ಕೆಎನ್ಎನ್ ಡಿಜಿಟಲ್ ಡೆಸ್ಕ್ :ಈಗಿನ ದಿನಗಳಲ್ಲಿ ಯುವಕರಿಂದ ಹಿಡಿದು ದೊಡ್ಡವರು ಧೂಮಪಾನ ಮಾಡುತ್ತಾರೆ. ಇದು ಆರೋಗ್ಯಕ್ಕೆ ಹಾನಿ ಎಂದು ತಿಳಿದಿದ್ದರೂ ಇದನ್ನು ಅಭ್ಯಾಸವನ್ನಾಗಿಸಿಕೊಂಡಿರುತ್ತಾರೆ. ಇದು ಅನೇಕ ಗಂಬೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದನ್ನು ಅರಿತು ಕೆಲವರು ಈ ಅಭ್ಯಾಸವನ್ನು ಬಿಡಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಹೇಗೆ ಬಿಡಬೇಕು ಎಂದು ತಿಳಿದಿರುವುದಿಲ್ಲ. ಇದಕ್ಕೆ ಇಲ್ಲಿವೆ ಸಿಂಪಲ್ಸ್ ಟಿಪ್ಸ್ ಗಳು.
ಕ್ಯಾನ್ಸರ್ ಬರಲು ಒಂದು ದೊಡ್ಡ ಕಾರಣವೆಂದರೆ ತಂಬಾಕು ಅಥವಾ ಧೂಮಪಾನ. ಇದು ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು. ಅವುಗಳಲ್ಲಿ ಶ್ವಾಸಕೋಶ, ಕೊಲೊನ್, ಸ್ತನ, ಗಂಟಲು, ಗರ್ಭಾಶಯ, ಮೂತ್ರಕೋಶ, ಬಾಯಿ ಮತ್ತು ಅನ್ನನಾಳದ ಕ್ಯಾನ್ಸರ್ಗಳು ಪ್ರಮುಖವಾಗಿವೆ.
ಧೂಮಪಾನವನ್ನು ಬಿಡಲು ಮೊದಲು ಅದಕ್ಕೆ ಒಂದು ಕಾರಣವನ್ನು ಹುಡುಕಿಕೊಳ್ಳಬೇಕು. ಈ ರೀತಿ ಮಾಡುವುದರಿಂದ, ನೀವು ನಿಮ್ಮನ್ನು ಪ್ರೇರೇಪಿಸಬಹುದು. ಇದು ಸಿಗರೇಟ್ ಚಟದಿಂದ ನಿಮ್ಮನ್ನು ಮುಕ್ತಿಗೊಳಿಸಲು ಸಹಾಯ ಮಾಡುತ್ತದೆ.
ಧೂಮಪಾನದ ನಿಲ್ಲಿಸುವ ಅಪ್ಲಿಕೇಶನ್ಗಳು, ತರಗತಿಗಳು, ಸಮಾಲೋಚನೆ, ಸಲಹೆಗಳು ಇತ್ಯಾದಿಗಳ ಕುರಿತು ನಿಮ್ಮ ವೈದ್ಯರಿಂದ ನೀವು ಮೊದಲು ಮಾಹಿತಿಯನ್ನು ಪಡೆಯಬಹುದು.
ನಿಕೋಟಿನ್ ಸೇವನೆಯ ಮಾಡಬೇಕು ಎಂದೇನಿಸಿದಾಗ ನಿಕೋಟಿನ್ ಬದಲಿ ಗಮ್, ಲೋಜೆಂಜಸ್, ಪ್ಯಾಚ್ಗಳು ಇತ್ಯಾದಿಗಳನ್ನು ಬಳಸಬಹುದು. ಹಾಗೆಯೇ ನೀವು ಡ್ರೈ ಫ್ರೂಟ್ಸ್ ಗಳನ್ನು ಸೇವಿಸಬಹುದು.
ನೀವು ಮದ್ಯಪಾನ ಇತ್ಯಾದಿಗಳನ್ನು ಮಾಡುವ ಅಭ್ಯಾಸ ಹೊಂದಿದ್ದರೆ, ನಿಮಗೆ ಸಿಗರೇಟಿನ ಹಂಬಲವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಪ್ರಚೋದಿಸುವ ವಿಷಯಗಳನ್ನು ತಪ್ಪಿಸಬೇಕು. ನಿಮಗೆ ಅವಶ್ಯಕತೆಯಿದ್ದರೆ ಕಾಫಿ ಇತ್ಯಾದಿಗಳನ್ನು ಕುಡಿಯಬಹುದು.
ಸಿಗರೇಟ್ ಸೇದುವ ಸ್ಥಳಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಕೆಲವೊಮ್ಮೆ ಈ ವಸ್ತುಗಳ ವಾಸನೆಯು ನಿಮಗೆ ಸಿಗರೇಟ್ ಬೇಕು ಅನಿಸುತ್ತದೆ. ಸಿಗರೇಟ್ ಆಶ್ ಟ್ರೇ ಇತ್ಯಾದಿಗಳನ್ನು ತೆಗೆದುಹಾಕಿ.
ಬಿಡುವಿನ ವೇಳೆ ಸಿಗರೇಟು ಸೇದುವ ಈ ಸಮಯದಲ್ಲಿ ಹಣ್ಣು ಇತ್ಯಾದಿ ತಿನ್ನಿ. ಇದು ನಿಮ್ಮ ದೇಹವು ಆರೋಗ್ಯಕರ ಆಹಾರವನ್ನು ಸೇವಿಸುವ ಅಭ್ಯಾಸವನ್ನು ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ನೀವು ದೈಹಿಕವಾಗಿ ಸಕ್ರಿಯರಾಗಿದ್ದರೆ, ನಿಮ್ಮ ಸಿಗರೇಟ್ ಅಭ್ಯಾಸವನ್ನು ಬಿಡಲು ಇದು ನಿಮಗೆ ಸಹಾಯ ಮಾಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಬ್ಯುಸಿಯಾಗಿರಿ, ದೈಹಿಕವಾಗಿ ಕ್ರಿಯಾಶೀಲರಾಗಿರಿ.