ಬೆಂಗಳೂರು: ನಗರದಲ್ಲಿ ಬುಧವಾರ ಸುರಿದ ಭಾರಿ ಮಳೆಗೆ ರಸ್ತೆ ಕುಸಿದಿದ್ದು, ಬೋರ್ ಬ್ಯಾಂಕ್ ರಸ್ತೆ ಸಂಪೂರ್ಣ ಬಂದ್ ಆಗಿದೆ. ಕಳೆದ ಹಲವಾರು ಗಂಟೆಗಳಿಂದ ನಗರದ ನಿವಾಸಿಗಳು ಅನುಭವಿಸುತ್ತಿರುವ ಭಾರಿ ಮಳೆಯ ನಡುವೆ ಬುಧವಾರ ಸಂಜೆ ಈ ಘಟನೆ ನಡೆದಿದೆ.

ರಸ್ತೆ ಕುಸಿದ ನಂತರ, ಸಂಬಂಧಪಟ್ಟ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಿ ಸುರಕ್ಷತಾ ಕ್ರಮವಾಗಿ ರಸ್ತೆಯನ್ನು ನಿರ್ಬಂಧಿಸಿತು. ಸಂಚಾರವನ್ನು ಬೇರೆಡೆಗೆ ತಿರುಗಿಸಲು ಸಂಚಾರ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಅಧಿಕಾರಿಗಳ ಪ್ರಕಾರ, ಸಂಜೆ 5.45 ರ ಸುಮಾರಿಗೆ ಭಾರಿ ಮಳೆಯಿಂದಾಗಿ ಈ ಘಟನೆ ಸಂಭವಿಸಿದೆ. ಇದರಿಂದಾಗಿ ಪಾಟರಿ ಟೌನ್ ಮೆಟ್ರೋ ನಿಲ್ದಾಣದಲ್ಲಿ ಮಣ್ಣು ಅಗೆದು ಸರಿ ಮಾಡುವ ತಾತ್ಕಾಲಿಕ ಪ್ರಯತ್ನ ವಿಫಲವಾಗಿವೆ. ಈ ಘಟನೆಯಿಂದ ಬೆಂಗಳೂರಿನ ಬೋರ್ ಬ್ಯಾಂಕ್ ರಸ್ತೆಯ ಒಂದು ಭಾಗಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೋರ್ ಬ್ಯಾಂಕ್ ರಸ್ತೆ ಸಂಚಾರ ಬಂದ್

ಈ ಕುರಿತು ಮಾಹಿತಿ ಹಂಚಿಕೊಂಡಿರುವಂತ ಬಿಎಂಆರ್ ಸಿಎಲ್, ಇಂದು ಭಾರೀ ಮಳೆಯಿಂದಾಗಿ ಪಾಟರಿ ಟೌನ್ ಮೆಟ್ರೋ ನಿಲ್ದಾಣಕ್ಕಾಗಿ ಮಣ್ಣು ಅಗೆಯಲು ಮಾಡಿದ ತಾತ್ಕಾಲಿಕ ತಡೆ ಪೈಲ್ ವ್ಯವಸ್ಥೆಯು ಸಂಜೆ 5.45 ರ ಸುಮಾರಿಗೆ ವಿಫಲವಾಗಿದೆ. ಇದರ ಪರಿಣಾಮವಾಗಿ ಬೋರ್ ಬ್ಯಾಂಕ್ ರಸ್ತೆಯ ಒಂದು ಭಾಗವು ಹಾನಿಯಾಗಿರುವ ಕಾರಣ ಬೋರ್ ಬ್ಯಾಂಕ್ ರಸ್ತೆಯನ್ನು ಮುಚ್ಚಲಾಗಿದೆ ಎಂದು ತಿಳಿಸಿದೆ.

ಇನ್ನೂ ಮರುಸ್ಥಾಪನೆ ಮಾಡುವವರೆಗೆ ರಸ್ತೆ ಮುಚ್ಚಿರುತ್ತದೆ. ವಾಹನ ಚಲನೆಗೆ ಪರ್ಯಾಯ ಮಾರ್ಗ ಮಾಡಲಾಗಿದೆ. ಯಾವುದೇ ವ್ಯಕ್ತಿಗಳು ಗಾಯಗೊಂಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ.

Share.
Exit mobile version