ಎಷ್ಟೋ ಜನ ತಾವು ಬರೀ ಯೋಚನೆ ಮಾಡುತ್ತಿದ್ದೀವಿ ಎಂದುಕೊಳ್ಳುತ್ತಾರೆ. ವಾಸ್ತವವಾಗಿ ಅವರು ಅತಿಯಾದ ಯೋಚನೆ ಮಾಡುತ್ತಿರುತ್ತಾರೆ ಎಂದು ಅವರಿಗೇ ತಿಳಿದಿರುವುದಿಲ್ಲ. ಹೀಗೆ ಅತಿಯಾಗಿ ಯೋಚನೆ ಮಾಡುತ್ತಿರುವುದನ್ನು ಕಂಡು ಹಿಡಿಯುವುದು ಹೇಗೆ, ಅತಿಯಾದ ಯೋಚನೆ ಮಾಡಿದರೆ ಏನೆಲ್ಲಾ ತೊಂದರೆಗಳಾಗುತ್ತವೆ ಹಾಗು ಅದರಿಂದ ಆಚೆ ಬರೋದು ಹೇಗೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಯೋಚನೆ ಮಾಡುವುದ ಸರಿ. ಆದರೆ ಅತಿಯಾಗಿ ಯೋಚನೆ ಮಾಡುವುದು ಎಷ್ಟು ಸರಿ ನೀವೇ ಹೇಳಿ..? ಅತಿಯಾಗಿ ಯೋಚನೆ ಮಾಡಿದರೆ ಮಾನಸಿಕ ಹಾಗು ದೈಹಿಕ ಆರೋಗ್ಯಕ್ಕೆ ತೀರಾ ಹಾನಿಕಾರಕ. ತೀರಾ ಹೆಚ್ಚು ಆಲೋಚನೆ ಮಾಡಿದರೆ ನಮ್ಮ ಸುತ್ತಮುತ್ತ ನೆಗೆಟಿವ್ ತರಂಗಗಳು ಹೆಚ್ಚಾಗುತ್ತವೆ
ಇನ್ನು ನೀವು ಅತಿಯಾಗಿ ಆಲೋಚನೆ ಮಾಡುತ್ತಿದ್ದೀರಿ ಎಂದು ನಿಮಗೆ ನೀವೇ ಪರೀಕ್ಷಿಸಿಕೊಳ್ಳುವುದು ಹೇಗೆಂದರೆ, ಅದು ಬರೀ ಯೋಚನೆ ಎಂದರೆ ಅದು ಅಲ್ಪ ಸಮಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆ ಯೋಚನೆ ಹಾಗೆ ಬಂದು ಹೀಗೆ ಹೋಗಿರುತ್ತದೆ. ಇನ್ನು ಅತಿಯಾದ ಯೋಚನೆ ಎಂದರೆ ನಿಮ್ಮ ಗಮನಕ್ಕೆ ಬರದೇ ನೀವು ಯಾವಾಗಲೂ ಅದೇ ಒಂದೇ ವಿಷಯದ ಬಗ್ಗೆ ಸದಾ ಆಲೋಚನೆ ಮಾಡುತ್ತಿರುತ್ತೀರಿ. ಸದಾ ಕಾಲ ಅದೇ ಯೋಚನೆಯಲ್ಲಿರುತ್ತೀರಿ.
ಹೀಗೆ ಅತಿಯಾಗಿ ಆಲೋಚನೆ ಮಾಡಿದರೆ ದೇಹದ ಮೇಲಾಗುವ ದುಷ್ಪರಿಣಾಮಗಳೆಂದರೆ ರಾತ್ರಿ ಬೇಗನೆ ನಿದ್ರೆ ಬರುವುದಿಲ್ಲ. ನಿದ್ರೆ ಬಂದರೂ ಮಧ್ಯೆ ಮಧ್ಯೆ ಎಚ್ಚರವಾಗುತ್ತಿರುತ್ತದೆ. ಒಟ್ಟಾರೆ ನಿದ್ರಾಹೀನತೆ ಸಮಸ್ಯೆಯಿಂದ ನೀವು ಬಳಲುತ್ತಿರುತ್ತೀರಿ. ಅತಿಯಾಗಿ ಯೋಚನೆ ಮಾಡಿದರೆ ಪಂಚೇದ್ರಿಯಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದ ದೇಹದ ಆರೋಗ್ಯ ಕೂಡ ಹಾಳಾಗುತ್ತದೆ.
ಅಲ್ಲದೆ ಅತಿಯಾಗಿ ಆಲೋಚನೆ ಮಾಡಿದರೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅವರ ಕ್ರಿಯಾಶೀಲತೆ ಕುಂದುತ್ತಾ ಹೋಗುತ್ತದೆ. ಯಾವುದೆ ಕೆಲಸ ಮಾಡಲು ಮನಸ್ಸು ಇರುವುದಿಲ್ಲ. ಇನ್ನು ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಇವರು ಎಡವುದು ಹೆಚ್ಚು.
ಈ ನಕಾರಾತ್ಮಕ ಯೋಚನೆಯಿಂದ ಹೇಗೆ ಹೊರಬರಬೇಕೆಂದರೆ,
ನಿಮ್ಮ ನಿಮ್ಮ ಮನಸ್ಸನ್ನು ನೀವು ಶಾಂತಗೊಳಿಸಬೇಕು. ಇದಕ್ಕೆ ಧ್ಯಾನ ಮಾಡುವ ಅಭ್ಯಾಸ ಮಾಡಬೇಕು.
ಬೆಳಗ್ಗೆ ಬೇಗ ಎದ್ದು ಉಸಿರಾಕ್ಕೆ ಸಂಬಂಧಿಸಿದ ವ್ಯಾಯಾಮ ಪ್ರಾಣಾಯಾಮಗಳನ್ನು ಮಾಡಿ. ಏಕಾಗ್ರತೆ ಹೆಚ್ಚಿಸುವಂತಹ ಧ್ಯಾನ ಮಾಡಿ.
ನಿಮ್ಮ ಮನಸ್ಸು, ಬುದ್ಧಿಯನ್ನು ನಿಯಂತ್ರಿಸಿಕೊಂಡು ಜೀವನದ ವಾಸ್ತವವನ್ನು ತಿಳಿದುಕೊಂಡು ಅದನ್ನು ಒಪ್ಪಿಕೊಳ್ಳಿ.
ನಕಾರಾತ್ಮಕ ಯೋಜನೆಗಳನ್ನು ತೆಗೆದು ಹಾಕಿ ಸದಾ ಒಳ್ಳೆಯ ಯೋಜನೆಗಳನ್ನು ಮಾಡಿ.
ಪೇಟಿಂಗ್, ಮ್ಯೂಸಿಕ್, ಎಕ್ಸ್‌ಸೈಸ್, ಕ್ರೀಡೆ, ಆಟಗಳಂತಹ ಬೇರೆ ಬೇರೆ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆದು. ಅವರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ.
ಸದಾ ಏಕಾಂಗಿರದೇ ಸಂಘ ಜೀವಿಗಳಾಗಿ.
ಮಾನಸಿಕ ತಜ್ಞರನ್ನು ಭೇಟಿ ಮಾಡಿ ಸೂಕ್ತ ಸಲಹೆ, ಚಿಕಿತ್ಸೆ ಪಡೆಯಿರಿ.