ಬೆಂಗಳೂರು : ನಾಗರಿಕರು ತಮ್ಮ ಮನೆಯಿಂದಲೇ ಈ ಕೆಳಗಿನ ಆಪ್ ಮುಖಾಂತರ ತಮ್ಮ ಹಾಗೂ ಕುಟುಂಬದವರ ಮತದಾರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಬಹುದು. ಅದು ಹೇಗೆ? ಎಂಬುದನ್ನು ಇಲ್ಲಿ ನೋಡಿ…
* ಮೊದಲು ಪ್ಲೇಸ್ಟೋರ್ (Play Store) ಗೆ ಹೋಗಿ ವೋಟರ್ ಹೆಲ್ಪ್ ಲೈನ್ ಆಫ್ (Voter Helpline App) ನ್ನು ಇನ್ಸ್ಟಾಲ್ (Install) ಮಾಡಿ.
* ಆಫ್ ಇನ್ಸ್ಟಾಲ್ (App install)ಮಾಡುವಾಗ ಪರ್ಮಿಷನ್ (Permission) ಅಲೋ (Allow) ಮೇಲೆ ಕ್ಲಿಕ್ ಮಾಡಿ.
* ಆಫ್ ಇನ್ಸ್ಟಾಲ್ (App install)ಮಾಡಿಕೊಂಡು ಆಫ್ ಕೆಳಗೆ ಎಡಬದಿಯಲ್ಲಿ ಇರುವ ಎಕ್ಸ್ಪ್ಲೋರ್ ಆಪ್ಷನ್(EXPLORE option) ಮೇಲೆ ಕ್ಲಿಕ್ (click) ಮಾಡಬೇಕು.
* ಎಲೆಕ್ಟ್ರೋರಲ್ ಅತೆಂಟಿಕೇಷನ್ ಪಾರಮ್-6ಬಿ ಸಲೆಕ್ಟ್ (Electroral Authentication Form- 6B Select) ಮಾಡಿಕೊಳ್ಳಬೇಕು.
* ನಂತ್ರ, ಮೊಬೈಲ್ ನಂಬರ್ (Mobile number) ಹಾಕಿ. ನಂತ್ರ, ನಿಮ್ಮ ಮೊಬೈಲ್ ನಂಬರ್ಗೆ ಒಂದು ಓಟಿಪಿ (OTP) ಬರುವುದು. ಬಂದ ಓಟಿಪಿ (OTP) ನಮೂದಿಸಬೇಕು. ನಂತ್ರ, ವೆರಿಪೈ (Verify) ಅಂತಾ ಮಾಡಬೇಕು.
* ಇದಾದ ಬಳಿಕ ನಿಮ್ಮ ಎಪಿಕ್ (Epic) ನಂಬರ್ ನಮೂದಿಸಬೇಕು. ತರುವಾಯ (ಚುನಾವಣಾ ಗುರುತಿನ ಚೀಟಿ ನಂಬರ್) ಮತ್ತು ನಿಮ್ಮ ರಾಜ್ಯ ಆಯ್ಕೆ (State Select) ಮಾಡಿ. ನಿಮ್ಮ ಆಧಾರ್ ನಂಬರ್ ಮತ್ತು ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು.
* ನಿಮ್ಮ ಬಳಿ ಇ-ಮೇಲ್ ಐಡಿ (Email ID) ಇದ್ದರೆ ನಮೂದಿಸಿ. ಇರದಿದ್ದರೆ ಹಾಗೆ ಖಾಲಿ ಬಿಡಿ. ನಿಮ್ಮ ಗ್ರಾಮದ ಹೆಸರನ್ನು ನಮೂದಿಸಿ ಪ್ರೊಸೀಡ್ ಆಪ್ಷನ್ (Proceed Option) ಒತ್ತಿ. ನಂತರ ಕನ್ಫರಮ್ ಬಟನ್ Confirm button ಒತ್ತಿ. ಬಳಿಕ ಸಕ್ಸಸ್ಫುಲ್ (Successfully) ಅಂತಾ ಒಂದು ರೆಫರೆನ್ಸ್ ನಂಬರ್ (ref number) ಬರುತ್ತದೆ.
ಈ ರೀತಿ ಮನೆಯಲ್ಲೇ ಕುಳಿತು ತಮ್ಮ ಕುಟುಂಬದ ಮತ್ತು ತಮ್ಮ ಸಂಬಂಧಿಕರ ಮತದಾರರ ಗುರುತಿನ ಚೀಟಿಗೆ ಆಧಾರ್ ನಂಬರ್ ಲಿಂಕ್ ಮಾಡಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.