ಬೆಂಗಳೂರು: ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿ ಸೌಲಭ್ಯವನ್ನು ಜಾತಿವಾರು ಕಲ್ಪಿಸಲಾಗುತ್ತಿದೆ. ಪರಿಶಿಷ್ಟರಿಗೆ ಶೇ.18ರಷ್ಟು ಮೀಸಲಾತಿ ಕಲ್ಪಿಸಿದ್ರೇ, ಹಿಂದುಳಿದ ವರ್ಗದವರಿಗೆ ಶೇ.32ರಷ್ಟು ಕಲ್ಪಿಸಲಾಗುತ್ತಿದೆ. ಹಾಗಾದ್ರೇ ಯಾರಿಗೆ ಎಷ್ಟು ಮೀಸಲಾತಿ ಅನ್ನೋ ಬಗ್ಗೆ ಮುಂದೆ ಓದಿ.
ಪರಿಶಿಷ್ಟ ಜಾತಿ
ಈ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಹೊಲೆಯರು, ಮಾದಿಗ, ಬೋವಿ, ಲಂಬಾಣಿ, ಸಮಗಾರ, ಕೊರಚ, ಕೊರಮ ಸೇರಿದಂತೆ 101 ಸ್ಪೃಶ್ಯ ಮತ್ತು ಅಸ್ಪೃಶ್ಯ ಜಾತಿಗಳಿದ್ದಾವೆ. ಇಂತಹ ಪರಿಶಿಷ್ಟ ವರ್ಗದವರಿಗೆ ಶೇ.15ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗುತ್ತಿದೆ.
ಪರಿಶಿಷ್ಟ ಪಂಗಡ
ಈ ಪರಿಶಿಷ್ಟ ಪಂಗಡದಲ್ಲಿ ಪ್ರಮುಖವಾಗಿ ಬರೋ ಜಾತಿಗಳೆಂದರೇ ನಾಯಕ, ವಾಲ್ಮೀಕಿ ಹಾಗೂ ಆದಿವಾಸಿಗಳು. ಇವರು ಸೇರಿದಂತೆ 56 ಜಾತಿಗಳು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿದ್ದಾವೆ. ಇವರಿಗೆ ಶೇ.03ರಷ್ಟು ಮೀಸಲಾತಿಯನ್ನು ನೀಡಲಾಗಿದೆ.
ಹಿಂದುಳಿದ ವರ್ಗ, ಕೆಟಗರಿ-1
ಪ್ರಮುಖವಾಗಿ ಬರೋ ಹಿಂದುಳಿದ ವರ್ಗಗಗಳ ಜಾತಿಗಳೆಂದ್ರೇ ಉಪ್ಪಾರರು, ಗೊಲ್ಲರು, ಪಿಂಜಾರ ಸೇರಿದಂತೆ 95 ಜಾತಿಗಳಿದ್ದಾವೆ. ಈ ವರ್ಗದವರಿಗೆ ಶೇ.4ರಷ್ಟು ಮೀಸಲಾತಿ ನೀಡಲಾಗಿದೆ.
ಕೆಟಗರಿ 2ಎ
ಕುರುಬ, ಈಡಿಗ, ವಿಶ್ವಕರ್ಮ, ನಾಮಧಾರಿ, ದೇವಾಡಿಗ, ಮಡಿವಾಳ, ಕುಂಬಾರ, ದೇವಾಂಗ, ತಿಗಳ, ಕ್ಷೌರಿಕ, ಬಿಲ್ಲವ, ಪೂಜಾರಿ, ದೀವರ, ಕಂಚುಗಾರ, ನಾಡವ, ಸವಿತಾ ಸೇರಿದಂತೆ 102 ಜಾತಿಗಳು ಈ ಕೆಟಗರಿ 2ಎ ನಲ್ಲಿ ಬರುತ್ತವೆ. ಇವರಿಗೆ ಶೇ.15ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
ಕೆಟಗರಿ 2ಬಿ
ಮುಸ್ಲೀಂ ಮತ್ತು ಒಳಜಾತಿಗಳು ಕೆಟಗರಿ 2ಬಿನಲ್ಲಿ ಬರುತ್ತವೆ. ಇವರಿಗೆ ಶೇ.4ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
ಕೆಟಗರಿ 3ಎ
ಒಕ್ಕಲಿಗ, ರೆಡ್ಡಿ, ಬಂಟ, ಬಲಿಜ, ಕೊಡವ ಸೇರಿದಂತೆ 12 ಪ್ರಮುಖ ಜಾತಿಗಳು ಕೆಟಗರಿ 3ಎನಲ್ಲಿ ಬರುತ್ತವೆ. ಇವರಿಗೆ ಶೇ.4ರಷ್ಟು ಮೀಸಲಾತಿ ನೀಡಲಾಗುತ್ತಿದೆ.
ಕೆಟಗರಿ 3ಬಿ
ವೀರಶೈವ ಲಿಂಗಾಯತ ಮತ್ತು ಈ ಸಮುದಾಯಕ್ಕೆ ಸೇರಿದ ಎಲ್ಲ ಉಪಜಾತಿಗಳು ಬರುತ್ತವೆ. ಇವರಿಗೆ ಶೇ.5ರಷ್ಟು ಮೀಸಲಾತಿಯನ್ನು ನೀಡಲಾಗುತ್ತಿದೆ.
LIC Share Rises: ಮೊದಲ ಬಾರಿಗೆ 1000 ರೂ ದಾಟಿದ ಎಲ್ಐಸಿ ಮಾರುಕಟ್ಟೆ ಬಂಡವಾಳ
ನಿಮ್ಮಿಂದ ಆಡಳಿತ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೊರಡಿ : ಸಿಎಂ ವಿರುದ್ಧ ಬಿಜೆಪಿ ವಾಗ್ದಾಳಿ