ಬೆಂಗಳೂರು: ಮಾರಾಟ ಪ್ರಮಾಣಪತ್ರ ನೋಂದಣಿಯ ಅನುಸಾರ ಬ್ಯಾಂಕ್ ಹೆಸರಿಗೆ ಇ-ಖಾತಾವನ್ನು ಹೇಗೆ ಪಡೆದುಕೊಳ್ಳಬಹುದು ಎನ್ನುವ ಬಗ್ಗೆ ಮಾಹಿತಿ ಮುಂದಿದೆ ಓದಿ.
ಬ್ಯಾಂಕ್ ಹೆಸರಿಗೆ ಇ-ಖಾತಾ ಪಡೆದುಕೊಳ್ಳೋದಕ್ಕೆ ಇಚ್ಚಿಸುವವರು https://bbmpeaasthi.karnataka.gov.in ಜಾಣಕ್ಕೆ ಭೇಟಿ ನೀಡಬೇಕು. ಆ ನಂತ್ರ ನಾಗರಿಕ ವಿಧಾನದಲ್ಲಿ ಲಾಗಿನ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬೇಕು.
ಪಿಐಡಿ ಸಂಖ್ಯೆಯನ್ನು ಆಯ್ಕೆ ಮಾಡಿ, ಅಂದರೆ ಪಿಐಡಿ ಅಥವಾ ಹೆಸರು ಬಳಸಿಕೊಂಡು ಆಯ್ಕೆಗಳ ಆಧಾರದ ಮೇಲೆ ಆಸ್ತಿಯನ್ನು ಗುರುತಿಸಿ ಮತ್ತು ಅರ್ಜಿ ಸಲ್ಲಿಸಲು ಮುಂದುವರೆಯಿರಿ.
ತೆರಿಗೆ ಪಾವತಿಸಿದ ರಶೀದಿ ವಿವರ ಒದಗಿಸಿ ಅಂದರೆ ಆಸ್ತಿಗೆ ಸಂಬಂಧಿಸಿದ ಆಸ್ತಿ ತೆರಿಗೆ ಎಸ್ ಎ ಎಸ್ ಸಂಖ್ಯೆಯನ್ನು ನಮೂದಿಸಬೇಕು.
ಈ ಬಳಿಕ ಮಾರಾಟ ಪ್ರಮಾಣಪತ್ರ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ. ಅಂದರೆ ಮಾರಾಟ ಪ್ರಮಾಣಪತ್ರದ ಆಧಾರದ ಮೇಲೆ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳ ಹೆಸರನ್ನು ದಾಖಲಿಸಲು Do not have the registered deed ಆಯ್ಕೆ ಮಾಡಿ.
ಈ ಎಲ್ಲಾ ಹಂತದ ಬಳಿಕ ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ ನಿಮ್ಮ ಬ್ಯಾಂಕ್ ಹೆಸರಿಗೆ ಇ-ಖಾತಾವನ್ನು ಪಡೆದುಕೊಳ್ಳಬಹುದಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 080-68265316ಗೆ ಕರೆ ಮಾಡಿ ಪಡೆಯಬಹುದಾಗಿದೆ.
‘BPL, APL ಕಾರ್ಡ್’ದಾರರೇ ಗಮನಿಸಿ: ಜ.31 ‘e-KYC’ಗೆ ಲಾಸ್ಟ್ ಡೇಟ್, ಮಾಡಿಸದಿದ್ರೆ ಬರಲ್ಲ ರೇಷನ್