೆಲ್ಲಾ ಆಹರಗಳನ್ನು ಸೇವನೆ ಮಾಡಬೇಕು, ಅಲರ್ಜಿ ಯಾಕಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ.

* ಮಳೆಗಾಲದಲ್ಲಿ ವಾತಾವರಣ ತಂಪಾಗಿರುತ್ತದೆ. ಅಲ್ಲದೆ ಕೆಲವು ಆಹಾರಗಳು ಬೇಗನೆ ಜೀರ್ಣವಾಗುವುದಿಲ್ಲ. ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದಾಗ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಇದರಿಂದಾಗಿಯೇ ಅಲರ್ಜಿ ಉಂಟಾಗುತ್ತದೆ. ಈ ರೀತಿ ಆಹಾರ ಜೀರ್ಣವಾಗದೇ ಇದ್ದಾಗ ದೇಹಕ್ಕೆ ಪೋಷಕಾಂಶಗಳು ಕಡಿಮೆಯಾಗಿ ರೋಗ ನಿರೋಧಕ ಶಕ್ತಿ ಕೂಡ ಕುಗ್ಗುತ್ತದೆ.

ಸಹೋದರರಿಗೆ ಯಾವ ರೀತಿ ರಾಖಿ ತಗೊಳ್ಳಬೇಕು ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಟಿಪ್ಸ್‌ ಗಳು

 

*ಹಣ್ಣು, ತರಕಾರಿಗಳನ್ನು ಸೇವನೆ ಮಾಡುವುದು ಒಳ್ಳೆಯದು. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ. ಮಳೆಗಾಲದಲ್ಲಿ ವಿಶೇಷವಾಗಿ ಸೇಬು, ಮೂಸಂಬಿ, ಪೇರಲ, ನೇರಳೆಹಣ್ಣುಗಳನ್ನು ತಿನ್ನಿ.
* ಮಳೆಗಾಲದಲ್ಲಿ ವಾತಾವರಣ ತಂಪಾಗಿರುವ ಕಾರಣ ದೇಹಕ್ಕೆ ಬೇಗನೆ ಸೋಂಕು ತಗುಲುತ್ತದೆ. ಹೀಗಾಗಿ ನೈಸರ್ಗಿಕ ಚಹಾಗಳನ್ನು ಸೇವಿಸುತ್ತಿರಿ. ಶುಂಠಿ ಟೀ, ಗ್ರೀನ್‌ ಟೀ, ಅರಿಶಿನ ಬೆರೆಸಿದ ಹಾಲು, ಬೆಳ್ಳುಳ್ಳಿ ಸೇರಿಸಿದ ಆಹಾರವನ್ನು ಸೇವಿಸುತ್ತಿರಿ.
*ಶುಂಠಿ ಚಹಾವು ಗಂಟಲಿನ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇನ್ನು ಆಂಟಿಮೈಕ್ರೊಬಿಯಲ್ ಅಥವಾ ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿರುವ ಬೆಳ್ಳುಳ್ಳಿಯನ್ನು ಗ್ರೇವಿ, ಚಟ್ನಿ, ಸೂಪ್‌ ಇತರ ಆಹಾರಗಳಲ್ಲಿ ಬಳಸಬಹುದು.

 

Share.
Exit mobile version